ಬಿಜೆಪಿ ಪಕ್ಷಕ್ಕೆ ಬಹಳ ಹಿಂದಿನ ಇತಿಹಾಸವಿದೆ| ಬಿಜೆಪಿಯಲ್ಲಿ ಕುಟುಂಬ ರಾಜಕಾರಕ್ಕೆ ಅವಕಾಶವಿಲ್ಲ| ಬಿಜೆಪಿಯಲ್ಲಿ ಹಣ ಮಾಡುವ ಯಾವುದೇ ಅವಕಾಶವಿಲ್ಲ| ಉದಾರ ಮನಸ್ಸಿನಿಂದ ಜನಸೇವೆ ಮಾಡುವ ಮತ್ತು ಬಿಜೆಪಿ ಪಕ್ಷ ಕಟ್ಟುವವರು ಬಿಜೆಪಿಗೆ ಬನ್ನಿ|
ಜೋಯಿಡಾ(ಡಿ.16): ಜೋಯಿಡಾ ತಾಲೂಕಿನ ಗುಂದದಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಹಲವಾರು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಸುನೀಲ ಹೆಗಡೆ, ಬಿಜೆಪಿ ಪಕ್ಷಕ್ಕೆ ಬಹಳ ಹಿಂದಿನ ಇತಿಹಾಸವಿದೆ. ಇದು ಒಂದೇ ದಿನದಲ್ಲಿ ಬೆಳೆದು ಬಂದ ಪಕ್ಷ ಅಲ್ಲ. ಬಿಜೆಪಿಯಲ್ಲಿ ಕುಟುಂಬ ರಾಜಕಾರಕ್ಕೆ ಅವಕಾಶವಿಲ್ಲ. ಕೇಂದ್ರ, ರಾಜ್ಯದಲ್ಲಿ ನಮ್ಮ ಪಕ್ಷವಿದೆ. ಅದೇ ರೀತಿ ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ನಮ್ಮ ಪಕ್ಷವೇ ಮೇಲುಗೈ ಸಾಧಿಸುವಂತೆ ಆಗಬೇಕು. ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಹಣ ಮಾಡುವ ಉದ್ದೇಶ ಹೊಂದಿದ್ದರೆ ಅದನ್ನು ಮರೆತು ಬಿಡಿ. ಇಲ್ಲಿ ಹಣ ಮಾಡುವ ಯಾವುದೇ ಅವಕಾಶ ನಿಮಗಿಲ್ಲ. ಉದಾರ ಮನಸ್ಸಿನಿಂದ ಜನಸೇವೆ ಮಾಡುವ ಮತ್ತು ಬಿಜೆಪಿ ಪಕ್ಷವನ್ನು ಕಟ್ಟುವವರು ನಮ್ಮೊಡನೆ ಬನ್ನಿ ಎಂದರು.
ಗದ್ದುಗೆ ಉಳಿಸಿಕೊಳ್ಳಲು ಕಾಂಗ್ರೆಸ್, ಕಸಿದುಕೊಳ್ಳಲು ಬಿಜೆಪಿ ಕಸರತ್ತು..!
ಬಿಜೆಪಿಯ ಜೋಯಿಡಾ ತಾಲೂಕಾಧ್ಯಕ್ಷ ಸಂತೋಷ ರೆಡ್ಕರ ಮಾತನಾಡಿ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 16 ಪಂಚಾಯಿತಿಗಳಲ್ಲಿ ಕನಿಷ್ಟ 12 ಪಂಚಾಯಿತಿಗಳಲ್ಲಿ ನಮ್ಮ ಪಕ್ಷದ ಸದಸ್ಯರೇ ಆಡಳಿತ ನಡೆಸುವಂತೆ ಮಾಡುತ್ತೇವೆ. ಜೋಯಿಡಾ ತಾಲೂಕಿನ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿ ಹೆಚ್ಚು ಪಂಚಾಯಿತಿಗಳಲ್ಲಿ ನಮ್ಮ ಪಕ್ಷ ಆಡಳಿತಕ್ಕೆ ಬರುವ ಎಲ್ಲ ಸಾಧ್ಯತೆಗಳು ಇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಬಸವರಾಜ ಕಲಶೆಟ್ಟೆ, ತಾಲೂಕಿನ ಬಿಜೆಪಿ ಮುಖಂಡರಾದ ತುಕಾರಾಮ ಮಾಜ್ರೆಕರ, ವಾಣಿ ಪೈ, ಅನಿಲ ಪಟ್ಟೆ, ಸುಭಾಷ ಮಾಜ್ರೆಕರ, ಸಂತೋಷ ಸಾವಂತ, ವಿಶ್ವನಾಥ ನಾಯ್ಕ, ಗುಂದ ಭಾಗದ ಧವಳೋ ಸಾವರಕರ, ಶ್ರೀಪಾದ ದೇಸಾಯಿ, ಶಶಿಕಾಂತ ಹೆಗಡೆ, ಸುದರ್ಶನ ಭಾಗ್ವತ್ ಇತರರು ಉಪಸ್ಥಿತರಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 16, 2020, 12:29 PM IST