Asianet Suvarna News Asianet Suvarna News

ಉಡುಪಿ: ಎರಡು ದಿನಗಳ ವೆಂಡರ್ ಡೆವಲಪ್‌ಮೆಂಟ್ ಕಾರ್ಯಕ್ರಮ ಆಯೋಜನೆ

ಎರಡು ದಿನಗಳ ಈವೆಂಟ್‌ನ ಭಾಗವಾಗಿ, ಎಂಎಸ್‌ಎಂಇ ವಲಯದ ಪ್ರಯೋಜನಗಳಿಗಾಗಿ ಸಾರ್ವಜನಿಕ ಸಂಗ್ರಹಣೆ ನೀತಿ, ಜಿಇಎಂ (GeM) ಮತ್ತು ಇತರ ವಿವಿಧ ಸರ್ಕಾರಿ ಯೋಜನೆಗಳು, ಮಾರಾಟಗಾರರ ನೋಂದಣಿ, ಗುಣಮಟ್ಟದ ಮಾನದಂಡಗಳು, ಸಂಗ್ರಹಣೆ ಕಾರ್ಯವಿಧಾನಗಳು, ಕ್ರೆಡಿಟ್ ಸೌಲಭ್ಯಗಳು ಇತ್ಯಾದಿ ವಿಷಯಗಳ ಕುರಿತು ತಾಂತ್ರಿಕ ಸೆಮಿನಾರ್ ಆಯೋಜಿಸಲಾಗಿದೆ ಎಂದು ಎಂಎಸ್‌ಎಂಇ ಜಂಟಿ ನಿರ್ದೇಶಕ ದೇವರಾಜ್

two day vendor development program was organized at udupi rav
Author
First Published Mar 4, 2023, 1:51 PM IST

ಉಡುಪಿ (ಮಾ.4) : ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ಉದ್ಯಮ (MSME) ಅಭಿವೃದ್ಧಿ ಕಾರ್ಯಾಲಯ (ಶಾಖೆ), MSME ಸಚಿವಾಲಯ, ಭಾರತ ಸರ್ಕಾರ, ಮಂಗಳೂರು ಇವರು ನೇತೃತ್ವದಲ್ಲಿ ಮಾ.7 ಮತ್ತು 8 ರಂದು ಉಡುಪಿಯ ಎಮ್.ಜಿ.ಎಮ್ ಕಾಲೇಜಿನ ರವೀಂದ್ರ ಮಂಟಪದಲ್ಲಿ,  ಎರಡು ದಿನಗಳ ವೆಂಡರ್ ಡೆವಲಪ್ ಮೆಂಟ್ ಕಾರ್ಯಕ್ರಮವನ್ನು ಆಯೋಜಿಸಿದೆ. ಮಾ. 7 ರಂದು ಜಿಲ್ಲಾಧಿಕಾರಿಯವರು ಉದ್ಘಾಟಿಸಲಿದ್ದಾರೆ ಎಂದು ಎಂಎಸ್‌ಎಂಇ ಜಂಟಿ ನಿರ್ದೇಶಕ ದೇವರಾಜ್ ಹೇಳಿದರು. 

ಅವರು  ಬ್ರಹ್ಮಗಿರಿಯ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಕರ್ನಾಟಕ ಸರ್ಕಾರ ಉಡುಪಿ ಹಾಗೂ ಜಿಲ್ಲಾ ಸಣ್ಣ ಕೈಗಾರಿಕೆಗಳ ಸಂಘ, ಉಡುಪಿ ಮತ್ತು ಉಡುಪಿ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಸಹಯೋಗದೊಂದಿಗ ಆಯೋಜಿಸಲಾಗಿದೆ. ದೊಡ್ಡ ಪ್ರಮಾಣದ ಕೈಗಾರಿಕೆಗಳು, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಸಣ್ಣ ಉದ್ಯಮಗಳ ನಡುವೆ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

ಅಡಿಕೆ ಬೆಳೆಗಾರರು ತಮ್ಮ ಪರಿಸರಕ್ಕೆ ಹೊಂದುವ ರೀತಿಯಲ್ಲಿ ಕೃಷಿ ಮಾಡಬೇಕು

ಎರಡು ದಿನಗಳ ಈವೆಂಟ್‌ನ ಭಾಗವಾಗಿ, ಎಂಎಸ್‌ಎಂಇ ವಲಯದ ಪ್ರಯೋಜನಗಳಿಗಾಗಿ ಸಾರ್ವಜನಿಕ ಸಂಗ್ರಹಣೆ ನೀತಿ, ಜಿಇಎಂ (GeM) ಮತ್ತು ಇತರ ವಿವಿಧ ಸರ್ಕಾರಿ ಯೋಜನೆಗಳು, ಮಾರಾಟಗಾರರ ನೋಂದಣಿ, ಗುಣಮಟ್ಟದ ಮಾನದಂಡಗಳು, ಸಂಗ್ರಹಣೆ ಕಾರ್ಯವಿಧಾನಗಳು, ಕ್ರೆಡಿಟ್ ಸೌಲಭ್ಯಗಳು ಇತ್ಯಾದಿ ವಿಷಯಗಳ ಕುರಿತು ತಾಂತ್ರಿಕ ಸೆಮಿನಾರ್ ಆಯೋಜಿಸಲಾಗಿದೆ ಎಂದರು. 

