ಮೈಸೂರಿನಲ್ಲಿ ಇಬ್ಬರಿಗೆ ಬ್ಲಾಕ್‌ ಫಂಗಸ್‌ ಕೋವಿಡ್‌ಗೆ ಒಳಗಾದ ವ್ಯಕ್ತಿ ಕೆ.ಆರ್‌. ಆಸ್ಪತ್ರೆಯಲ್ಲಿ 14 ರಿಂದ 15 ದಿನ ಇದ್ದರು- ಅವರಲ್ಲಿ ಬ್ಲಾಕ್ ಫಂಗಸ್ ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಆತಂಕ ಬೇಡ ಎಂದ ವೈದ್ಯರು

ಮೈಸೂರು (ಮೇ.15): ಮೈಸೂರಿನಲ್ಲಿ ಇಬ್ಬರಿಗೆ ಬ್ಲಾಕ್‌ ಫಂಗಸ್‌ ಆಗಿದ್ದು ಇದರಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ತಿಳಿಸಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ಗೆ ಒಳಗಾದ ವ್ಯಕ್ತಿ ಕೆ.ಆರ್‌. ಆಸ್ಪತ್ರೆಯಲ್ಲಿ 14 ರಿಂದ 15 ದಿನ ಇದ್ದರು. 

ಅವರಿಗೆ ಈ ಬ್ಲಾಕ್‌ ಫಂಗಸ್‌ ಕಾಣಿಸಿಕೊಂಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ನಡೆಯುತ್ತಿದೆ. ಯಾವುದೇ ಆತಂಕ ಬೇಡ ವೈದ್ಯರು ಅವರ ಮೇಲೆ ನಿಗಾ ಇಟ್ಟಿದ್ದಾರೆ ಎಂದರು.

ಬೆಂಗಳೂರಿನಲ್ಲೂ ಬ್ಲ್ಯಾಕ್ ಫಂಗಸ್ ಪತ್ತೆ: ಆರೋಗ್ಯ ಸಚಿವರನ್ನು ಕೇಳಿದ್ರೆ ಕೊಟ್ಟ ಉತ್ತರವಿದು! .

ಈಗಾಗಲೇ ಹಲವೆಡೆ ಕೋವಿಡ್ ಬಳಿಕ ಬ್ಲಾಕ್ ಫಂಗಸ್ ಎಂಬ ಮಹಾಮಾರಿ ಕಾಣಿಸಿಕೊಳ್ಳುತ್ತಿದ್ದು ಇದು ಸಾವಿಗೂ ಕಾರಣವಾಗುತ್ತಿದೆ. ಕರ್ನಾಟದಲ್ಲಿ ಈಗಾಗಲೆ ಹಲವರಲ್ಲಿ ಬ್ಲಾಕ್‌ ಫಂಗಸ್ ಕಾಣಿಸಿಕೊಂಡಿದೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona