ಆನ್‌ಲೈನ್ ಗೇಮ್ ಹುಚ್ಚಾಟ, 12 ಲಕ್ಷ ರೂ ಸಾಲ, ಪೆಟ್ರೋಲ್ ಸುರಿದುಕೊಂದು ಯುವಕ ಸ್ವಹತ್ಯೆಗೆ ಯತ್ನ!

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ಆನ್‌ಲೈನ್ ಗೇಮ್‌ನಲ್ಲಿ 12 ಲಕ್ಷ ರೂ. ಕಳೆದುಕೊಂಡ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ಯುವಕ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರಿಂದ ಮನೆಯಲ್ಲಿ ಗೊತ್ತಾದರೆ ತೊಂದರೆಯಾಗುತ್ತದೆ ಎಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

a young man-who lost 12 lakh rupees in an onlinegame tried to-commit suicide bidar rav

ಬೀದರ್ (ಡಿ.26): ಮೊಬೈಲ್ ಆನ್‌ಲೈನ್ ಗೇಮ್ ಹುಚ್ಚಾಟಕ್ಕೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡ ವ್ಯಕ್ತಿಯೊಬ್ಬರು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಜ್ಯೋತಿ ತಾಂಡದಲ್ಲಿ ನಡೆದಿದೆ.

ವಿಜಯ್‌ಕುಮಾರ್ ಜಗನ್ನಾಥ ಹೊಳ್ಳೆ(25), ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ಮಧ್ಯೆ ನರಳಾಡುತ್ತಿರುವ ವ್ಯಕ್ತಿ. ಮೂಲತಃ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಯುವಕನಾಗಿರುವ ವಿಜಯ ಕುಮಾರ್, ಬಿ. ಫಾರ್ಮಾಸಿ ಪದವೀಧರನಾಗಿದ್ದರೂ, ಬೇಗ ಮತ್ತು ಸುಲಭವಾಗಿ ಹಣ ಗಳಿಸುವ ದುರಾಸೆಯಿಂದ ಆನ್‌ಲೈನ್‌ ಗೇಮ್ ಹುಚ್ಚು ಹತ್ತಿಸಿಕೊಂಡಿದ್ದ ವಿಜಯಕುಮಾರ್. 

ಆನ್‌ಲೈನ್ ಗೇಮ್ ಸಾಲ ತೀರಿಸಲು ದರೋಡೆ; ಮರ ಕತ್ತರಿಸುವ ಯಂತ್ರದಿಂದ ಅಡ್ಡ ಬಂದವರನ್ನು ಕತ್ತರಿಸಿದ ಇಬ್ರಾಹಿಂ!

ಕಳೆದ ಕೆಲವು ತಿಂಗಳಿಂದ ಆನ್‌ಲೈನ್‌ಗೇಮ್‌ ನಲ್ಲಿ ಸುಮಾರು 12 ಲಕ್ಷ ರೂ ಕಳೆದುಕೊಂಡಿದ್ದ ಯುವಕ. ಅದಕ್ಕಾಗಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ. ಈಗಾಗಲೇ 10 ಲಕ್ಷ ರೂ. ಸಾಲವನ್ನು ತೀರಿಸಿದ್ದ ಕುಟುಂಬಸ್ಥರು. ಆದರೂ ಮತ್ತೆ 2 ಲಕ್ಷ ರೂ. ಆನ್‌ಲೈನ್ ಗೇಮ್ ಆಡಲೆಂದೇ ಸಾಲ ಮಾಡಿದ್ದ ವಿಜಯ ಕುಮಾರ. ಮತ್ತೆ ಸಾಲ ಮಾಡಿಕೊಂಡಿರುವ ವಿಷಯ ಮನೆಯಲ್ಲಿ ಗೊತ್ತಾದ್ರೆ ತೊಂದರೆ ಆಗುತ್ತೆ ಎಂದು ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಗಂಭೀರ ಗಾಯಗೊಂಡಿರುವ ಯುವಕನನ್ನು ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಪ್ರಕರಣ ಸಂಬಂಧ ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios