ದಾಂಡೇಲಿ(ಡಿ.18): ದಾಂಡೇ​ಲಿ​ಯಿಂದ ಬೆಳ​ಗಾವಿಗೆ ಹೋಗುವ ಮಾರ್ಗ​ದ ತಾವ​ರ​ಗಟ್ಟಿ ಬಳಿ ಲಾರಿ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿದ ಪರಿ​ಣಾಮ ಇಬ್ಬರು ಮೃತ​ಪಟ್ಟ ಘಟನೆ ಬುಧ​ವಾರ ನಡೆ​ದಿ​ದೆ.

ಮೃತ​ರನ್ನು ಬೆಳ​ಗಾವಿ ಜಿಲ್ಲೆಯ ಹುಕ್ಕೇರಿ ತಾಲೂ​ಕಿನ ಮಾಸ್ತಿ​ಹೊಳೆ ಗ್ರಾಮದ ನಿರ್ವ​ಹ​ಣೆಪ್ಪ ಶಿವಪ್ಪ ಕಮತಿ (26) ಹಿಂಬದಿ ಸವಾ​ರ ಚಂದ್ರ​ಶೇ​ಖರ ಶಿವ​ರು​ದ್ರಪ್ಪ ಕಮ​ತಿ (40) ಎಂದು ಗುರು​ತಿ​ಸ​ಲಾ​ಗಿ​ದೆ. 

ಬಿಜೆಪಿ ಸೇರ್ಪಡೆಯಾದ ಕಾಂಗ್ರೆಸ್‌ ಕಾರ್ಯಕರ್ತರು

ಮೃತರು ವೆಸ್ಟ್‌ ಕೋಸ್ಟ್‌ ಪೇಪರ್‌ಮಿಲ್ಲಿನ ಕಾರ್ಮಿ​ಕ​ರಾ​ಗಿ​ದ್ದ​ರು. ಲಾರಿ ಚಾಲಕ ಪರಾರಿಯಾಗಿದ್ದು, ದಾಂಡೇಲಿಯ ಪೊಲೀಸ್‌ಠಾಣೆಯ ಕ್ರೈಂ ವಿಭಾಗದ ಪಿಎಸ್‌ಐ ಸತ್ಯಪ್ಪ ಹುಕ್ಕೇರಿ ಪ್ರಕರಣ ದಾಖಲಿಸಿ ವಿಚಾರಣೆ ಮುಂದುವರೆಸಿದ್ದಾರೆ.