ಉಡುಪಿ: ಮೂರು ದಿನದಲ್ಲಿ ಎರಡು ಚಿರತೆ ಸೆರೆ..!

ರಾಜ್ಯದಲ್ಲಿ ಹಲವು ಕಡೆ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಬೆಳೆ ನಾಶವಾಗುವುದಲ್ಲದೆ ಪ್ರಾಣ ಹಾನಿಯೂ ಸಂಭವಿಸುತ್ತಿದೆ. ಉಡುಪಿಯಲ್ಲಿಯೂ ಕಾಡು ಪ್ರಾಣಿಗಳ ಕಾಟ ಹೆಚ್ಚಿದ್ದು, ಮೂರೇ ದಿನಗಳಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

two cheetah trapped in threedays near udupi

ಉಡುಪಿ(ಡಿ.07): ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಚಿರತೆ ಸೆರೆ ಹಿಡಿಯಲಾಗಿದೆ. ಯಡಾಡಿ ಮತ್ಯಾಡಿ ಗ್ರಾಮದ ಗುಡ್ಡಟ್ಟುವಿನಲ್ಲಿ ಚಿರತೆ ಬೋನಿಗೆ ಬಿದ್ದಿದ್ದು, ಗ್ರಾಮಸ್ಥರ ಆತಂಕ ದೂರವಾಗಿದೆ.

ರಾಜ್ಯದಲ್ಲಿ ಹಲವು ಕಡೆ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರಿದ್ದು, ಬೆಳೆ ನಾಶವಾಗುವುದಲ್ಲದೆ ಪ್ರಾಣ ಹಾನಿಯೂ ಸಂಭವಿಸುತ್ತಿದೆ. ಉಡುಪಿಯಲ್ಲಿಯೂ ಕಾಡು ಪ್ರಾಣಿಗಳ ಕಾಟ ಹೆಚ್ಚಿದ್ದು, ಮೂರೇ ದಿನಗಳಲ್ಲಿ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ಖಾನಾಪುರ: ಪಾರವಾಡ ಕ್ರಾಸ್ ಬಳಿ ಹುಲಿ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

ಎರಡು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಚಿರತೆ ಸೆರೆಯಾಗಿತ್ತು. ಚಿರತೆ ಸೆರೆಯಾದ ದಿನವೇ ಇನ್ನೊಂದು ಚಿರತೆ ಕಾಣಿಸಿಕೊಂಡಿತ್ತು. ಪದೇ ಪದೇ ಚಿರತೆ ದಾಳಿಯಿಂದ ಆತಂಕಗೊಂಡಿದ್ದ ಗ್ರಾಮಸ್ಥರು ಕೊನೆಗೂ ನಿಟ್ಟುಸಿರು ಬಿಡುವಂತಾಗಿದೆ.

ಎರಡನೇ ಬಾರಿ ಚಿರತೆ ಕಾಣಿಸಿಕೊಂಡು ಭಯದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚಿರತೆ ಸೆರೆಗೆ ಬೋನು ವ್ಯವಸ್ಥೆ ಮಾಡಲಾಗಿತ್ತು. ಕೊನೆಗೂ ಭಯಪಡಿಸಿದ್ದ ಎರಡನೇ ಚಿರತೆಯೂ ಸೆರೆಯಾಗಿದೆ. ಅರಣ್ಯಾಧಿಕಾರಿಗಳಿಗೆ ಮಾಹಿತಿ ದೊರೆತಿದ್ದು, ಗ್ರಾಮಸ್ಥರು ನೆಮ್ಮದಿಯ‌ ನಿಟ್ಟುಸಿರು ಬಿಟ್ಟಿದ್ದಾರೆ.

ಮೈಸೂರು: ಚುನಾವಣಾ ಗದ್ದಲ ಮುಗಿಸಿ ಗೆಲುವಿಗಾಗಿ ಅಭ್ಯರ್ಥಿಗಳ ಟೆಂಪಲ್ ರನ್

Latest Videos
Follow Us:
Download App:
  • android
  • ios