ಮಂಗಳೂರು(ಫೆ.09): ಓವರ್‌ಟೇಕ್ ಮಾಡೋ ಭರದಲ್ಲಿ ಕಾರು ಟ್ಯಾಂಕರ್‌ಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಒಬ್ಬನ ಸ್ಥಿತಿ ಗಂಭೀರವಾಗಿದೆ.

ಕಾರು-ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿದ್ದು, ಇಬ್ಬರ ಮೃತಪಟ್ಟಿದ್ದು ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಬೆದ್ರೋಡಿಯಲ್ಲಿ ಘಟನೆ ನಡೆದಿದೆ.

ಆ್ಯಸಿಡ್ ದಾಳಿ ಪ್ರಕರಣ ನಿರ್ಲಕ್ಷ್ಯಿಸಿದ ಪೊಲೀಸ್ ಅಮಾನತು

ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬೆದ್ರೋಡಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದ್ದು, ಜೈನಿ ಶಾಜಿ(30) ಜಿಸನ್(40)ಮೃತ ದುರ್ದೈವಿಗಳು. ಜಿಸನ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಓವರ್ ಟೇಕ್ ಮಾಡುವ ಭರದಲ್ಲಿ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿದೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಆಂಧ್ರ ಸಾರಿಗೆ-ಬೈಕ್ ಡಿಕ್ಕಿ, ಸವಾರ ಸಾವು