Asianet Suvarna News

ಅಥಣಿ: ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನೀರು ಪಾಲಾಗಿದ್ದವರ ಶವ ಪತ್ತೆ

* ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ನಡೆದಿದ್ದ ಘಟನೆ
* ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನೀರು ಪಾಲಾಗಿದ್ದ ನಾಲ್ವರು ಸಹೋದರರು
* ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ
 

Four Dead Body Found at Krishna River at Athani in Belagavi grg
Author
Bengaluru, First Published Jun 30, 2021, 11:16 AM IST
  • Facebook
  • Twitter
  • Whatsapp

ಚಿಕ್ಕೋಡಿ(ಜೂ.30): ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಲ್ಯಾಳ ಗ್ರಾಮದ ಬಳಿ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನೀರು ಪಾಲಾದ ಒಂದೇ ಕುಟುಂಬದ ನಾಲ್ವರು ಸಹೋದರರ ಶವ ಪತ್ತೆಯಾಗಿವೆ. ನಿನ್ನೆ(ಮಂಗಳವಾರ) ಒಬ್ಬ ಹಾಗೂ ಇಂದು(ಬುಧವಾರ) ಮೂವರ ಶವ ಹೊರಕ್ಕೆ ತೆಗೆದ ಎನ್‌ಡಿಆರ್‌ಎಫ್‌ ಹಾಗೂ ಸ್ಥಳೀಯರು ಯಶಸ್ವಿಯಾಗಿದ್ದಾರೆ. 

ನಿನ್ನೆ ಸಿಕ್ಕಿದ್ದ ಪರಶುರಾಮ ಬನಸೊಡೆ, ಇಂದು ಶಂಕರ್, ಸದಾಶಿವ ಹಾಗೂ ಧರೆಪ್ಪ ಶವ ಪತ್ತೆಯಾಗಿವೆ.  ನಾಲ್ಕು ದಿನಗಳ ಹಿಂದೆ ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನಾಲ್ವರು ಸಹೋದರರ ನೀರಿನಲ್ಲಿ ಕಾಣೆಯಾಗಿದ್ದರು. 
ಶವಗಳ ಪತ್ತೆಗಾಗಿ ಕಳೆದ ಮೂರು ದಿನಗಳಿಂದ ಎನ್‌ಡಿಆರ್‌ಎಫ್‌ ಕಾರ್ಯಾಚರಣೆ ನಡೆಸಿತ್ತು. 

ಒಂದೇ ಕುಟುಂಬದ ನಾಲ್ವರು ಸಹೋದರರು ನೀರು ಪಾಲು

ಒಬ್ಬರನ್ನು ಕಾಪಾಡಲು ಹೋಗಿ ಮತ್ತೊಬ್ಬರಂತೆ ನಾಲ್ವರೂ ಸಹೋದರರು ನದಿ ನೀರು ಪಾಲಾಗಿದ್ದರು. ಇಂದು ಶವ ತೆಗೆಯುತ್ತಿದ್ದಂತೆ ಪೋಷಕರ ಅಕ್ರಂದನ ಮುಗಿಲು ಮುಟ್ಟಿತ್ತು. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

Follow Us:
Download App:
  • android
  • ios