Asianet Suvarna News

ಹಾವೇರಿ: ದನದ ಕೊಟ್ಟಿಗೆಗೆ ಬೆಂಕಿ, ಮೂಕಪ್ರಾಣಿಗಳು ಸಜೀವ ದಹನ

* ಹಾವೇರಿ ತಾಲೂಕಿನ ಕರಜಗಿ ಗ್ರಾಮದಲ್ಲಿ ನಡೆದ ಘಟನೆ
* ಬೆಂಕಿಯ ಕೆನ್ನಾಲಿಗೆಯಲ್ಲಿ ಸಾವನ್ನಪ್ಪಿದ ಆಕಳು ಮತ್ತು ಕುರಿಗಳು 
* ವಿದ್ಯುತ್ ಅವಘಡದಿಂದ ನಡೆದ ಘಟನೆ 
 

Two Cows and Two Sheeps Dies Due to Fire on Cattle Crib in Haveri grg
Author
Bengaluru, First Published Jul 18, 2021, 3:05 PM IST
  • Facebook
  • Twitter
  • Whatsapp

ಹಾವೇರಿ(ಜು.18): ಶಾರ್ಟ್ ಸರ್ಕ್ಯೂಟ್‌ನಿಂದ ದನದ ಕೊಟ್ಟಿಗೆ ಹೊತ್ತಿ ಉರಿದ ಪರಿಣಾಮ ಎರಡು ಆಕಳು, ಎರಡು ಕುರಿಗಳು ಸಜೀವವಾಗಿ ದಹನವಾದ ಹೃದಯವಿದ್ರಾವಕ ಘಟನೆ ತಾಲೂಕಿನ ಕರಜಗಿ ಗ್ರಾಮದಲ್ಲಿ ನಿನ್ನೆ(ಶನಿವಾರ) ತಡರಾತ್ರಿ ನಡೆದಿದೆ. 

ಬೆಂಕಿಯ ಕೆನ್ನಾಲಿಗೆಯಲ್ಲಿ ಸಾವನ್ನಪ್ಪಿದ ಆಕಳು ಮತ್ತು ಕುರಿಗಳು ಮಲ್ಲಪ್ಪ‌ ಹನ್ನಿ ಎಂಬುವರಿಗೆ ಸೇರಿದ್ದಾಗಿವೆ ಎಂದು ತಿಳಿದು ಬಂದಿದೆ. ಕಳೆದ ತಿಂಗಳ ಹಿಂದಷ್ಟೇ ರೈತ ಮಲ್ಲಪ್ಪ ಅವರು ಒಂದು ಲಕ್ಷ ರೂಪಾಯಿ ನೀಡಿ ಎರಡು ಆಕಳು ಖರೀದಿಸಿದ್ದರು. 

ಬಾಂಗ್ಲಾ ಜ್ಯೂಸ್‌ ಫ್ಯಾಕ್ಟರಿಗೆ ಬೆಂಕಿ: 52 ಜನ ಸಜೀವ ದಹನ!

ಮನೆಯ ಪಕ್ಕದಲ್ಲಿ ಹಾಕಲಾಗಿದ್ದ ಸೆಡ್‌ನಲ್ಲಿ ವಿದ್ಯುತ್ ಅವಘಡದಿಂದ ಈ ದುರ್ಘಟನೆ ಸಂಭವಿಸಿದೆ. ಎರಡು ಆಕಳು, ಎರಡು ಕುರಿಗಳು ಕೆಳದುಕೊಂಡು ಸೂಕ್ತ ಪರಿಹಾರಕ್ಕೆ ನೊಂದ ಮಲ್ಲಪ್ಪ ಅಂಗಲಾಚಿ ಬೇಡಿಕೊಂಡಿದ್ದಾರೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 
 

Follow Us:
Download App:
  • android
  • ios