* ಬೆಳಗಾವಿ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ನಡೆದ ಘಟನೆ* ನದಿಗೆ ಈಜಲು ತೆರಳಿದ್ದ ಬಾಲಕರು ನಾಪತ್ತೆ* ಖಾನಾಪುರ ಠಾಣೆಗೆ ದೂರು ನೀಡಿದ್ದ ಬಾಲಕರ ಪೋಷಕರು
ಬೆಳಗಾವಿ(ಜೂ.30): ನಾಪತ್ತೆಯಾಗಿದ್ದ ಇಬ್ಬರು ಬಾಲಕರು ಮಲಪ್ರಭಾ ನದಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಇಂದು(ಬುಧವಾರ) ನಡೆದಿದೆ. ಶ್ರೇಯಸ್ ಬಾಪಶೇಟ್(13), ರೋಹಿತ್ ಪಾಟೀಲ್ (15) ಎಂಬ ಬಾಲಕರೇ ನದಿಯಲ್ಲಿ ಶವವಾಗಿ ಪತ್ತೆಯಾದ ಮಕ್ಕಳಾಗಿದ್ದಾರೆ.
Add Asianetnews Kannada as a Preferred Source

ಮೃತ ಬಾಲಕರು ಖಾನಾಪುರ ಪಟ್ಟಣದ ದುರ್ಗಾನಗರ ನಿವಾಸಿಗಳು ಎಂದು ತಿಳಿದು ಬಂದಿದೆ. ಮನೆಯಲ್ಲಿ ಯಾರಿಗೂ ಹೇಳದೇ ಐವರು ಸ್ನೇಹಿತರು ಸೇರಿ ಕಳೆದ ಎರಡು ದಿನಗಳ ಹಿಂದೆ ಮಲಪ್ರಭಾ ನದಿಗೆ ಈಜಲು ತೆರಳಿದ್ದರು. ಈ ವೇಳೆ ಶ್ರೇಯಸ್ ಹಾಗೂ ರೋಹಿತ್ ಇಬ್ಬರೂ ನೀರು ಪಾಲಾಗಿದ್ದರು.
ಅಥಣಿ: ಕೃಷ್ಣಾ ನದಿಯಲ್ಲಿ ಹಾಸಿಗೆ ತೊಳೆಯಲು ಹೋಗಿ ನೀರು ಪಾಲಾಗಿದ್ದವರ ಶವ ಪತ್ತೆ
ಇಬ್ಬರೂ ಬಾಲಕರು ನೀರಿನಲ್ಲಿ ಮುಳುಗುವದನ್ನ ಕಂಡು ಇತರ ಬಾಲಕರು ಹೆದರಿ ಓಡಿ ಹೋಗಿದ್ದರು. ಬಾಲಕರು ಮನೆಗೆ ವಾಪಸಾಗದ ಹಿನ್ನೆಲೆ ನಾಪತ್ತೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು.
