ಶ್ರೀಶೈಲಕ್ಕೆ ಪಾದಯಾತ್ರೆ: ಕೀಲು ಕುದುರೆ ನಡಿಗೆಯಲ್ಲೇ ಮಲ್ಲಿಕಾರ್ಜುನ ದರ್ಶನ..!
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಶಶಿಕಾಂತ ಮಡಿವಾಳರ ಹಾಗೂ ನಾಗರಾಜ ಸತ್ತಿ ಎಂಬುವರೇ ಕೀಲು ಕುದುರೆ ಕಟ್ಟಿಕೊಂಡ ಹೊರಟ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಪರಮ ಭಕ್ತರು. ಕಾಲಿಗೆ ಕೀಲು ಕುದುರೆಯನ್ನು ಕಟ್ಟಿಕೊಂಡು ತನ್ನ ಊರಿನಿಂದ ಹೊರಟ ಯುವಕರಿಗೆ ದಾರಿಯುದ್ದಕ್ಕೂ ಬರುವ ಪ್ರತಿ ಗ್ರಾಮಗಳಲ್ಲಿ ಅತ್ಯಂತ ಪ್ರೀತಿ, ವಿಶ್ವಾಸದಿಂದ ಬರಮಾಡಿಕೊಂಡು ಭಕ್ತಿ ಸೇವೆ ಮಾಡುವ ಮೂಲಕ ಬೀಳ್ಕೊಡುತ್ತಿದ್ದಾರೆ.
ಸಿದ್ದಯ್ಯ ಹಿರೇಮಠ
ಕಾಗವಾಡ(ಮಾ.28): ಭಕ್ತಿ ದಾರಿಯಲ್ಲಿ ನಡೆದರೇ ಬದುಕಿಗೆ ಸನ್ಮಾರ್ಗದ ಶಕ್ತಿ ಲಭಿಸುವುದು ಎನ್ನುವುದು ಆಸ್ತಿಕರ ನಂಬಿಕೆ. ಈ ನಂಬಿಕೆಯಿಂದಲೇ ಸುಮಾರು 750 ಕಿಮೀ ವರೆಗೆ ಕಾಲಿಗೆ ಕೀಲು ಕುದುರೆ ಕಟ್ಟಿಕೊಂಡು ತಮ್ಮ ಸ್ವಗ್ರಾಮದಿಂದ ಶ್ರೀಶೈಲ ಚನ್ನಮಲ್ಲಿಕಾರ್ಜುನ ದೇವರ ದರ್ಶನಕ್ಕೆ ಇಬ್ಬರು ಯುವಕರು ಹೊರಟಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಳ್ಳಿಗೇರಿ ಗ್ರಾಮದ ಶಶಿಕಾಂತ ಮಡಿವಾಳರ ಹಾಗೂ ನಾಗರಾಜ ಸತ್ತಿ ಎಂಬುವರೇ ಕೀಲು ಕುದುರೆ ಕಟ್ಟಿಕೊಂಡ ಹೊರಟ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಪರಮ ಭಕ್ತರು. ಕಾಲಿಗೆ ಕೀಲು ಕುದುರೆಯನ್ನು ಕಟ್ಟಿಕೊಂಡು ತನ್ನ ಊರಿನಿಂದ ಹೊರಟ ಯುವಕರಿಗೆ ದಾರಿಯುದ್ದಕ್ಕೂ ಬರುವ ಪ್ರತಿ ಗ್ರಾಮಗಳಲ್ಲಿ ಅತ್ಯಂತ ಪ್ರೀತಿ, ವಿಶ್ವಾಸದಿಂದ ಬರಮಾಡಿಕೊಂಡು ಭಕ್ತಿ ಸೇವೆ ಮಾಡುವ ಮೂಲಕ ಬೀಳ್ಕೊಡುತ್ತಿದ್ದಾರೆ.
ಟಿಟಿಡಿ ಅಧಿಕಾರಿ ವಿರುದ್ಧ ನಿಧಿ ಕಳ್ಳತನದ ಆರೋಪ ಮಾಡಿದ ತಿರುಪತಿ ಅರ್ಚಕರ ವಿರುದ್ಧವೇ ಕೇಸ್
ಶಶಿಕಾಂತಗೆ 3ನೇ, ನಾಗವಾರಗೆ ಮೊದಲನೆಯದ್ದು:
ಶಶಿಕಾಂತ ಮಡಿವಾಳರು ಕಳೆದ 3 ವರ್ಷಗಳಿಂದ ಹೋಗುತ್ತಿದ್ದರೇ, ನಾಗರಾಜ ಸತ್ತಿಯವರು ಇದೇ ಮೊದಲ ಬಾರಿ ತಮ್ಮ ಸ್ವಗ್ರಾಮ ಬಳ್ಳಿಗೇರಿ ಗ್ರಾಮದಿಂದ ಆಂಧ್ರಪ್ರದೇಶದ ಶ್ರೀಶೈಲದವರೆಗೆ ಕೀಲು ಕುದುರೆ ಹರಕೆ ಹೊತ್ತು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.
