* ವಿಜಯಪುರದ ಬಳಿ ಭೀಕರ ರಸ್ತೆ ಅಪಘಾತ* ಸ್ಥಳದಲ್ಲೆಮೂವರ ಸಾವು*  ಟಾಟಾಏಸ್ ವಾಹನ ಹಾಗೂ ಗೂಡ್ಸ್ ವಾಹನ ಮಧ್ಯೆ ಡಿಕ್ಕಿ* ವಿಜಯಪುರ ತಾಲೂಕಿನ‌ ಅರಕೇರಿ ಬಳಿ ನಡೆದ ಘಟನೆ

ವಿಜಯಪುರ(ಜು. 16) ಭೀಕರ ರಸ್ತೆ ಅಪಘಾತವಾಗಿದ್ದು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಾಟಾಏಸ್ ವಾಹನ ಹಾಗೂ ಗೂಡ್ಸ್ ವಾಹನ ಮಧ್ಯೆ ಪರಸ್ಪರ ಡಿಕ್ಕಿ ಪರಿಣಾಮ ಟಾಟಾಏಸ್ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಸಾವು ಕಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಮಿಂಚುಳ್ಳಿ ಗಾಯಕಿ' NRI ಹುಡುಗನಿಗೆ ಮಹಾಮೋಸ ಮಾಡಿದ್ದವಳಿಗೆ ಜೈಲು

ವಿಜಯಪುರ ತಾಲೂಕಿನ‌ ಅರಕೇರಿ ಬಳಿ ನಡೆದ ಘಟನೆ ನಡೆದಿದೆ. ಲೋಣಿ ಗ್ರಾಮದ ಬುದ್ದಯ್ಯ ಹಿರೇಮಠ (70), ಪ್ರತೀಕ‌ ಹಿರೇಮಠ (27), ಸಿದ್ರಾಮ್ ಹಿರೇಮಠ (22) ಸಾವನ್ನಪ್ಪಿದವರು.

ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ವಿಜಯಪುರ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.