ಉಡುಪಿ(ಏ.11): ಜಿಲ್ಲೆಯನ್ನು ಕೊರೋನಾ ಹರಡುವ ಹಳದಿ (ನಿಗಾ) ವಲಯ ಎಂದು ಘೋಷಿಸಲಾಗಿದ್ದು, ಜಿಲ್ಲೆಯ ಎಲ್ಲ ಗಡಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜಿಲ್ಲೆಯೊಳಗೆ ಸೀಲ್‌ಡೌನ್‌ ಮಾಡಿಲ್ಲ, ಇಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಮುಂದುವರಿಯುತ್ತದೆ.

ಆದರೆ ಜಿಲ್ಲೆಯ ಅಕ್ಕಪಕ್ಕದ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಕೆಂಪು ವಲಯಗಳಲ್ಲಿ ಗುರುತಿಸಲಾಗಿದ್ದು, ಅಲ್ಲಿಂದ ಕೊರೋನಾ ಉಡುಪಿ ಜಿಲ್ಲೆಯೊಳಗೆ ಹರಡದಂತೆ ಜಿಲ್ಲೆಯ ಗಡಿಗಳನ್ನು ಮಾತ್ರ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ಹೇಳಿದ್ದಾರೆ.

ಔಷಧಿಗಾಗಿ 16 ಕಿ.ಮೀ. ನಡೆದು ಬಂದ 70ರ ಅಜ್ಜಿ !

ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಉಡುಪಿಗೆ ಹೊಂದಿಕೊಂಡಿರುವ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿಗಳನ್ನೂ ಸೀಲ್‌ಡೌನ್‌ ಮಾಡಲಾಗಿದೆ. ಈ ಜಿಲ್ಲೆಗಳಿಂದ ಉಡುಪಿ ಜಿಲ್ಲೆಯೊಳಗೆ ಅಥವಾ ಜಿಲ್ಲೆಯಿಂದ ಹೊರಗೆ ವಾಹನಗಳು ಅಥವಾ ಜನ ಸಂಚಾರವನ್ನು ಕಟ್ಟುನಿಟ್ಟಾಗಿ ತಡೆಯಲಾಗಿದೆ. ಯಾವ ಪಾಸ್‌ಗಳಿಗೂ ಅವಕಾಶ ಇಲ್ಲ. ಯಾರ ಮೂಲಕ ಒತ್ತಡ ತಂದರೂ ಸೀಲ್‌ಓಪನ್‌ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಖಡಾಖಂಡಿತವಾಗಿ ತಿಳಿಸಿದ್ದಾರೆ.

ಮರುವಾಯಿ ಮೀನು ಹಿಡಿದ ಯುವಕರ 11 ಬೈಕ್ ಜಪ್ತಿ

ಜಿಲ್ಲೆಯ ಎಲ್ಲ ಗಡಿಗಳನ್ನು ಸಂಪೂರ್ಣ ಸೀಲ್‌ಡೌನ್‌ ಮಾಡುವ ಬಗ್ಗೆ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲೆಯ ಐದು ಶಾಸಕರು ಮತ್ತು ಹಿರಿಯ ಅಧಿಕಾರಿಗಳ ಜೊತೆ ಜಿಲ್ಲಾಕಾರಿ ಸಭೆ ನಡೆಸಿ ನಂತರ ಈ ತೀರ್ಮಾನವನ್ನು ಕೈಗೊಂಡಿದ್ದಾರೆ.