ಎಂಎಸ್‌ಎಂಇ ವಲಯಕ್ಕೆ ಅನೇಕ ಉತ್ಪನ್ನಗಳು ಮತ್ತು ಸೇವೆಗಳನ್ನು ಹೊರಗುತ್ತಿಗೆ ನೀಡುವ ಸರ್ಕಾರದ ವಿವಿಧ ವಿಭಾಗಗಳು, ರೈಲ್ವೆ, ರಕ್ಷಣಾ ವಲಯ, ಸಾರ್ವಜನಿಕ ವಲಯದ ಉದ್ಯಮಗಳು ಮತ್ತು ಇತರ ದೊಡ್ಡ ಪ್ರಮಾಣದ ಖಾಸಗಿ ಉದ್ಯಮಗಳಿಗೆ ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಅವಕಾಶವನ್ನು ಒದಗಿಸುವುದು.

"ಖರೀದಿದಾರ ಮಾರಾಟಗಾರ" ಸಂಬಂಧವನ್ನು ರೂಪಿಸಲು ಎಂಎಸ್‌ಎಂಇ ವಲಯದಲ್ಲಿ ಸೂಕ್ತವಾದ ಮಾರಾಟಗಾರರನ್ನು ಗುರುತಿಸಲು ದೊಡ್ಡ ಪುಮಾಣದ ಉದ್ಯಮಗಳನ್ನು ಸಕ್ರಿಯಗೊಳಿಸಲು.

ವಿದ್ಯಾವಂತ ಯುವಕರನ್ನು ಭಾರತೀಯ ಉದ್ಯಮಗಳ ವಿವಿಧ ವಲಯಗಳ ಸಾಮರ್ಥ್ಯಗಳಿಗೆ ಒಡಲು, ಅದರ ಮೂಲಕ ಉದ್ಯಮಶೀಲತೆಯನ್ನು ತಮ್ಮ ವೃತ್ತಿಯಾಗಿ ತೆಗೆದುಕೊಳ್ಳಲು ಅವರನ್ನು ಆಕರ್ಷಿಸುವುದು.

ವಸ್ತು ಪ್ರದರ್ಶನವು 2m X 2m ಗಾತ್ರದ ಸುಮಾರು 70 ಆಕ್ರೋನಾರ್ಮ್ ಸ್ಟಾಲ್‌ಗಳನ್ನು ಹೊಂದಿದ್ದು, ತಮ್ಮ ಉತ್ಪನ್ನಗಳನ್ನು ಪುದರ್ಶನ ಮಾಡಲು ಎಲ್ಲಾ ಸೌಕರ್ಯವನು ಮಾಡಿಕೊಡಲಾಗುತ್ತದೆ. ಸ್ಟಾಲ್‌ಗಳನ್ನು ಎಂಎಸ್‌ಇಗಳಿಗೆ ಫಸ್ಟ್ ಕಮ್ ಫಸ್ಟ್ ಸರ್ವ್ ಆಧಾರದ ಮೇಲೆ ಪೂರ್ವ ನೋಂದಣಿಯ ಮೇಲೆ ಉಚಿತವಾಗಿ ಹಂಚಲಾಗುತ್ತದೆ. ಸಾರ್ವಜನಿಕ ವಲಯದ ಉದ್ಯಮಗಳಾದ BEL, KIOCL LTD., ONGC - MRPL, NMPA ಇತ್ಯಾದಿಗಳು ಈವೆಂಟ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎಂದರು. 

ಆರ್ಥಿಕ ಚೇತರಿಕೆ to ತೆರಿಗೆ ವಿನಾಯಿತಿ, ನವ ಭಾರತ ನಿರ್ಮಾಣಕ್ಕೆ ಪೂರಕ ಬಜೆಟ್; ರಾಜೀವ್ ಚಂದ್ರಶೇಖರ್!

ಪತ್ರಿಕಾಗೋಷ್ಠಿಯಲ್ಲಿ ಎಂಎಸ್‌ಎಂಇ ಸಹಾಯಕ ನಿರ್ದೇಶಕ ಸುಂದರ ಶೇರಿಗಾರ್, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಜಿಲ್ಲಾ ಸಣ್ಣ ಕೈಗಾರಿಕ ಅಧ್ಯಕ್ಷ ಪ್ರಶಾಂತ್ ಬಾಳಿಗ ಉಪಸ್ಥಿತರಿದ್ದರು.

Follow Us:
Download App:
  • android
  • ios