ಬೆಳಗಾವಿ: ಮೂಡಲಗಿ ಬಳಿ ಭೀಕರ ಅಪಘಾತ, ಇಬ್ಬರ ದುರ್ಮರಣ
* ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ನಡೆದ ಘಟನೆ
* ಓರ್ವನ ಸ್ಥಿತಿ ಗಂಭೀರ
* ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು
ಚಿಕ್ಕೋಡಿ(ಸೆ.12): ರಸ್ತೆ ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪೂರ ಕ್ರಾಸ್ ಬಳಿ ಇಂದು(ಭಾನುವಾರ) ಬೆಳಗಿನ ಜಾವ ನಡೆದಿದೆ.
ವಿನಾಯಕ ಚಿದಾನಂದ ಕಾವೇರಿ (22) ಹಾಗೂ ಮುತ್ತು ಮಾಳಿ (22) ಸಾವನ್ನಪ್ಪಿದ ದುರ್ದೈವಿ ಯುವಕರಾಗಿದ್ದಾರೆ. ಈರಯ್ಯ ಹಿರೇಮಠ (22) ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಹಾರೂಗೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಈರಯ್ಯ ಹಿರೇಮಠ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ವಿಜಯಪುರ: ಕುರಿ ಕದಿಯಲು ಬಂದಿದ್ದ ಕಳ್ಳರ ಕಾರ್ ಪಲ್ಟಿ, ಎದ್ನೋ ಬಿದ್ನೋ ಅಂತ ಓಡಿದ ಖದೀಮರು..!
ಮೃತರು ಬೆಳಗಾವಿ ಜಿಲ್ಲೆಯ ಅಥಣಿ ನಗರದ ನಿವಾಸಿಗಳಾಗಿದ್ದು ಈರಯ್ಯ ಅವರ ತಾಯಿಯನ್ನು ಧಾರವಾಡಕ್ಕೆ ಬಿಟ್ಟು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಹಾರೋಗೇರಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಈ ಕುರಿತು ಹಾರೋಗೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.