* ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಕ್ರಾಸ್ ಬಳಿ ನಡೆದ ಘಟನೆ* ಮಂಡ್ಯಕ್ಕೆ ಕಬ್ಬು ಕಟಾವಿಗೆ ಗುಳೆ ಹೊರಟಿದ್ದ ಇಬ್ಬರ ಸಾವು* ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ವಿಜಯನಗರ(ಜು.18): ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಇಬ್ಬರು ಸಾವನ್ನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮೊರಬ ಕ್ರಾಸ್ ಬಳಿ ಇಂದು(ಭಾನುವಾರ) ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಮೃತರನ್ನ ಶಂಕರ್ ನಾಯ್ಕ್(30), ಪೀಕ್ಯಾನಾಯ್ಕ್(50) ಎಂದು ಗುರುತಿಸಲಾಗಿದೆ. ಇವರು ಬೈಕ್ ಮೇಲೆ ಮಂಡ್ಯದ ಕಡೆ ಗುಳೆ ಹೊರಟಿದ್ದರು ಎಂದು ತಿಳಿದು ಬಂದಿದೆ.
ವಿಜಯಪುರ; ಭೀಕರ ಅಪಘಾತ, ಸ್ಥಳದಲ್ಲೇ ಮೂವರ ಸಾವು
ಮೃತರು ವಿಜಯನಗರ ಕೂಡ್ಲಿಗಿಯ ಗೋವಿಂದಗಿರಿ ತಾಂಡಾದಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆ ಗುಳೆ ಹೊರಟಿದ್ದರು ಎಂದು ತಿಳಿದು ಬಂದಿದೆ. ಈ ಸಂಬಂಧ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
