Asianet Suvarna News Asianet Suvarna News

ಹಿರೇಕೆರೂರ: ಎತ್ತುಗಳ ಮೈತೊಳೆಯಲು ಹೋಗಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಸಾವು

* ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದ ಘಟನೆ
* ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೋಗಿ ನೀರುಪಾಲಾಗಿದ್ದ ಮಕ್ಕಳು
*  ಮುಗಿಲು ಮುಟ್ಟಿದ ಮೃತ ಬಾಲಕರ ಪಾಲಕರ ಆಕ್ರಂದನ 
 

Two Children Dies due to Fallen in to The Lake at Hirekerur in Haveri grg
Author
Bengaluru, First Published Jun 30, 2021, 12:06 PM IST
  • Facebook
  • Twitter
  • Whatsapp

ಹಿರೇಕೆರೂರ(ಜೂ.30): ಕೆರೆಯಲ್ಲಿ ಎತ್ತುಗಳ ಮೈತೊಳೆಯಲು ಹೋಗಿ ಕಾಲು ಜಾರಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ದೂದಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಅಭಿಷೇಕ ಬಸನಗೌಡ ಹಂಡೋರಿ (14) ಮತ್ತು ಹರೀಶ ಬಸವರಾಜ ಬಾಳಿಕಾಯಿ (13) ಎಂದು ಗುರುತಿಸಲಾಗಿದೆ. 

ಅಥಣಿ: ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನೀರು ಪಾಲಾಗಿದ್ದವರ ಶವ ಪತ್ತೆ

ಇಬ್ಬರು ಬಾಲಕರು ಗ್ರಾಮದ ಮಾಸೂರು ರಸ್ತೆಯಲ್ಲಿರುವ ಬಂದಮ್ಮನ ಕೆರೆಗೆ ಎತ್ತುಗಳ ಮೈತೊಳೆಯಲು ಹೋಗಿದ್ದು ಕಾಲು ಜಾರಿ ನಿರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಬಾಲಕರ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕರ ಆಕಸ್ಮಿಕ ಮರಣದಿಂದ ಗ್ರಾಮದಲ್ಲಿ ದುಃಖ ಆವರಿಸಿತ್ತು.
 

Follow Us:
Download App:
  • android
  • ios