ಬೆಳಗಾವಿ, (ಜ.12): ರೈಲ್ವೇ ಹಳಿ ಮೇಲೆ ದೊಡ್ಡ ಮರ ಬಿದ್ದಿದ್ದರಿಂದ ಸಂಭವಿಸಬಹುದಾಗಿದ್ದ ಅನಾಹುತವೊಂದನ್ನ ಯುವಕರಿಬ್ಬರು ತಪ್ಪಿಸಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದ ಗಾಂಧಿನಗರದಲ್ಲಿ ನಡೆದಿದೆ.

ರಿಯಾಜ್ ಮತ್ತು ತೌಫೀಕ್ ಎಂಬ ಯುವಕರು ಬೈಕ್ ಮೆಲೆ ಹೋಗುವಾಗ ರೈಲ್ವೇ ಹಳಿ ಮೆಲೆ ಹಳೆಯ ಮರ ಬಿದ್ದಿದ್ದನ್ನು ಗಮನಿಸಿದ್ದು, ತಕ್ಷಣ ಇದೇ ಸಮಯದಲ್ಲಿ ರೈಲು ಬರುವುದನ್ನ ಅರಿತು ಯವಕರು ಆ ರೈಲಿಗೆ ಎದುರಿಗೆ ಓಡುತ್ತಾ ಹೋಗಿ, ರೈಲನ್ನ ನಿಲ್ಲಿಸಿದ್ದಾರೆ.

ಕೇಳ್ರಪ್ಪೋ ಇನ್ಮೇಲೆ ರೈಲು ಹೊರಡುವ 20 ನಿಮಿಷ ಮೊದ್ಲು ನಿಲ್ದಾಣದಲ್ಲಿ ಇರ್ಬೇಕು!

ಈ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ. ರೈಲು, ಕೊಲ್ಹಾಪುರದಿಂದ ಹುಬ್ಬಳ್ಳಿಗೆ ಸಂಚರಿಸುತ್ತಿತ್ತು. ಈ ಘಟನೆಯಿಂದಾಗಿ ರೈಲು ಸಂಚಾರ 10 ನಿಮಿಷ ಸ್ಥಗಿತಗೊಂಡಿತ್ತು.

ಹಳಿಗಳ ಮೇಲಿನ ಮರವನ್ನ ಸ್ಥಳಾಂತರ ಮಾಡಿದ ನಂತರ ರೈಲು ಸಂಚಾರ ಪುನರಾರಂಭವಾಯಿತು. ರೈಲಿನಲ್ಲಿ 1,500 ಪ್ರಯಾಣಿಕರು ಇದ್ದರು.

ಈ ಯುವಕರ ಸಮಯಪ್ರಜ್ಞೆಯಿಂದ ಪ್ರಯಾಣಿಕರ ಪ್ರಾಣ ಉಳಿದಿದೆ ಎಂದು ಸಾರ್ವಜನಿಕರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.