750 ಕಿಮೀ ದೂರದ ದಾರಿ:
ಬಳ್ಳಿಗೇರಿಯಿಂದ ಶ್ರೀಶೈಲ ಸುಮಾರು 750 ಕಿಮೀ ಅಂತರವಿದೆ. ಬಳ್ಳಿಗೇರಿ, ಅಡಹಳ್ಳಿ, ಐಗಳಿ, ಮನಗೂಳಿ, ಬಸವನ ಬಾಗೇವಾಡಿ, ತಾಳಿಕೋಟಿ, ದೇವದುರ್ಗ, ರಾಯಚೂರ ಮಂತ್ರಾಲಯ, ಕರ್ನೂಲ್, ಮಾರ್ಗವಾಗಿ 12 ದಿನಗಳವರೆಗೆ ನಡೆದು ಶ್ರೀಶೈಲ ಯುಗಾದಿಯ ದಿನದಂದು ಶ್ರೀಶೈಲ ತಲುಪುತ್ತಾರೆ. ಪಾದಯಾತ್ರೆಯ ಮೂಲಕ ತೆರಳುವಾಗ ಅಲ್ಲಲ್ಲಿ ಭಕ್ತಾದಿಗಳು ಶ್ರೀಶೈಲ ಮಲ್ಲಿಕಾರ್ಜುನನ ದರ್ಶನಕ್ಕೆ ತೆರಳುವವರಿಗೆ ಸ್ನಾನ, ಊಟ ಹಾಗೂ ಉಪಹಾರದ ವ್ಯವಸ್ಥೆ ಮಾಡುವುದರೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
50 ವರ್ಷದ ಮಹಾಹೋರಾಟದ ಬಳಿಕ ಆಂಧ್ರದ 2ನೇ ಶ್ರೀಮಂತ ದೇವಸ್ಥಾನಕ್ಕೆ ಸಿಕ್ತು ಭೂಮಿ!
ಮಲ್ಲಿಕಾರ್ಜುನ ದರ್ಶನಕ್ಕೆ ಲಕ್ಷಾಂತರ ಭಕ್ತರು
ಪಾರಂಪರಿಕವಾಗಿ ಶ್ರೀಶೈಲದಲ್ಲಿರುವ ಚನ್ನಮಲ್ಲಿಕಾರ್ಜುನ ಹಾಗೂ ಭ್ರಮರಾಂಭಿಕಾ ದೇವಿಯ ದರ್ಶನ ಪಡೆಯಲು ಹೋಗುವ ಭಕ್ತರು ಕರ್ನಾಟಕ ಹಾಗೂ ಮಹಾರಾಷ್ಟ್ರದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಹೋಗುತ್ತಾರೆ. ಕೆಲವರಿಗೆ ತಮ್ಮ ಜೀವನದಲ್ಲಿ ಏನಾದರು ತೊಂದರೆ ಬಂದಾಗ ಶ್ರೀಶೈಲ ಮಲ್ಲಿಕಾರ್ಜುನನ ಮೊರೆ ಹೋಗಿ ನನ್ನ ಕಷ್ಟವನ್ನು ದೂರ ಮಾಡು ಭಗವಂತ ಎಂದು ಬೇಡಿಕೊಂಡು ಹರಕೆ ತೀರಿಸಲು ಹೋಗುವುದುಂಟು. ಯುಗಾದಿಯಂದೇ ಶ್ರೀಶೈಲದಲ್ಲಿ ಇರುವಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಲಕ್ಷಾಂತರ ಭಕ್ತಾದಿಗಳು ಪ್ರತಿ ವರ್ಷ ಊರಿಗೆ ಊರೆ ಹೋಗುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದಿರುವುದು ವಾಡಿಕೆ.
ದೈವ ಭಕ್ತಿಗೆ ಕೊನೆ ಹಾಗೂ ಬೆಲೆ ಕಟ್ಟಲಾಗದು. ತನ್ನ ಆರಾಧ್ಯ ದೈವವನ್ನು ಕಂಡು ದರ್ಶನ ಪಡೆಯುವ ಹಂಬಲವು ಭಕ್ತರಲ್ಲಿ ಹುದುಗಿರುತ್ತದೆ. ಅಂತಹ ಭಕ್ತರಲ್ಲಿಯೇ ಅಪರೂಪದ ಭಕ್ತ ಹಾಗೂ ಮಲ್ಲಿಕಾರ್ಜುನ ದೇವರ ಭಕ್ತರಾಗಿರುವ ಬಳ್ಳಿಗೇರಿ ಗ್ರಾಮದ ಯುವಕರಿಬ್ಬರೂ ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದು ಪಾದಯಾತ್ರಿಗಳ ಸೇವಾರ್ಥಿ ಡಾ.ಬರಮಣ್ಣ ಕಾಮಣ್ಣವರ ತಿಳಿಸಿದ್ದಾರೆ.