ದಾವಣಗೆರೆಯಲ್ಲಿ ಮತ್ತಿಬ್ಬರನ್ನು ಬಲಿ ಪಡೆದ ಕೊರೋನಾ ಹೆಮ್ಮಾರಿ..!
ದಾವಣಗೆರೆಯಲ್ಲಿ ಕೊರೋನಾ ಹೆಮ್ಮಾರಿ ಭಾನುವಾರ(ಜು.05) ಮತ್ತಿಬ್ಬರನ್ನು ಬಲಿ ಪಡೆದಿದೆ. ಇದರೊಂದಿಗೆ ಕೊರೋನಾ ಜಿಲ್ಲೆಯೊಂದರಲ್ಲೇ 11 ಜನರನ್ನು ಕೊರೋನಾ ಆಪೋಷನ ತೆಗೆದುಕೊಂಡಂತೆ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಜು.06): ಕೊರೋನಾ ಅಟ್ಟಹಾಸಕ್ಕೆ ಒಬ್ಬ ವೃದ್ಧ ಸೇರಿ ಇಬ್ಬರು ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 11ಕ್ಕೆ ಏರಿಕೆ ಯಾಗಿದ್ದು, ಹೊಸದಾಗಿ 11 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, ಸೋಂಕಿನಿಂದ ಗುಣಮುಖರಾದ 7 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 44 ಸಕ್ರಿಯ ಕೇಸ್‌ಗಳಿವೆ.
ಇಲ್ಲಿನ ಆಜಾದ್ ನಗರದ 1ನೇ ಮೇನ್ 11ನೇ ಕ್ರಾಸ್‌ನ 68 ವರ್ಷದ ವೃದ್ಧ(ಪಿ-18102)ನು ಶೀತ, ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ(ಎಸ್‌ಎಆರ್‌ಐ) ಇತರೆ ದೈಹಿಕ ಸಮಸ್ಯೆಯಿಂದ ಜು.1ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ಸಾವನ್ನಪ್ಪಿದ್ದಾರೆ.
ಬಳ್ಳಾರಿ ಜಿಲ್ಲೆ ಕೊಟ್ಟೂರಿನ 53 ವರ್ಷದ ಪುರುಷ(21680)ನು ಶೀತ, ಜ್ವರ, ಕೆಮ್ಮು, ತೀವ್ರ ಉಸಿರಾಟ ಸಮಸ್ಯೆ(ಎಸ್‌ಎಆರ್‌ಐ) ಇತರೆ ದೈಹಿಕ ಸಮಸ್ಯೆಯಿಂದಾಗಿ ಜೂ.29ರಂದು ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಗೆ ಹೃದಯ ಶಸ್ತ್ರ ಚಿಕಿತ್ಸೆಯೂ ಆಗಿದ್ದು, ಜೂ.30ರಂದು ಮೃತಪಟ್ಟಿದ್ದರು. ಇಬ್ಬರಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು.
ನಗರದ ನಿಟುವಳ್ಳಿಯ 25 ವರ್ಷದ ಪುರುಷ(ಪಿ-21681)ನು ಶೀತ ಜ್ವರ(ಐಎಲ್‌ಐ), ಹರಿಹರದ ಗೌಸಿಯಾ ಕಾಲನಿ ವಾಸಿ 30 ವರ್ಷ ಪುರುಷ(21682)ನು ಐಎಲ್‌ಐ, ದಾವಣಗೆರೆ ಬೀಡಿ ಲೇಔಟ್‌ನ 48 ವರ್ಷದ ಪುರುಷ(21683)ನು ಪಿ-10389ರ ಸಂಪರ್ಕದಿಂದ ಸೋಂಕಿಗೆ ತುತ್ತಾಗಿದ್ದಾರೆ.
ಹೊನ್ನಾಳಿ ತಾ. ಕ್ಯಾಸಿನಕೆರೆ ಗ್ರಾಮದ 39 ವರ್ಷದ ಮಹಿಳೆ(21684)ಯು ಪಿ-16672ರ ಸಂಪರ್ಕದಿಂದ, ದಾವಣಗೆರೆ ಬೀಡಿ ಲೇಔಟ್‌ನ 26 ವರ್ಷದ ಮಹಿಳೆ(21685)ಯು ರೋಗಿ ಸಂಖ್ಯೆ 10389ರ ಸಂಪರ್ಕದಿಂದ ಸೋಂಕಿಗೊಳಗಾಗಿದ್ದಾರೆ. ಇಲ್ಲಿನ ನಂದಿನ ರೆಸ್ಟೋರೆಂಟ್ ಅಪಾರ್ಟ್‌ಮೆಂಟ್‌ನ 32 ವರ್ಷದ ಮಹಿಳೆ(21686)ಯು ಪಿ-21687ರ ಸಂಪರ್ಕದಿಂದ ಸೋಂಕಿತರಾಗಿದ್ದಾರೆ.
