Road Accident: ನಿಂತಿದ್ದ ಕಾರಿಗೆ ಕ್ಯಾಂಟರ್ ಡಿಕ್ಕಿ: ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು
* ಶಮರಿಮಲೆಗೆ ಹೋಗಿ ವಾಪಸ್ ಬರುತ್ತಿದ್ದ ಇಬ್ಬರು ಸಾವು
* ಸ್ಟೆಪ್ನಿ ಬದಲಾವಣೆ ಮಾಡಲು ಕಾರನ್ನು ರಸ್ತೆ ಪಕ್ಕ ನಿಲ್ಲಿಸಲಾಗಿತ್ತು
* ಆದ್ರೆ, ಲಾರಿ ಹಿಂದಿನಿಂದ ಬಂದು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ
ಚಿಕ್ಕಬಳ್ಳಾಪುರ, (ಜ.08): ಕಾರಿಗೆ ಹಿಂಬದಿಯಿಂದ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಅಯ್ಯಪ್ಪಸ್ವಾಮಿ ಭಕ್ತರು ಸ್ಥಳದಲ್ಲಿಯೆ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ(ಛhikkaballapur) ತಾಲೂಕಿನ ಪೆರೇಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತರನ್ನು ನೆರೆಯ ಆಂಧ್ರಪ್ರದೇಶ ಮೂಲದ ಧರಣೀಶ್(22), ನಿರಂಜನ್ ಸಿಂಗ್(54) ಎಂದು ಗುರುತಿಸಲಾಗಿದೆ. ಅನಂತಪುರ ಜಿಲ್ಲೆ ಗುಂತಕಲ್‌ನ ನರಸಿಂಗರಾಜು, ಮಾಮಿಡಿ ನಾಗೇಶ್ಗೌಡ, ಸಿ.ನಾರಾಯಣಪ್ಪ, ಧರಣೀಶ್, ಗಣೇಶ್, ನಿರಂಜನ್ ಸಿಂಗ್ ಅವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದು, ಕನ್ಯಾಕುಮಾರಿ ಮತ್ತಿತರ ಸ್ಥಳಕ್ಕೆ ಭೇಟಿ ನೀಡಿ ಪೆರೇಸಂದ್ರದ ಮೂಲಕ ಸ್ವಗ್ರಾಮಕ್ಕೆ ಪ್ರಯಾಣ ಬೆಳೆಸಿದ್ದರು.
Safety Car 120ರ ವೇಗದಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದು 4 ಪಲ್ಟಿಯಾದ ಟಾಟಾ ಪಂಚ್, ಐವರು ಪ್ರಯಾಣಿಕರು ಸೇಫ್!
ಶನಿವಾರ ಬೆಳಗ್ಗೆ 5.15ರ ವೇಳೆಗೆ ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕು ರೆಡ್ಡಿಗೊಲ್ಲಾರಹಳ್ಳಿ ಮತ್ತು ದೊಡ್ಡಪೈಯಲಗುರ್ಕಿ ಕ್ರಾಸ್ ಮಧ್ಯೆ ಕಾರಿನ ಹಿಂಭಾಗದ ಚಕ್ರ ಪಂಕ್ಚರ್ ಆಗಿತ್ತು. ರಸ್ತೆಯ ಎಡಕ್ಕೆ ನಿಲ್ಲಿಸಿ ಪಾರ್ಕಿಂಗ್ ಲೈಟನ್ನು ಹಾಕಿ 4 ಜನರು ಕೆಳಕ್ಕೆ ಇಳಿದಿದ್ದರು. ನಿರಂಜನ್ ಸಿಂಗ್ ಮಾತ್ರ ಕಾರಿನಲ್ಲಿ ಮಲಗಿದ್ದರು. ಡಿಕ್ಕಿಯಿಂದ ಸ್ಟೆಪ್ನಿ ತೆಗೆಯುತ್ತಿದ್ದಾಗ ಹಿಂಬದಿಯಿಂದ ಬಂದ ಐಚರ್ ಕ್ಯಾಂಟರ್ ಡಿಕ್ಕಿ ಹೊಡೆದಿದೆ.
ಪರಿಣಾಮ ಧರಣೀಶ್ ಸ್ಥಳದಲ್ಲೆ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿದ್ದ ನಿರಂಜನ್‌ಸಿಂಗ್ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲೆ ಕೊನೆಯುಸಿರೆಳೆದಿದ್ದಾರೆ. ಈ ಬಗ್ಗೆ ಪೆರೇಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಿಪ್ಪರ್ ಪಲ್ಟಿ ಚಾಲಕನ ಮಗ ಸಾವು
ಗುಂಡ್ಲುಪೇಟೆ: ಶನಿವಾರ ಬೆಳಗ್ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಬೆನ್ನಲ್ಲೆ ಶನಿವಾರ ರಾತ್ರಿ ಮತ್ತೊಂದು ಟಿಪ್ಪರ್ ಆಯತಪ್ಪಿ ಉರುಳಿ ಬಿದ್ದು ಟಿಪ್ಪರ್ ಚಾಲಕನ ಮಗ ಸಾವನ್ನಪ್ಪಿದ ಘಟನೆ ತಾಲೂಕಿನ ಬೇಗೂರು ಪೊಲೀಸ್ ಠಾಣೆಯ ಮುಂದೆ ನಡೆದಿದೆ.
