ಮಂಗಳೂರು: ಕರಾವಳಿಯಲ್ಲಿ ಮತ್ತಷ್ಟು ಜೋರಾದ ಅರುಣ್ ಪುತ್ತಿಲ ಹವಾ..!
ಪ್ರಧಾನಿ ಮೋದಿ ಸೇರಿ ರಾಷ್ಟ್ರೀಯ ನಾಯಕರಿಗೆ ಟ್ವೀಟ್ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರನಾಗಿ ನಿಂತು 60 ಸಾವಿರ ಮತಗಳನ್ನ ಪಡೆದಿದ್ದಾರೆ.
ಮಂಗಳೂರು(ಮೇ.21): ಕರಾವಳಿ ಭಾಗದಲ್ಲಿ ಅರುಣ್ ಪುತ್ತಿಲ ಹವಾ ಮತ್ತಷ್ಟು ಹೆಚ್ಚಾಗಿದೆ. ಹೌದು, ವಿಧಾನಸಭೆ ಚುನಾವಣೆ ಮುಗೀತು ಇದೀಗ ಲೋಕಸಭಾ ಎಲೆಕ್ಷನ್ ಬಿಸಿ ಹೆಚ್ಚಾಗಿದೆ. ಅರುಣ್ ಪುತ್ತಿಲಗೆ ಎಂಪಿ ಟಿಕೆಟ್ ನೀಡಲು ಇಂದು(ಭಾನುವಾರ) ಟ್ವಿಟರ್ ಅಭಿಯಾನ ಆರಂಭವಾಗಿದೆ. ಇಂದು ಇಡೀ ದಿನ puttilaforloksabha ಹ್ಯಾಶ್ ಟ್ಯಾಗ್ ನಡಿ ಟ್ವೀಟ್ ಅಭಿಯಾನ ಶುರುವಾಗಿದೆ. ನಮ್ಮ ಮುಂದಿನ ಸಂಸದರು ಅರುಣ್ ಕುಮಾರ್ ಪುತ್ತಿಲ ಎಂದು ಅಭಿಯಾನ ಆರಂಭವಾಗಿದೆ.
ಇಂದು ಬೆಳಿಗ್ಗೆ 9 ಗಂಟೆಯಿಂದ ಟ್ವೀಟ್ ಅಭಿಯಾನ ನಡೆಸಲು ಕರೆ ನೀಡಿದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಯೋಗಿ ಆದಿತ್ಯಾನಾಥ್ ಹಾಗೂ ಜೆಪಿ ನಡ್ಡಾ ಅವರಿಗೆ ಟ್ಯಾಗ್ ಮಾಡಲು ಮನವಿ ಮಾಡಲಾಗಿದೆ.
ಎಂಪಿ ಎಲೆಕ್ಷನ್‌ಗೆ ಅರುಣ್ ಕುಮಾರ್ ಪುತ್ತಿಲ: ಅಭಿಯಾನ ಶುರು
ಪ್ರಧಾನಿ ಮೋದಿ ಸೇರಿ ರಾಷ್ಟ್ರೀಯ ನಾಯಕರಿಗೆ ಟ್ವೀಟ್ ಮೂಲಕ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಪುತ್ತಿಲ ಪಕ್ಷೇತರನಾಗಿ ನಿಂತು 60 ಸಾವಿರ ಮತಗಳನ್ನ ಪಡೆದಿದ್ದಾರೆ.
ಅರುಣ್ ಪುತ್ತಿಲ ಪುತ್ತೂರಿನಲ್ಲಿ ಬಿಜೆಪಿಯನ್ನೇ ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಪುತ್ತಿಲ ಮತ ಬೇಟೆಯ ಬಗ್ಗೆ ಬಿಜೆಪಿ ಹೈಕಮಾಂಡ್‌ಗೂ ಮಾಹಿತಿ ಇದೆ. ಸದ್ಯ ಟ್ವೀಟ್ ಅಭಿಯಾನದ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನಕ್ಕೆ ಪುತ್ತಿಲ ಅಭಿಮಾನಿಗಳು ಮುಂದಾಗಿದ್ದಾರೆ.
ಪುತ್ತಿಲಗೆ ದ.ಕ ಲೋಕಸಭಾ ಸಂಸದ ಸ್ಥಾನದ ಟಿಕೆಟ್ ನೀಡಲು ಟ್ವೀಟ್ ಅಭಿಯಾನ ನಡೆಯುತ್ತಿದೆ. ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್ ದ.ಕ ಲೋಕಸಭಾ ಸಂಸದರಾಗಿದ್ದಾರೆ. ಈ ಬಾರಿ ಕಟೀಲ್ ಬದಲಿಸಿ ಪುತ್ತಿಲಗೆ ಟಿಕೆಟ್ ನೀಡಲು ಟ್ವೀಟ್ಟರ್ ವಾರ್ ನಡೆಯುತ್ತಿದೆ.