ಕಾಗಲವಾಡಿಯಲ್ಲಿ ಮನೆಮಾಲೀಕೆ ಸಾಲ ತೀರಿಸದೆ ಮನೆ ಜಪ್ತಿಯಾಗಿದೆ. ಬಾಡಿಗೆದಾರರಾದ ಎರಡು ಕುಟುಂಬಗಳು ಬೀದಿಪಾಲಾಗಿದ್ದಾರೆ. ಬಟ್ಟೆಬರೆ, ದಿನಸಿ ಸಾಮಾನು ಮನೆಯೊಳಗೆ ಲಾಕ್ ಆಗಿದೆ. ಮಾಲೀಕೆ ಹಣ ಹಿಂದಿರುಗಿಸುವ ಭರವಸೆ ನೀಡಿದ್ದಾರೆ. ಬಾಡಿಗೆದಾರರ SSLC ಮುಗಿಸಿದ ಮಗಳ ದಾಖಲೆಗಳು ಸಿಗದೆ PU ಪ್ರವೇಶಕ್ಕೆ ತೊಂದರೆಯಾಗಿದೆ.

ವರದಿ : ಪುಟ್ಟರಾಜು. ಆರ್. ಸಿ ಏಷ್ಯಾನೆಟ್ ಸುವರ್ಣ ನ್ಯೂಸ್

ಚಾಮರಾಜನಗರ: ಅವ್ರು ಕೂಲಿ ನಾಲಿ ಮಾಡಿ ಬದುಕುವ ಕೂಲಿ ಕಾರ್ಮಿಕರು. ಇರೋಕೆ ಒಂದು ಸೂರು ಬೇಕಂತ ದುಡಿದ ಹಣದಲ್ಲಿ ಅಲ್ಪ ಸ್ವಲ್ಪ ಉಳ್ಸಿ ಮನೆನಾ ಲೀಜ್ ಗೆ ಪಡೆದಿದ್ರು. ಆದ್ರೆ ಮನೆ ಮಾಲೀಕೆ ಮಾಡಿದ ಎಡವಟ್ಟಿಗೆ ಈಗ ಬೀದಿಗೆ ಬೀಳುವಂತಾಗಿದೆ. ಮನೆಗೆ ಬೀಗ ಜಡಿದು ಸೀಲ್ ಹಾಕಿರುವುದು. ಮನೆಯ ಹೊರಾಂಗಣದಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಟ್ಟೆ ಬರೆಗಳು. ಮತ್ತೊಂದೆಡೆ ಗ್ಯಾಸ್ ಸ್ಟೌವ್ ಇಟ್ಟು ಆಹಾರ ತಯಾರಿ ಮಾಡುತ್ತಿರುವುದು. ತೂತು ಬಿದ್ದಿರೊ ಛಾವಣಿ ಕನಿಷ್ಟ ಶೌಚಕ್ಕೂ ಹೋಗಲಾಗದ ಪರಿಸ್ಥಿತಿ.. ಅದ್ಯಾರ ಜೊತೆಗೆ ಮೊಬೈಲ್ ನಲ್ಲಿ ವಾಗ್ವಾದಕ್ಕೆ ಬಿದ್ದಿರೊ ಮಹಿಳೆ.. ಕಾಂಪೌಂಡ್ ಮೇಲೆ ಅಂಟಿಸಿರೊ ನೋಟೀಸ್ ಗೋಡೆ ಈ ಮನೆಯನ್ನ ನ್ಯಾಯಾಲಯದ ಆದೇಶದಂತೆ ಜಪ್ತಿ ಮಾಡಿದ್ದೇವೆ ಎಂಬ ಬರಹ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಚಾಮರಾಜನಗರ ಜಿಲ್ಲೆ ಚಾಮರಾಜನಗರ ತಾಲೂಕಿನ ಕಾಗಲವಾಡಿ ಗ್ರಾಮದಲ್ಲಿ.. ಹೌದು ಮನೆ ಓನರ್ ಮಾಡಿದ ಎಡವಟ್ಟಿಗೆ ಏನು ತಪ್ಪು ಮಾಡದ ಅಮಾಯಕ ಎರೆಡು ಕುಟುಂಬವೀಗ ಬೀದಿಗೆ ಬಿದ್ದಿದೆ. 