ಮೈಸೂರು ಕಡೆಯಿಂದ ಬೇಗೂರು ಬಳಿ ಕ್ರಸರ್ಸ್ ಗೆ ಎಂ.ಸ್ಯಾಂಡ್ ತುಂಬಲು ಬರುತ್ತಿದ್ದ ಟಿಪ್ಪರ್ ಪಲ್ಟಿ ಹೊಡೆದಾಗ ಚಾಲಕನಿಗೆ ತೀವ್ರ ಪೆಟ್ಟು ಬಿದ್ದರೆ,ಚಾಲನ ಮಗ ಎನ್ನಲಾದ ಯುವಕನ ಸಾವಿಗೀಡಾಗಿದ್ದಾನೆ.
ಟಿಪ್ಪರ್ ಉರುಳಿ ಬಿದ್ದ ಸದ್ದಿಗೆ ಬೇಗೂರು ಠಾಣೆಯಲ್ಲಿದ್ದ ಪೊಲೀಸರು ಹೊರ ಬಂದು ನೋಡಿದಾಗ ಓರ್ವ ಸಾವನ್ನಪ್ಪಿದ್ದಾನೆ. ಸಾವನ್ನಪ್ಪಿದ ಯುವಕನ ಶವ ಹಾಗು ಗಾಯಗೊಂಡಚಾಲಕನನ್ನು ಬೇಗೂರು ಆಸ್ಪತ್ರೆಗೆ ಬೇಗೂರು ಸಾಗಿಸಿದ್ದಾರೆ.
ಅವಘಡಕ್ಕೆ ಕಾರಣ
ಬೇಗೂರು ಸುತ್ತಮುತ್ತಲಿನ ಕ್ರಸರ್ಸ್ ಗಳು ರಾತ್ರಿ ವೇಳೆ ಕ್ರಸ್ಸಿಂಗ್ ಮಾಡುವುದು ದೃಡ ಪಟ್ಟಿದೆ. ಕನ್ನಡಪ್ರಭ ಪತ್ರಿಕೆ ರಾತ್ರಿ ವೇಳೆ ಕ್ರಸ್ಸಿಂಗ್ ಮಾಡುತ್ತಿವೆ ಎಂದು ವರದಿ ಪ್ರಕಟಿಸಿತ್ತು ಆದರೆ ತಾಲೂಕು ಆಡಳಿತ ಎಚ್ಚೆತ್ತುಕೊಂಡಿರಲಿಲ್ಲ.
ಎಂ.ಸ್ಯಾಂಡ್ ತುಂಬಲ ಬಂದ ಟಿಪ್ಪರ್ ಪಲ್ಟಿ ಹೊಡೆದು ಒಬ್ಬನ ಸಾವಿಗೆ ಕಾರಣ.ರಾತ್ರಿ ಕ್ರಸರ್ಸ್ ಕ್ರಸ್ಸಿಂಗ ನಿಲ್ಲಿಸಲು ತಾಲೂಕು ಆಡಳಿತಕ್ಕೆ ಇರುವ ಅಡ್ಡಿಯಾದರೂ ಏನು ಎಂದು ಜನರ ಪ್ರಶ್ನೆಯಾಗಿದೆ.
ಬೆಂಗಳೂರಲ್ಲಿ ಭೀಕರ ಅಪಘಾತ
ಬೆಂಗಳೂರು: ನೈಸ್ ರೋಡ್ನಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾಲ್ವರ ಬಲಿಯಾಗಿದ್ದಾರೆ.
ಎರಡು ಕಾರು, ಒಂದು ಕ್ಯಾಂಟರ್ಗೆ ಲಾರಿ ಡಿಕ್ಕಿ ಹೊಡೆದಿದ್ದು, ಇಬ್ಬರು ಪುರುಷರು, ಇಬ್ಬರು ಮಹಿಳೆಯರ ದುರ್ಮರಣ ಹೊಂದಿದ್ದಾರೆ. ದುರಸ್ತಿ ಕಾರ್ಯದಿಂದ ನೈಸ್ ರೋಡ್ ಜಾಮ್ ಆಗಿತ್ತು. ಟ್ರಾಫಿಕ್ ಜಾಮ್ನಿಂದ ವಾಹನಗಳು ಸಾಲಾಗಿ ನಿಂತಿದ್ದು, ಅತಿವೇಗವಾಗಿ ನುಗ್ಗಿದ ಲಾರಿ ಮುಂದಿರೋ ಕಾರ್ಗಳಿಗೆ ಡಿಕ್ಕಿ ಹೊಡೆದಿದೆ. ಬನ್ನೇರುಘಟ್ಟದಿಂದ ತುಮಕೂರು ಕಡೆಗೆ ಹೊರಟಿದ್ದ ಕಾರಿಗೆ ಡಿಕ್ಕಿಯಾಗಿದೆ.
ವೋಕ್ಸ್ ವ್ಯಾಗನ್, ಕ್ವಾಲಿಸ್ ಕಾರಿಗೆ ಪರಸ್ಪರ ಡಿಕ್ಕಿಯಾಗಿದ್ದು, ಕ್ವಾಲಿಸ್ ಕಾರು ಮುಂದೆ ನಿಂತಿದ್ದ ಲಾರಿಗೆ ಗುದ್ದಿದೆ. ಮಧ್ಯೆ ಸಿಲುಕಿ ವ್ಯಾಗನಾರ್ ಕಾರು ಅಪ್ಪಚ್ಚಿಯಾಗಿದ್ದು, ವೋಲ್ಸ್ ವ್ಯಾಗನ್ ಕಾರಿನಲ್ಲಿದ್ದ ನಾಲ್ವರ ದುರ್ಮರಣ ಹೊಂದಿದ್ದಾರೆ. ಮಹಮ್ಮದ್ ಫಾದಿಲ್, ಶಿಲ್ಪಾ, ಅಭಿಲಾಷ್ ಸೇರಿ ನಾಲ್ವರು ಸಾವನಪ್ಪಿದ್ದಾರೆ.