ಜೈಲಿನಿಂದ ಹೊರಬರುತ್ತಿದ್ದಂತೆ ಕುಲಕರ್ಣಿ ವಿರುದ್ಧ ಮತ್ತೆರಡು ಕೇಸ್‌ ದಾಖಲು

*  ಕೊರೋನಾ‌ ರೂಲ್ಸ್ ಹಾಗೂ ವೀಕೆಂಡ್ ಕರ್ಪ್ಯೂ ಬ್ರೇಕ್ 
*  ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
*  ಜೈಲಿನಿಂದ ಮೆರವಣಿಗೆ ಮೂಲಕ ಬೆಳಗಾವಿ ನಗರಕ್ಕೆ ಎಂಟ್ರಿಯಾಗಿದ್ದ ಕುಲಕರ್ಣಿ

Two Cases Register Against Former Minister Vinay Kulkarni in Belagavi grg

ಬೆಳಗಾವಿ(ಆ.21): ಕೋವಿಡ್ ರೂಲ್ಸ್ ಹಾಗೂ ವೀಕೆಂಡ್ ಕರ್ಪ್ಯೂ ರೂಲ್ಸ್ ಬ್ರೇಕ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಿವೆ. ವಿನಯ್ ಕುಲಕರ್ಣಿ, ಕಾಂಗ್ರೆಸ್‌ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿ ಮುನ್ನೂರಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 

"

ಹಿಂಡಲಗಾ ಜೈಲಿನಿಂದ ಮೆರವಣಿಗೆ ಮೂಲಕ ಬೆಳಗಾವಿ ನಗರಕ್ಕೆ ಎಂಟ್ರಿಯಾಗಿದ್ದರು ವಿನಯ್ ಕುಲಕರ್ಣಿ.  ಮೆವರಣಿಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಕೋವಿಡ್‌ ನಿಯಮಗಳನ್ನ ಗಾಳಿಗೆ ತೂರಲಾಗಿತ್ತು. ಈ ಸಂಬಂಧ ಹಿಂಡಲಗಾ ಗ್ರಾಮ ಪಂಚಾಯತ್ ಪಿಡಿಓ ವಿನಯ್ ವಿರುದ್ಧ ಬೆಳಗಾವಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೊಲೆ ಪ್ರಕರಣ: ನಾನು ನಿರ್ದೋಶಿಯಾಗಿ ಹೊರಗೆ ಬರ್ತೇನೆ, ವಿನಯ್‌ ಕುಲಕರ್ಣಿ

ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆ ಅಡಿಯಲ್ಲಿ ಸೆಕ್ಷನ್ 188 ನಡಿಯಲ್ಲಿ ಕೇಸ್ ದಾಖಲಾಗಿದೆ. ಬೆಳಗಾವಿ ಪೊಲೀಸರಿಂದ ಸ್ವಯಂಪ್ರೇರಿತ ಒಂದು ದೂರು, ಸ್ಥಳೀಯ ಪಿಡಿಒದಿಂದ ಮತ್ತೊಂದು ದೂರು ದಾಖಲಾಗಿದೆ. ವಿನಯ್ ವಿರುದ್ಧ ಒಟ್ಟು ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. 
 

Latest Videos
Follow Us:
Download App:
  • android
  • ios