Breaking News: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ರೈಲಿಗೆ ತಲೆಕೊಟ್ಟು ಜೀವ ಬಿಟ್ಟ ಗುತ್ತಿಗೆದಾರ!
ಬೀದರ್‌ನಲ್ಲಿ ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತರಿಂದ ಕೊಲೆ ಬೆದರಿಕೆ ಮತ್ತು ಹಣದ ಬೇಡಿಕೆ ಇಡಲಾಗಿದೆ ಎಂದು ಆರೋಪಿಸಲಾಗಿದೆ. ಏಳು ಪುಟಗಳ ಡೆತ್ ನೋಟ್‌ನಲ್ಲಿ ಆರು ಜನರ ಹೆಸರು ಉಲ್ಲೇಖವಾಗಿದೆ.
ಬೀದರ್ (ಡಿ.26): ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮಿಷನ್ ಆರೋಪ ಪ್ರಕರಣದಲ್ಲಿ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ತನ್ನದೇ ಸರ್ಕಾರದಲ್ಲಿ ಗುತ್ತಿಗೆದಾರರ ಸರಣಿ ಆತ್ಮಹತ್ಯೆಗೆ ಕೊನೆ ಇಲ್ಲದಂತಾಗಿದೆ.
ವಾಲ್ಮೀಕಿ ಹಗರಣದಲ್ಲಿ ಅಧಿಕಾರಿ ಆತ್ಮಹತ್ಯೆ, ದಾವಣಗೆರೆಯಲ್ಲಿ ಗುತ್ತಿಗೆದಾರ ಪಿ.ಎಸ್. ಗೌಡರ್ ಆತ್ಮಹತ್ಯ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ಹಣಕ್ಕೆ ಬೇಡಿಕೆ ಹಿನ್ನೆಲೆ ಬೀದರ್ ಗುತ್ತಿಗೆದಾರ ರೈಲ್ವೆ ಟ್ರ್ಯಾಕ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಸಚಿನ್ ಪಂಚಾಳ (26) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಕಟ್ಟಿತೂಂಗಾವ್ ಗ್ರಾಮದವರಾಗಿರುವ ಮೃತ ಸಚಿನ್. ಏಳುಪುಟಗಳ ಸಮಗ್ರವಾದ ಡೆಟ್ ನೋಟ್ ಬರೆದಿದ್ದು ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿಯ ಮಾಜಿ ಕಾರ್ಪೊರೇಟರ್ ರಾಜು ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ಮೇಲೆ ಗಂಭೀರ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ: ಸಿವಿಲ್ ಗುತ್ತಿಗೆದಾರರ 25,000 ಕೋಟಿ ಬಿಲ್ ಸರ್ಕಾರದಿಂದ ಬಾಕಿ
ಗುತ್ತಿಗೆದಾರ ಸಚಿನ್‌ಗೆ ಲಕ್ಷಾಂತರ ರೂ ವಂಚನೆ:
ಪ್ರಿಯಾಂಕ್ ಖರ್ಗೆ ಆಪ್ತನಾಗಿರುವ ರಾಜು ಕಪನೂರು ಟೆಂಡರ್ ಕೊಡುವ ವಿಚಾರಕ್ಕೆ ಗುತ್ತಿಗೆದಾರ ಸಚಿನ್‌ನಿಂದ ಸುಮಾರು 15 ಲಕ್ಷ ರೂಪಾಯಿಗೂ ಅಧಿಕ ಹಣ ಪಡೆದು ಟೆಂಡರ್ ನೀಡದೇ ವಂಚನೆ ಮಾಡಿದ್ದಲ್ಲದೇ ಬಳಿಕ ಮತ್ತೂ 1 ಕೋಟಿ ರೂ.ಹಣಕ್ಕೆ ಬೇಡಿಕೆ ಇಡಲಾಗಿದೆ, 1 ಕೋಟಿ ರೂಪಾಯಿ ಕೊಡದಿದ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆ ಗುತ್ತಿಗೆದಾರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಆರೋಪಿಸಲಾಗಿದೆ.
ಮುಸ್ಲಿಂ ಗುತ್ತಿಗೆದಾರರ ಕಾಮಗಾರಿ ಮೀಸಲಾತಿ ಬಗ್ಗೆ ಇನ್ನೂ ನಿರ್ಣಯ ಮಾಡಿಲ್ಲ: ಸಚಿವ ಎಚ್.ಕೆ. ಪಾಟೀಲ
ಕುಟುಂಬಸ್ಥರ ಅಕ್ರಂದನ:
ಪ್ರಿಯಾಂಕ್ ಖರ್ಗೆ ಆಪ್ತನ ಕೊಲೆ ಬೆದರಿಕೆಗೆ ಹೆದರಿ ಸೂಸೈಡ್ ಮಾಡಿಕೊಂಡಿರುವ ಗುತ್ತಿಗೆದಾರ ಸಚಿನ್ ಮೃತದೇಹ ರಕ್ತಸಿಕ್ತವಾಗಿ ರುಂಡಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಪತ್ತೆಯಾಗಿದೆ. ಜೀವ ಬಿಟ್ಟ ಸ್ಥಳದಲ್ಲಿ ಕುಟುಂಬಸ್ಥರ ಅಕ್ರಂದನ ಮುಗಿಲುಮುಟ್ಟಿದೆ. ಪತ್ರದಲ್ಲಿ ಉಲ್ಲೇಖಿಸಿರುವ ಆರೋಪಿಗಳನ್ನು ಸ್ಥಳಕ್ಕೆ ಕರೆಸುವಂತೆ ಕುಟುಂಬಸ್ಥರು ಒತ್ತಾಯಿಸಿದರು. ಡೆತ್ ನೋಟ್‌ನಲ್ಲಿ ರಾಜು ಕುಪನೂರು ಸೇರಿ ಐದಾರು ಜನರನ್ನು ಉಲ್ಲೇಖಿಸಿರುವ ಗುತ್ತಿಗೆದಾರರ. ಅವರೆಲ್ಲನ್ನು ಸ್ಥಳಕ್ಕೆ ಕರೆಸಬೇಕು ಅವರು ಬರೋವರೆಗೆ ಇಲ್ಲಿಂದ ಮೃತದೇಹ ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದರು. ಕೊನೆಗೆ ಕುಟುಂಬಸ್ಥರ ವಿರೋಧದ ನಡುವೆ ಮೃತದೇಹ ಶವಾಗಾರಕ್ಕೆ ರವಾನಿಸಿದ ಪೊಲೀಸರು. ಈ ಘಟನೆ ಸಂಬಂಧ ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.