ಮಂಗಳೂರು(ಫೆ.28): ಕಟ್ಟಡ ಕಾಮಗಾರಿ ಸಂದರ್ಭ ಮಣ್ಣು ಕುಸಿದು ಕಾರ್ಮಿಕರು ಮಣ್ಣಿನಡಿ ಸಿಕ್ಕಿಹಾಕಿಕೊಂಡಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ಕಟ್ಟಡ ಕಾಮಗಾರಿ ಸಂದರ್ಭ ಮಣ್ಣು ಕುಸಿತವಾಗಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ಮಂಗಳೂರಿನ ಬಂಟ್ಸ್ ಹಾಸ್ಟೇಲ್ ಬಳಿಯ ಕಟ್ಟಡ ರಸ್ತೆಯ ಮಣ್ಣನ್ನು ಬಿಲ್ಡರ್ಸ್ ಅವೈಜ್ಞಾನಿಕವಾಗಿ ಅಗೆದಿರುವ ಪರಿಣಾಮ ರಸ್ತೆ ಹಾಗೂ ಮಣ್ಣು ಕಾರ್ಮಿಕರ ಮೇಲೆ ಕುಸಿದಿದೆ.

ತುಮಕೂರು ಜಿಲ್ಲಾಸ್ಪತ್ರೆ ಸರ್ಜನ್ ಕುರ್ಚಿಗೆ ಕಾದಾಟ..!

ಜೆ.ಸಿ.ಬಿ ಮೂಲಕ ಮಣ್ಣು ತೆಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಭೀಮಣ್ಣ (35), ಬಾಗಲಕೋಟೆ ಜಿಲ್ಲೆ ಮತ್ತು ಪಶ್ಚಿಮ ಬಂಗಾಳ ಮೂಲದ ಮಸೂದ್ (28)ಮೃತಪಟ್ಟಿದ್ದಾರೆ.

ನಾಲ್ಕು ಮಂದಿ ಕಾರ್ಮಿಕರು ಪಾರಾಗಿದ್ದಾರೆ. ಉದ್ಯಮಿ ಎಜೆ ಶೆಟ್ಟಿ ಅವರಿಗೆ ಸೇರಿರುವ ಕಟ್ಟಡದಲ್ಲಿ ಕೆಲಸ ನಡೆಯುತ್ತಿತ್ತು. ಮಣ್ಣಿನಡಿಯಿಂದ ಕಾರ್ಮಿಕರನ್ನು ಮೇಲೆತ್ತುವ ಕಾರ್ಯಾಚರಣೆ ನಡೆದಿದ್ದು, ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ ನಡೆದಿದೆ.