ತೆರೆದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತೇವಾಸಾ ತಾಲೂಕಿನಲ್ಲಿ ನಡೆದಿದೆ.
ನಾಸಿಕ್ (ಏ.11): ತೆರೆದ ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ತೇವಾಸಾ ತಾಲೂಕಿನಲ್ಲಿ ನಡೆದಿದೆ.
ಮಂಗಳವಾರ (ಏಪ್ರಿಲ್ 9) ನಡೆದ ದುರಂತ ಘಟನೆಯಲ್ಲಿ, ರೈತರೊಬ್ಬರು ಬಯೋಗ್ಯಾಸ್ ಗೊಬ್ಬರಕ್ಕಾಗಿ ನಿರ್ಮಿಸಿದ್ದ ತೆರೆದ ಬಾವಿಗೆ ಬೆಕ್ಕು ಬಿದ್ದಿದ್ದು, ಅದನ್ನು ರಕ್ಷಿಸಲು ಹೋದ ಒಂದೇ ಕುಟುಂಬರ ಐವರು ಬಾವಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ಬೆಕ್ಕನ್ನು ರಕ್ಷಿಸುವ ಸಲುವಾಗಿ ಒಬ್ಬರು ಬಾವಿಗೆ ಇಳಿದಿದ್ದು, ಅವರನ್ನು ರಕ್ಷಸಲು ಇನ್ನೊಬ್ಬರಂತೆ ಐದು ಮಂದಿಯೂ ಬಾವಿಯ ಕೆಸರಲ್ಲಿ ಸಿಲುಕಿದ್ದಾರೆ. ತಡರಾತ್ರಿ ವೇಳೆಗೆ ಐದು ಮೃತದೇಹಗಳನ್ನು ಬಾವಿಯಿಂದ ಹೊರತೆಗೆಯಲಾಗಿದ್ದು ಅದರಲ್ಲಿ ಒಬ್ಬರನ್ನು ಗ್ರಾಮಸ್ಥರು ರಕ್ಷಿಸಿ ಹತ್ತಿರದ ಆಸ್ಪತ್ರೆ ದಾಖಲಿಸಿದ್ದಾರೆ.
ಕೆರೆಯಲ್ಲಿ ಅಣ್ಣನ ಮಗ ಬಿದ್ದನೆಂದು ರಕ್ಷಿಸಲು ಹೋದ ಚಿಕ್ಕಪ್ಪನೂ ಸಾವು
