ಮಾದಕ ವಸ್ತು ಮಾರಾಟ ಮಾಡುತ್ತಿವರನ್ನು ಬಂಧಿಸಿ ಅವರಿಂದ ನೋಟು ಎಣಿಸುವ ಯಂತ್ರ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು[ಮೇ. 02] ಡ್ರಗ್ಸ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಲಾಗಿದ್ದು ಅವರಿಂದ ಯಂತ್ರ ಸೇರಿದಂತೆ ಅನೇಕ ಉಪಕರಣ ವಶಪಡಿಸಿಕೊಳ್ಳಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾದಕ ವಸ್ತು ನಿಯಂತ್ರಣ ದಳ ಕೆಂಗೇರಿಯಲ್ಲಿ‌ ಡ್ರಗ್ಸ್ ‌ಲ್ಯಾಬ್ ನಡೆಸುತ್ತಿದ್ದವರನ್ನು ಬಂಧಿಸಿದೆ. ಮಾದಕ ವಸ್ತು ತಯಾರು ಮಾಡುತ್ತಿದ್ದ ಲ್ಯಾಬ್ ಮೇಲೆ ದಾಳಿ ನಡೆಸಿ ಶಿವರಾಜ್ ಅರಸ್ ಹಾಗೂ ಕಣ್ಣನ್ ಎಂಬುವರನ್ಇನು ಬಂಧಿಸಲಾಗಿದೆ.

ಡ್ರಗ್ಸ್ಗಿಂತಲೂ ಹೆಚ್ಚು ಅಡಿಕ್ಟ್ ಆಗೋ ಆಹಾರಗಳಿವು...

ಡ್ರಗ್ಸ್ ತಯಾರುಸುತ್ತಿದ್ದ ಯಂತ್ರಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬ್ಲೂ ಬಾಕ್ಸ್ ಓವೆನ್ ಹಾಗೂ ಹಣ ಕೌಂಟಿಗ್ ಯಂತ್ರ ಸಹ ಮಾರಾಟಗಾರರ ಬಳಿ ಸಿಕ್ಕಿದೆ. ಇವರು ಕೆಟಾಮಿನ್ ಡ್ರಗ್ಸ್ ನ್ನು ತಯಾರು ಮಾಡುತ್ತಿದ್ದು ಇದನ್ನು ಅನಸ್ತೇಶಿಯಾ ರೀತಿ ಎಚ್ಚರ ತಪ್ಪಿಸಲು ಬಳಕೆ ಮಾಡಲಾಗುತ್ತಿತ್ತು. ಹಲವು ಅತ್ಯಾಚಾರದ ಪ್ರಕರಣದಲ್ಲಿಯೂ ಈ ಡ್ರಗ್ಸ್ ಬಳಕೆ ಮಾಡಿದ ಉದಾಹರಣೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.