ಕೊರೋನಾ ಹಿನ್ನೆಲೆ 15 ದಿನ ಸೆಲೂನ್‌ಗಳು ಬಂದ್..!
ತೆಲಂಗಾಣ ರಾಜ್ಯದ ಹೈದರಾಬಾದ್‌ನಿಂದ ವಾಪಾಸ್ಸಾಗಿದ್ದ ಇಲ್ಲಿನ ಎಸ್ಸೆಸ್ ಅಪಾರ್ಟ್‌ಮೆಂಟ್ ಲೇಔಟ್‌ನ 38 ವರ್ಷದ ಪುರುಷ(21687), 32 ವರ್ಷದ ಮಹಿಳೆ(21688), 5 ವರ್ಷದ ಹೆಣ್ಣು ಮಗು(21689), 7 ವರ್ಷದ ಬಾಲಕ(21690) ಸೋಂಕಿಗೆ ತುತ್ತಾಗಿದ್ದು, ಈ ಎಲ್ಲಾ ಸೋಂಕಿತರಿಗೂ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸೋಂಕಿನಿಂದ ಗುಣಮುಖರಾದ ಬಳ್ಳಾರಿ ಜಿಲ್ಲೆ ಹೊಸಪೇಟೆಯ 14 ವರ್ಷದ ಬಾಲಕ(ಪಿ-10986), ದಾವಣಗೆರೆ ಆಜಾದ್ ನಗರದ 66 ವರ್ಷದ ವೃದ್ಧ(15376), ಪಿಜೆ ಬಡಾವಣೆ ಪೊಲೀಸ್ ಕ್ವಾಟ್ರರ್ಸ್‌ನ 28 ವರ್ಷದ ಪುರುಷ(15377), ಎಂಸಿಸಿ ಬಿ ಬ್ಲಾಕ್‌ನ 30 ವರ್ಷದ ಪುರುಷ(15378), ಹರಿಹರದ ಚಿನ್ನಪ್ಪ ಕಾಂಪೌಂಡ್‌ನ ಚಚ್‌ರ್ ಸಮೀಪದ ವಾಸಿ 40 ವರ್ಷದ ಪುರುಷ(15381) ಬಿಡುಗಡೆಯಾಗಿದ್ದಾರೆ.
ಜಗಳೂರು ತಾ. ಚಿಕ್ಕಉಜ್ಜಿನಿ ಗ್ರಾಮದ 11 ವರ್ಷದ ಬಾಲಕಿ(15382), ಜಗಳೂರು ಮುನ್ಸಿಪಲ್ ಕಚೇರಿಯ 49 ವರ್ಷದ ಪುರುಷ(15387) ಭಾನುವಾರ ಬಿಡುಗಡೆಯಾಗಿದ್ದಾರೆ. ದಾವಣಗೆರೆ ವಿನೋಬ ನಗರ 2ನೇ ಮೇನ್ 9ನೇ ಕ್ರಾಸ್‌ನ 76 ವರ್ಷದ ವೃದ್ಧೆ(14409), ಬಾಷಾ ನಗರ ಬೀಡಿ ಲೇಔಟ್‌ನ 54 ವರ್ಷದ ಮಹಿಳೆ(8492) ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಶನಿವಾರ ಬಿಡುಗಡೆಯಾಗಿದ್ದರು.
ಜಿಲ್ಲೆಯಲ್ಲಿ ಈವರೆಗೆ 356 ಪಾಸಿಟಿವ್ ಕೇಸ್ ವರದಿಯಾಗಿವೆ. ಈ ಪೈಕಿ 11 ಜನ ಸಾವನ್ನಪ್ಪಿದ್ದು, ಒಟ್ಟು 301 ಜನರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಪ್ರಸ್ತುತ 44 ಸಕ್ರಿಯ ಕೇಸ್‌ಗಳು ಜಿಲ್ಲೆಯಲ್ಲಿದ್ದು, ಸೋಂಕಿತರಿಗೆ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.