ಸಚಿವ ಪ್ರಿಯಾಂಕ್ ಹೆಸರೇಳಿ ಆತ್ಮಹತ್ಯೆ ಕೇಸ್: ಪೇದೆಗಳಿಬ್ಬರು ಅಮಾನತು
ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ನಮ್ಮಣ್ಣ ಸಾವನ್ನಪ್ಪಿದ್ದಾನೆ ಎಂದು ಸಚಿನ್ ಸಹೋದರ ಹಾಗೂ ಸಹೋದರಿ ಎಸ್‌ಪಿ ಅವರ ಮುಂದೆ ಅಳಲು ತೋಡಿಕೊಂಡಿದ್ದರು. ಎಂದು ಹೀಗಾಗಿ, ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳ ಅಮಾನತು ಮಾಡಲಾಗಿದೆ.
ಬೀದರ್(ಡಿ.28): ರಾಜ್ಯದಾದ್ಯಂತ ಸಂಚಲನ ಮೂಡಿಸಿದ್ದ ಗುತ್ತಿಗೆದಾರ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರ ದೂರನ್ನು ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಇಲ್ಲಿನ ಗಾಂಧಿಗಂಜ್ ಪೊಲೀಸ್ ಠಾಣೆಯ ಇಬ್ಬರು ಹೆಡ್ ಕಾನ್‌ಸ್ಟೇಬಲ್‌ರನ್ನು ಅಮಾನತು ಮಾಡಲಾಗಿದೆ.
ಗುರುವಾರ ಬೆಳಿಗ್ಗೆ ಚಲಿಸುತ್ತಿದ್ದ ರೈಲಿನ ಚಕ್ರಗಳಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದ ಗುತ್ತಿಗೆದಾರ ಸಚಿನ ಪಂಚಾಳ, ಅವರ ಕುಟುಂಬಸ್ಥರು ಒಂದು ದಿನದ ಮೊದಲೇ ಇಲ್ಲಿನ ಗಾಂಧಿಗಂಜ್ ಪೊಲೀಸ್ ಠಾಣೆ ಹಾಗೂ ಧನ್ನೂರ್ ಪೊಲೀಸ್ ಠಾಣೆಗೆ ತೆರಳಿ, ಡೆತ್‌ನೋಟ್ ಬರೆದಿಟ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಹಾಗೂ ನಾಪತ್ತೆಯಾಗಿರುವ ಸಚಿನ್ ಅವರನ್ನು ಹುಡುಕಿಕೊಡುವಂತೆ ಕೋರಿ ದೂರು ದಾಖಲಿಸಲು ತೆರಳಿದ್ದಾಗ, ಅಲ್ಲಿನ ಸಿಬ್ಬಂದಿ ಅವರಿಗೆ ಸ್ಪಂದಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕುಟುಂಬಸ್ಥರು ರೈಲ್ವೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದರು.
Breaking News: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ರೈಲಿಗೆ ತಲೆಕೊಟ್ಟು ಜೀವ ಬಿಟ್ಟ ಗುತ್ತಿಗೆದಾರ!
ಈ ಕುರಿತಂತೆ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಎಸ್‌ಪಿ ಪ್ರದೀಪ ಗುಂಟಿ ಅವರು ಕರ್ತವ್ಯಲೋಪ ಹಿನ್ನೆಲೆ ಯಲ್ಲಿ ರಾಜೇಶ್ ಹಾಗೂ ಶಾಮಲಾ ಎಂಬಿಬ್ಬರು ಹೆಡ್ ಕಾನ್‌ಸ್ಟೇಬಲ್‌ರನ್ನು ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದರು.
ಪೊಲೀಸರು ಎಫ್‌ಐಆರ್ ದಾಖಲಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ನಮ್ಮಣ್ಣ ಸಾವನ್ನಪ್ಪಿದ್ದಾನೆ ಎಂದು ಸಚಿನ್ ಸಹೋದರ ಹಾಗೂ ಸಹೋದರಿ ಎಸ್‌ಪಿ ಅವರ ಮುಂದೆ ಅಳಲು ತೋಡಿಕೊಂಡಿದ್ದರು. ಎಂದು ಹೀಗಾಗಿ, ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಹೆಡ್‌ಕಾನ್‌ಸ್ಟೇಬಲ್‌ಗಳ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರೈಲ್ವೆ ಪೊಲೀಸ್ ತನಿಖೆ ಚುರುಕು
ಬೀದರ್: ರೈಲಿನ ಹಳಿಗಳಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ ಪಂಚಾಳ ಪ್ರಕರಣದ ತನಿಖೆಯನ್ನು ರೈಲ್ವೆ ಪೊಲೀಸ್ ಚುರುಕುಗೊಳಿಸಿದ್ದು, ಮೃತದೇಹ ಪತ್ತೆಯಾದ ಸ್ಥಳ ಹಾಗೂ ಸಾವಿಗೂ ಮುನ್ನ ಬರೆದಿಟ್ಟಿದ್ದ ಡೆತ್ ನೋಟ್ ಮಹಜರು ಮಾಡಿದ್ದಾರೆ.
