Asianet Suvarna News Asianet Suvarna News

ರಕ್ಷಾ ಬಂಧನದಂದೇ ಜೀವದ ಹಂಗು ತೊರೆದು ಅಕ್ಕನ ರಕ್ಷಣೆಗೆ ಕೆರೆಗೆ ಹಾರಿದ ತಮ್ಮ: ನಡೆಯಿತು ದುರಂತ..!

ನೀರಿಗೆ ಇಳಿದಿದ್ದ ಸಕ್ಕುಬಾಯಿ ಹಾಗೂ ಚಾಂದನಿ ನೀರಿನಲ್ಲಿ ಸಿಲುಕಿ ಒದ್ದಾಡುತಿದ್ದಾಗ ಅಲ್ಲಿಯೇ ಇದ್ದ ಚಾಂದನಿಯ ಕಿರಿಯ ಸಹೋದರ ಶಾಂತಪ್ಪ ಎನ್ನುವ ಬಾಲಕ ಹಾಗೂ ಮೃತ ಬಾಲಕಿಯರ ಸಹಪಾಠಿ ಆಗಿರುವ ಕೀರ್ತಿ ಸಕಾರಾಮ್ ಎನ್ನುವ ಬಾಲಕಿ ತಕ್ಷಣ ನೀರಿಗಿಳಿದು ಬಾಲಕಿಯರ ರಕ್ಷಣೆಗೆ ಹರಸಾಹಸ ಪಟ್ಟಿದ್ದಾನೆ. 

Two Girls Dies Due to Drowned in Water While Swimming in Bidar grg
Author
First Published Aug 31, 2023, 1:42 PM IST

ಬೀದರ್‌(ಆ.31): ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕಿಯರು ನೀರಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬಸವಕಲ್ಯಾಣ ತಾಲೂಕಿನ ಫುಲ್ದರ್ ವಾಡಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಸಮೀಪದಲ್ಲಿರುವ ಕೆರೆಯಲ್ಲಿ ಈಜಲು ಹೋದ ವೇಳೆ ನೀರಿನಾಳದಲ್ಲಿ ಸಿಲುಕಿ ಸಕ್ಕುಬಾಯಿ ಸುರೇಶ (15) ಹಾಗೂ ಚಾಂದನಿ ಬಾಬುರಾವ್ (15) ಸಾವನ್ನಪ್ಪಿರುವ ಬಾಲಕಿಯರಾಗಿದ್ದಾರೆ.

ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಮಂಠಾಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಸಚಿವ ಈಶ್ವರ ಖಂಡ್ರೆ ಜನಸ್ಪಂದನ ನೆಪ ಮಾತ್ರ: ಕೇಂದ್ರ ಸಚಿವ ಭಗವಂತ ಖೂಬಾ

ಕೆರೆಗೆ ಜಿಗಿದು ರಕ್ಷಿಸಲೆತ್ನಿಸಿದ ಸಾಹಸಿ ಬಾಲಕ:

ಬಸವಕಲ್ಯಾಣ ತಾಲೂಕಿನ ಫುಲ್ದರ್ ವಾಡಿ ಗ್ರಾಮದ ಕೆರೆ ನೀರಿನಲ್ಲಿ ಮುಳುಗುತ್ತಿದ್ದ ಚಾಂದನಿ ಹಾಗೂ ಸಕ್ಕುಬಾಯಿಯ ರಕ್ಷಣೆಗೆ 14 ವರ್ಷದ ಬಾಲಕನೋರ್ವ ಶಕ್ತಿ ಮೀರಿ ಪ್ರಯತ್ನಿಸಿದ ಪ್ರಸಂಗ ಜರುಗಿದೆ.

ಬೀದರ್ ಪೊಲೀಸ್ ಇಲಾಖೆಯಿಂದ 'ರನ್ ಫಾರ್ ರೋಡ್ ಸೇಫ್ಟಿ' ಅಭಿಯಾನ

ನೀರಿಗೆ ಇಳಿದಿದ್ದ ಸಕ್ಕುಬಾಯಿ ಹಾಗೂ ಚಾಂದನಿ ನೀರಿನಲ್ಲಿ ಸಿಲುಕಿ ಒದ್ದಾಡುತಿದ್ದಾಗ ಅಲ್ಲಿಯೇ ಇದ್ದ ಚಾಂದನಿಯ ಕಿರಿಯ ಸಹೋದರ ಶಾಂತಪ್ಪ ಎನ್ನುವ ಬಾಲಕ ಹಾಗೂ ಮೃತ ಬಾಲಕಿಯರ ಸಹಪಾಠಿ ಆಗಿರುವ ಕೀರ್ತಿ ಸಕಾರಾಮ್ ಎನ್ನುವ ಬಾಲಕಿ ತಕ್ಷಣ ನೀರಿಗಿಳಿದು ಬಾಲಕಿಯರ ರಕ್ಷಣೆಗೆ ಹರಸಾಹಸ ಪಟ್ಟಿದ್ದಾರೆ. 

ರಕ್ಷಣೆಗೆ ಮುಂದಾದ ಕೀರ್ತಿ ಹಾಗೂ ಶಾಂತಪ್ಪ ಇಬ್ಬರಿಗೂ ನೀರಿನಲ್ಲಿ ಅಪಾಯ ಎದುರಾದ ಹಿನ್ನೆಲೆಯಲ್ಲಿ ಕೆರೆಯಿಂದ ಹೊರ ಬರುತ್ತಿದ್ದ ವೇಳೆ ಕೀರ್ತಿ ಸಹ ನೀರಿನಾಳಕ್ಕೆ ಸಿಲುಕುವ ಆತಂಕ ಕಂಡುಬಂದ ಹಿನ್ನೆಲೆಯಲ್ಲಿ ಅಲ್ಲಿಯೇ ಇದ್ದ ಶಾಂತಪ್ಪ ಕೀರ್ತಿಗೆ ನೀರಿನಿಂದ ಹೊರ ತರುವ ಮೂಲಕ ರಕ್ಷಣೆ ಮಾಡಿದ್ದಾನೆ. ಬಾಲಕ ಶಾಂತಪ್ಪನ ಸಾಹಸಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios