ತುಮಕೂರು(ಫೆ.28): ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಜನ್ ಕುರ್ಚಿಗಾಗಿ ಕಾದಾಟ ಶುರುವಾಗಿದೆ. ಹಾಲಿ ಡಾಕ್ಟರ್ ಹೊಸದಾಗಿ ಬಂದಿರುವ ವೈದ್ಯರಿಗೆ ಅವಕಾಶ ನೀಡದೆ ಸತಾಯಿಸಿದ ಘಟನೆ ನಡೆದಿದೆ.

ಜಿಲ್ಲಾ ಆಸ್ಪತ್ರೆ ಡಿಸ್ಟಿಕ್ ಸರ್ಜನ್ ಕುರ್ಚಿಗೆ ಕಾದಾಟ ಮುಂದುವರಿದಿದ್ದು, ಹೊಸದಾಗಿ ಆಗಮಿಸಿರುವ ಡಾ.ಸುರೇಶ್ ಬಾಬುಗೆ ಅವಕಾಶ ನೀಡದೇ ಸತಾಯಿಸಿದ ಹಾಲಿ ವೈದ್ಯ ಡಿ.ಎಸ್.ವೀರಭದ್ರಯ್ಯ ನಡುವೆ ಜಗಳ ನಡೆದಿದೆ.

ದೆಹಲಿ ಗಲಭೆ ಹಿಂದೆ ಕಾಂಗ್ರೆಸ್ ‌ಮಾಸ್ಟರ್ ಮೈಂಡ್ ಇದೆ‌: ಕಟೀಲ್

ಹಾಲಿ ಡಿಎಸ್ ಡಾ.ವೀರಭದ್ರಯ್ಯ ಅವರು ಅಧಿಕಾರ ಹಸ್ತಾಂತರಕ್ಕೆ ಮಾಡಲು ನಿರಾಕರಿಸಿದ್ದಾರೆ. ಹಾಲಿ ಡಿಎಸ್ ಹಿಂದೆ ಬಿದ್ದು ಅಧಿಕಾರ ಹಸ್ತಾಂತರಿಸುವಂತೆ ಸುರೇಶ್ ಬಾಬು ಗೋಗರೆದಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ವೈದ್ಯರ ನಡುವೆ ಹೈಡ್ರಾಮ ನಡೆದಿದ್ದು, ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಕೋಡದ ಹಾಲಿ ಡಿಎಸ್ ವೀರಭದ್ರಯ್ಯ ನಡೆ ವಿರುದ್ದ ನಾಗರಿಕರು, ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.