ರೈಲ್ವೆ ಪೊಲೀಸ್ ಇನ್ಸ್‌ಪೆಕ್ಟರ್ ಬಸವರಾಜ ತೇಲಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದ್ದು, ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ಎಂದು ಗುರುತಿಸಿಕೊಂಡಿರುವ ರಾಜು ಕಪನೂರ ಸೇರಿದಂತೆ 8 ಜನರ ವಿರುದ್ಧ ಸಾವಿಗೂ ಮುನ್ನ ಗುತ್ತಿಗೆದಾರ ಸಚಿನ ಬರೆದಿಟ್ಟಿದ್ದ ಪತ್ರದಲ್ಲಿನ ಉಲ್ಲೇಖ ಗಳನ್ನು ಕೂಲಂಕಶವಾಗಿ ಪರಿಶೀಲಿಸುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿವೆ.
ಆನ್‌ಲೈನ್ ಗೇಮ್ ಹುಚ್ಚಾಟ, 12 ಲಕ್ಷ ರೂ ಸಾಲ, ಪೆಟ್ರೋಲ್ ಸುರಿದುಕೊಂದು ಯುವಕ ಸ್ವಹತ್ಯೆಗೆ ಯತ್ನ!
ಡೆತ್‌ನೋಟ್ ಗುತ್ತಿಗೆದಾರ ಸಚಿನ ಬರೆದಿದ್ದೆ, ಹಸ್ತಾಕ್ಷರ ಅವರದ್ದೇ ಎಂಬುವುದನ್ನು ಇತರೆ ದಾಖಲೆಗಳೊಂದಿಗೆ ತಾಳೆ ಹಾಕಿ ಪರಿಶೀಲಿಸುವದಕ್ಕಾಗಿ ಸಚಿನ ವಾಸವಿದ್ದ ಹಾಗೂ ಕಾರ್ಯನಿರ್ವಹಿಸಿದ್ದ ಸ್ಥಳಗಳಿಗೆ ಪೊಲೀಸ್ ಈಗಾಗಲೇ ದೌಡಾಯಿಸಿದೆ. ಹಾಗೆಯೇ ಪ್ರಮುಖವಾಗಿ ಹಿಂದೂ ಮುಖಂಡ ಆಂದೋಲ ಸ್ವಾಮಿ, ಶಾಸಕ ಬಸವ ರಾಜ ಮತ್ತಿಮೂಡ, ಮಾಜಿ ಶಾಸಕ ಚಂದು ಪಟೇಲ್ ಹಾಗೂ ಮುಖಂಡ ಮಣಿಕಂಠ ಪಾಟೀಲ್ ಕೊಲೆ ಮಾಡುವ ಸಂಚಿನ ಕುರಿತಾಗಿಯೂ ಬರೆದಿಟ್ಟಿರುವ ಬಗ್ಗೆಯೂ ತನಿಖೆಯ ಗಂಭೀರತೆ ಹೆಚ್ಚಿಸಲಿದೆ ಎಂದು ಹೇಳಲಾಗಿದೆ.
ಗುರುವಾರವೇ ನಗರಕ್ಕಾಗಮಿಸಿರುವ ಇನ್ಸ್‌ಪೆಕ್ಟರ್ ಬಸವರಾಜ ತೇಲಿ ನೇತೃತ್ವದ ತಂಡ ಮಾಹಿತಿ ಕಲೆ ಹಾಕುತ್ತಿದ್ದು, ಈ ಪ್ರಕರಣದಲ್ಲಿ ಮಾರ್ಗದರ್ಶನ ಹಾಗೂ ಹೆಚ್ಚಿನ ಚುರುಕು ನೀಡಲು ರೈಲ್ವೆ ಪೊಲೀಸ್ ಡಿಎಸ್‌ಪಿ ಲೋಕೇಶ್ವರಪ್ಪ ಅವರೂ ಸಹ ಬೀದರ್‌ನಲ್ಲಿ ಬಿಡಾರ ಹೂಡಿದ್ದು ತನಿಖೆಯ ಗಂಭೀರತೆಯನ್ನು ಸ್ಪಷ್ಟಪಡಿಸುತ್ತಿದೆ. ಅಲ್ಲದೆ ಡೆತ್‌ನೋಟ್‌ನಲ್ಲಿ ಹೆಸರಿಸಲಾಗಿರುವ ಎಲ್ಲರಿಗೂ ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಒಳಪಡಿಸ ಬಹುದು ಅಥವಾ ಕೆಲವರಿಂದ ಮಾಹಿತಿ ಪಡೆಯಬಹುದಾಗಿದೆ ಎಂದು ಅಂದಾಜಿಸಲಾಗಿದೆ.