ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೇ ಬೆಳಗಿನ ಜಾವ ಕಳ್ಳರು ನುಗ್ಗಿದ್ದು, ಕೊಟ್ಯಂತರ ರು. ಹಣವನ್ನು ದೋಚಿದ್ದಾರೆ.

ಕೊಪ್ಪಳ (ಸೆ.25): ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದ ಪೊಲೀಸ್‌ ಠಾಣೆಯಿಂದ ಕೂಗಳತೆಯ ದೂರದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೇ ಗುರುವಾರ ಬೆಳಗಿನ ಜಾವ ಕದೀಮರು ಕನ್ನ ಹಾಕಿದ್ದು, .1.46 ಕೋಟಿ ಮೌಲ್ಯದ ನಗದು, ಆಭರಣ ಲೂಟಿ ಮಾಡಿದ್ದಾರೆ.

ಬ್ಯಾಂಕ್‌ನ ಶೆಟರ್‌ ಮುರಿದಿರುವ ಕದೀಮರು .1,24 ಕೋಟಿ ಮೌಲ್ಯದ 3 ಕೆಜಿ 761 ಗ್ರಾಂ ಚಿನ್ನ ಹಾಗೂ . 21.76 ಲಕ್ಷ ನಗದು ಸೇರಿ . 1.46 ಕೋಟಿ ಮೌಲ್ಯದ ನಗದು-ಆಭರಣ ಕಳವು ಮಾಡಿದ್ದಾರೆ.

ಉದ್ಯಮಿ ಪುತ್ರನ ಅಪಹರಣ: ಪೊಲೀಸರ ಮೇಲೆ ಹಲ್ಲೆ, ಆರೋಪಿಗೆ ಶೂಟ್‌ .

ಘಟನೆ ವಿವರ: ಬ್ಯಾಂಕ್‌ಗೆ ಹಾಕಿದ್ದ ಶೆಟರ್‌ ಅನ್ನು ಗ್ಯಾಸ್‌ ಕಟರ್‌ ಮೂಲಕ ಕತ್ತರಿಸಿರುವ ದುಷ್ಕರ್ಮಿಗಳು ಬ್ಯಾಂಕ್‌ ಒಳಗೆ ಪ್ರವೇಶ ಮಾಡುವ ಮುನ್ನವೇ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದಾರೆ. ನಂತರ ಲಾಕರ್‌ ಒಡೆದು ಅಲ್ಲಿದ್ದ ನಗದು, ಬಂಗಾರ ಎಲ್ಲವನ್ನು ದೋಚಿಕೊಂಡು ಪರಾರಿಯಾಗಿದ್ದಾರೆæ. ಕಳ್ಳತನ ವೇಳೆ ಪೊಲೀಸರಿಗೆ ಯಾವುದೇ ಸುಳಿವು ಸಿಗಬಾರದು ಎನ್ನುವ ಕಾರಣಕ್ಕೆ ಬ್ಯಾಂಕ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾ ಮತ್ತು ಅದರ ಡಿವಿಆರ್‌ ಅನ್ನೂ ಕಳ್ಳರು ಹೊತ್ತೊಯ್ದಿದ್ದಾರೆ. ಇದರಿಂದ ಕಳ್ಳರನ್ನು ಪತ್ತೆ ಹಚ್ಚುವುದು ಸವಾಲಾಗಿದೆ.

ಕಳ್ಳತನ ನಡೆದಿರುವ ಸ್ಥಳಕ್ಕೆ ಸ್ಥಳಕ್ಕೆ ಪೊಲೀಸ್‌ ವರಿಷ್ಠಾಧಿಕಾರಿ ಜಿ. ಸಂಗೀತಾ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬ್ಯಾಂಕಿನ ಅಧಿಕಾರಿಗಳಿಂದಲೂ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಈ ಸಂಬಂಧ ಬೇವೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.