ಚಾಮರಾಜನಗರ(ಮಾ.14): ಕೊರೋನಾ ವೈರಸ್‌ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ ಇಬ್ಬರನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ವಾಟ್ಸಾಪ್‌ ಗ್ರೂಪ್‌ನಲ್ಲಿ ಕಬ್ಬಹಳ್ಳಿ ಗ್ರಾಮದ ಸಂತೋಷನಿಗೆ ಕೊರೊನಾ ವೈರಸ್‌ (ಸಂತೋಷ ಫೋಟೋ ಬಳಸಿ)ಯಿದೆ ಎಂದು ಬರೆದು ಸುಳ್ಳು ವದಂತಿ ಹರಡಿಸಿದ್ದಾರೆ ಎಂದು ಎಸ್‌.ಟಿ.ಮಹದೇವಸ್ವಾಮಿ ಅವರು ಗುಂಡ್ಲುಪೇಟೆ ಠಾಣೆಯಲ್ಲಿ ದೂರು ನೀಡಿ, ಕೊರೋನಾ ವೈರಸ್‌ ಇದೆ ಎಂದು ವದಂತಿ ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಿ ಜನರಲ್ಲಿ ಭಯದ ವಾತಾವರಣ ಮೂಡಿಸುತ್ತಿರುವ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು.

ಕಲಬುರಗಿ: ಕೊರೋನಾ ಚಿಕಿತ್ಸೆಗೆ ESIC ಆಸ್ಪತ್ರೆ ಸಕಲ ಸಿದ್ಧ

ಈ ಸಂಬಂಧ ಕೊರೋನಾ ವೈರಸ್‌ ಕಬ್ಬಹಳ್ಳಿ ಗ್ರಾಮದ ಸಂತೋಷ್‌ ಇದೆ ಎಂದು ವಾಟ್ಸಾಪ್‌ನಲ್ಲಿ ಹಾಕಿದ್ದ ನಂಜನಗೂಡು ಪಟ್ಟಣದ ಮಂಜುನಾಥ್‌ ಮಗನಾದ ನಾಗೇಂದ್ರ(26) ಹಾಗೂ ಚಾಮರಾಜನಗರ ತಾಲೂಕಿನ ಕಾವುದವಾಡಿ ಗ್ರಾಮದ ಲೋಕೇಶ್‌ ಎಂಬಾತನನ್ನು ಚಾಮರಾಜನಗರ ಪಟ್ಟಣ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶ ಮುಂದೆ ಹಾಜರುಪಡಿಸಿದ್ದಾರೆ.

ಕೊರೋನಾ ಭೀತಿ : ಹಾಸ್ಟೆಲ್‌ಗೂ 15 ದಿನ ರಜೆ ಘೋಷಣೆ

ಕೊರೋನಾ ವೈರಸ್‌ ಶಂಕಿತ ವ್ಯಕ್ತಿ ಪತ್ತೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಂಜನಗೂಡಿನ ನಾಗೇಂದ್ರ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಕಟವಾದಂತೆ ಸುದ್ದಿ ಸೃಷ್ಠಿ ಮಾಡಿದ್ದ, ಇದನ್ನು ಲೋಕೇಶ್‌ ಸಾಮಾಜಿಕ ಜಾಣತಾಣಗಳಿಗೆ ಹಾಕಿದ್ದ ಹಿನ್ನೆಲೆ ಕಲಂ 505 (ಬಿ), 34 ಐಪಿಸಿ ಮತ್ತು ಕಲಂ 66ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಎಸ್ಪಿ ಆನಂದ್‌ ಕುಮಾರ್‌ ನಿರ್ದೇಶನದಲ್ಲಿ ಡಿವೈಎಸ್ಪಿ ಮೋಹನ್‌ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆ ಎಸ್‌ಐ ನಾಗೇಗೌಡ ಮತ್ತು ಸಿಬ್ಬಂದಿಗಳುಕಾರ್ಯಚರಣೆ ಪ್ರಕರಣ ದಾಖಲಿಸಿದ್ದಾರೆ.