ಆಗಿದ್ದಿಷ್ಟೇ ಮನೆ ಒಡತಿ ಕಮಲಮ್ಮ ಕಳೆದ ಮೂರು ವರ್ಷದ ಹಿಂದೆ ಮೂರುವರೆ ಲಕ್ಷ ಹಣವನ್ನ ಜನ ಮೈಕ್ರೋ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ರು. ಸಾಲ ಪಡೆದ ಮನೆಯನ್ನ ಚಂದ್ರು ಹಾಗೂ ಶಿವಮ್ಮರಿಗೆ ತಲಾ 50 ಸಾವಿರ ಹಣಕ್ಕೆ ಬೋಗ್ಯಕ್ಕೆ ನೀಡಿದ್ರು. ಆದ್ರೆ ಕಮಲಮ್ಮ ಮಾತ್ರ ಪಡೆದ ಸಾಲಕ್ಕೆ ಸರಿಯಾಗಿ ಕಂತು ಕಟ್ಟಿಲ್ಲ ಇತ್ತ ಬಡ್ಢಾಯೂ ತೆತ್ತಿಲ್ಲ. ಸಾಲ ಕೊಟ್ಟ ಬ್ಯಾಂಕ್ ನವರು ನೋಟೀಸ್ ಮೇಲೆ ನೋಟಿಸ್ ಜಾರಿ ಮಾಡಿದ್ದಾರೆ. ಯಾವಾಗ ಮನೆ ಓನರ್ ಇದಕ್ಕೂ ಕ್ಯಾರೆ ಅಂತ ಅನ್ನಲಿಲ್ವೊ ಸೀದಾ ನ್ಯಾಯಾಲಯದ ಮೊರೆ ಹೋಗಿದ್ದಾರೆ ಕೋರ್ಟ್ ಪರ್ಮಿಷನ್ ತಗೊಂಡು ನಿನ್ನೆ ಎರೆಡು ಮನೆಯನ್ನು ಜಪ್ತಿ ಮಾಡಿ ಹೋಗಿದ್ದಾರೆ. ಇತ್ತ ಬಾಡಿಗೆದಾರರ ಬಟ್ಟೆ ಬರೆ ಪಾತ್ರೆ ಪಗಡ ದಿನಸಿ ವಸ್ತುಗಳೆಲ್ಲಾ ಮನೆಯಲ್ಲೇ ಲಾಕ್ ಆಗಿದೆ. ಇತ್ತ ಮನೆ ಮುಂದೆ ಇರೋ ಅಂಗಳದಲ್ಲೇ ಈಗ ವಾಸ ಮಾಡುವಂತಾಗಿದೆ. ನಿನ್ನೆ ಸುರಿದ ಭಾರಿ ಮಳೆಯಲ್ಲಿ ನೆನದುಕೊಂಡೆ ಕಾಲ ಕಳೆದಿದ್ದಾರೆ ಇನ್ನು ದುರಂತ ಅಂದ್ರೆ ಶೌಚಾಲಯದ ಬಾಗಿಲಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ ಇದರಿಂದ ಮಹಿಳೆಯರು ಬಹಿರ್ದೆಸೆಗೆ ಹೋಗಲು ಸಾದ್ಯವಾಗದೆ ಕಷ್ಟ ಅನುಭವಿಸುತ್ತಿದ್ದಾರೆ. ಇತ್ತ ಈಗ್ತಾನೆ SSLC ಪಾಸ್ ಆದ ಮಗಳನ್ನ ಪಿಯುಸಿ ಗೆ ಅಡ್ಮಿಷನ್ ಮಾಡಿಸಬೇಕು ಆದ್ರೆ ಶಾಲಾ ದಾಖಲಾತಿಗಳು ಮನೆಯೊಳಗೆ ಲಾಕ್ ಆಗಿದ್ದು ವಿದ್ಯಾರ್ಥಿನಿಯ ಭವಿಷ್ಯ ಕೂಡ ಈಗ ಅಡಕತ್ತರಿಗೆ ಸಿಲುಕಿದೆ.

ಮನೆ ಮಾಲಿಕೆ ಕಮಲಮ್ಮರನ್ನ ಕೇಳಿದ್ರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಒಂದೆರೆಡು ದಿನ ಅಡ್ಜೆಸ್ಟ್ ಮಾಡ್ಕೊಳ್ಳಿ ಬ್ಯಾಂಕ್ ಹಣ ಹಾಗೂ ನಿಮ್ಮ ಬೋಗ್ಯದ ಹಣವನ್ನ ಹಿಂತಿರುಸುತ್ತೇನೆಂದು ಫೋನಿನಲ್ಲೇ ತ್ಯಾಪೆ ಸಾರ್ಸಿದ್ದಾರೆ. ಸಾಲ ಕೊಟ್ಟಿದ್ದು ಬ್ಯಾಂಕ್ ಸಾಲ ಪಡೆದಿದ್ದು ಮನೆ ಓನರ್ ಆದ್ರೆ ಶಿಕ್ಷೆ ಅನುಭವಿಸ್ಥಯಿರೋದು ಮಾತ್ರ ನಾವು ಎಂದು ಬಾಡಿಗೆದಾರರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ. ಅದೇನೆ ಹೇಳಿ ಯಾರೊ ಮಾಡಿದ ತಪ್ಪಿಗೆ ಮತ್ಯಾರೊ ಶಿಕ್ಷೆ ಅನುಭವಿಸಿದ್ದು ನಿಜಕ್ಕು ದುರಂತವೇ ಸರಿ.