ಕೊಳ್ಳೇಗಾಲ: ಕೆರೆಗೆ ನುಗ್ಗಿದ ಕಾರು, ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಇಬ್ಬರು ಮಸಣಕ್ಕೆ!

ಮೂವರು ಸಹ ಬುಧವಾರ ರಾತ್ರಿ 12ಗಂಟೆ ಸುಮಾರಿಗೆ ಮಹದೇಶ್ವರನ ಬೆಟ್ಟಕ್ಕೆ ತೆರಳಲು ಕ್ಯಾಬ್ ವೊಂದನ್ನು ಬಾಡಿಗೆಗೆ ಪಡೆದು ಊರ್ಜಿತ್, ಶುಭ, ಪುನೀತ್ ತೆರಳಿದ್ದು 2.15ಗಂಟೆ ಸುಮಾರಿನಲ್ಲಿ ಕಾರು ಚಲಾಯಿಸುತ್ತಿದ್ದ ಊರ್ಜಿತ್ ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಕುಂತೂರು ಕ್ರಾಸ್‌ನ ಕೆರೆಗೆ ಕಾರ್‌ನುಗ್ಗಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. 

Two Killed due to Car Fell in to the Lake at Kollegal in Chamarajanagara grg

ಕೊಳ್ಳೇಗಾಲ(ಜ.03): ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಮೂವರು ಗೆಳೆಯರ ಪೈಕಿ ಇಬ್ಬರು ಕೆರೆಗೆ ಮುಳುಗಿ ಸಾವಿಗೀಡಾಗಿದ್ದು ಒಬ್ಬನನ್ನು ಅಗ್ನಿಶಾಮಕ ಮತ್ತು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಕುಂತೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ. 

ಮೃತರನ್ನು ಡಿಜಿಎಫ್ ಕಂಪನಿಯ ಊರ್ಜಿತ್ (25), ಟೆಕೋಟಾಸ್ಕ್‌ ಕಂಪನಿಯ ನೌಕರರಾದ ಶುಭ (21) ಎಂದು ಗುರುತಿಸಲಾಗಿದೆ. ಮತ್ತೋರ್ವ ಇವರಿಬ್ಬರ ಗೆಳೆಯ ಮೈಸೂರಿನ ವಿದ್ಯಾರಣ್ಯಪುಂ ವಾಸಿ ಲಯನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಪುನೀತ್ (21) ಪೊಲೀಸರು, ಸ್ಥಳೀಯರು, ಅಗ್ನಿಶಾಮಕ ಠಾಣೆ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿ ಸಹಕಾರದೊಂದಿಗೆ ಈತ ಬದುಕುಳಿದಿದ್ದಾನೆ. 

ಸೌತೆಕಾಯಿ ವಿಚಾರಕ್ಕೆ ತಂಗಿಯನ್ನು ಕೊಲೆಗೈದ ಅಣ್ಣ; ಅತ್ತಿಗೆಗೂ ಬಿತ್ತು ಏಟು!

ಮೂವರು ಸಹ ಬುಧವಾರ ರಾತ್ರಿ 12ಗಂಟೆ ಸುಮಾರಿಗೆ ಮಹದೇಶ್ವರನ ಬೆಟ್ಟಕ್ಕೆ ತೆರಳಲು ಕ್ಯಾಬ್ ವೊಂದನ್ನು ಬಾಡಿಗೆಗೆ ಪಡೆದು ಊರ್ಜಿತ್, ಶುಭ, ಪುನೀತ್ ತೆರಳಿದ್ದು 2.15ಗಂಟೆ ಸುಮಾರಿನಲ್ಲಿ ಕಾರು ಚಲಾಯಿಸುತ್ತಿದ್ದ ಊರ್ಜಿತ್ ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಕುಂತೂರು ಕ್ರಾಸ್‌ನ ಕೆರೆಗೆ ಕಾರ್‌ನುಗ್ಗಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿ ಸಾವಿಗೀಡಾಗಿದ್ದಾರೆ. 

ಕಾರಿನ ಗ್ಲಾಸ್ ಒಡೆದು ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಪುನೀತ್ ರಕ್ಷಣೆಗಾಗಿ ಕೂಗಿಕೊಂಡ ಎನ್ನಲಾಗಿದೆ. ಈ ವೇಳೆ ತೆರಳಿದ್ದ ಆ್ಯಂಬುಲೆನ್ಸ್‌ ಸಿಬ್ಬಂದಿ ವಾಹನ ನಿಲ್ಲಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿ ಶಾಮಕ ಠಾಣಾಧಿಕಾರಿಗಳು ಜಾಗೃತರಾಗಿ ಪುನೀತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಚಾಮರಾಜನಗರ: ಸಾಕುಪ್ರಾಣಿಗಳ ಭಕ್ಷಕ ಚಿರತೆ ಬಂಧಿಸಲು ಡ್ರೋನ್‌ ಬಳಕೆ

ಹೊಸ ವರುಷದ ಪ್ರಾರಂಭದಲ್ಲಿ ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಮೃತ ರಿಬ್ಬರು ಅಜಾಗರುಕತೆಯಿಂದಾಗಿ ಕಾರು ಚಲಾಯಿಸಿ ವಿಧಿಯ ಆಟದ ಪರಿಣಾಮ ಕೆರೆಯಲ್ಲಿ ಜಲಸಮಾಧಿಯಾಗುವಂತಾಗಿದ್ದು ಮಾತ್ರ ವಿಪರ್ಯಾಸದ ಸಂಗತಿ. ಈ ಸಂಬಂಧ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮಕೈಗೊಂಡಿದ್ದಾರೆ. ಪುನೀತ್ ಹೇಳಿಕೆ ಹಿನ್ನೆಲೆಯಲ್ಲಿ ಮಾಂಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹದೇಶ್ವರ ಬೆಟ್ಟಕ್ಕೆ ಮೈಸೂರಿನಿಂದ ಹೊರಟ ಕಾರನ್ನು ಊರ್ಜಿತ್ ಓಡಿಸುತ್ತಿದ್ದ, ಕಾರು ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿ ಹೊಡೆಯಿತು. ಶುಭ ಮತ್ತು ಊರ್ಜಿತ್ ಕೆರೆಯಲ್ಲೆ ಸಾವಿಗೀಡಾದರು. ನಾನು ಕಾರಿನ ಗಾಜು ಒಡೆದು ರಕ್ಷಣೆಗೆ ಕೂಗಿಕೊಂಡೆ. ಆ್ಯಂಬುಲೆನ್ಸ್ ಸಿಬ್ಬಂದಿಯೊಬ್ಬರು ವಾಹನ ನಿಲ್ಲಿಸಿ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಮಾಂಬಳ್ಳಿ ಠಾಣಾ ಪೊಲೀಸರು, ಅಗ್ನಿ ಶಾಮಕ ಠಾಣಾಧಿಕಾರಿಗಳು ನನ್ನ 2 ರಕ್ಷಿಸಿದರು. ಪವಾಡ ಸದೃಶ್ಯವಾಗಿ ನಾನು ಬದುಕುಳಿದೆ: ಪುನೀತ್ ಪವಾಡ ಸದೃಶ್ಯ ಬದುಕುಳಿದ ಮೈಸೂರು ನಿವಾಸಿ

Latest Videos
Follow Us:
Download App:
  • android
  • ios