ಬಳ್ಳಾರಿ: ಕೊಲೆ ಆರೋಪಿ ದರ್ಶನ್‌ಗೆ ಜೈಲಲ್ಲಿ ಟಿವಿ ಭಾಗ್ಯ, ಬರೋದು ಒಂದೇ ಚಾನೆಲ್ ಮಾತ್ರ..!
ಟಿವಿ ಅಳವಡಿಕೆ ಬೆನ್ನಲ್ಲೇ ಸೆಲ್‌ನಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ತಲೆ ದಿಂಬು ನೀಡುವಂತೆ ಕೋರಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೊರೆ ಹೋಗುವುದಾಗಿ ನಟ ದರ್ಶನ್ ಜೈಲಿನ ಸಿಬ್ಬಂದಿಗೆ ಹೇಳಿದ್ದಾರೆಂದು ತಿಳಿದು ಬಂದಿದೆ.
ಬಳ್ಳಾರಿ(ಸೆ.18): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಳ್ಳಾರಿ ಕೇಂದ್ರ ಕಾರಗೃಹದಲ್ಲಿರುವ ನಟ ದರ್ಶನ್ ಇರುವ ಹೈಸೆಕ್ಯುರಿಟಿ ಸೆಲ್‌ನಲ್ಲಿ ಟಿವಿ ಅಳವಡಿಸಲಾಗಿದೆ. ಆದರೆ, ದೂರದರ್ಶನ ಹೊರತುಪಡಿಸಿ, ಯಾವುದೇ ಖಾಸಗಿ ಚಾನೆಲ್‌ಗಳ ವೀಕ್ಷಣೆಗೆ ಸದ್ಯ ಅವಕಾಶ ನೀಡಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಟಿವಿ ಅಳವಡಿಕೆ ಬೆನ್ನಲ್ಲೇ ಸೆಲ್‌ನಲ್ಲಿ ಕುಳಿತುಕೊಳ್ಳಲು ಕುರ್ಚಿ ಹಾಗೂ ತಲೆ ದಿಂಬು ನೀಡುವಂತೆ ಕೋರಿಕೆ ಇಟ್ಟಿದ್ದಾರೆ. ಆದರೆ ಈ ಬೇಡಿಕೆಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ನ್ಯಾಯಾಂಗದ ಮೊರೆ ಹೋಗುವುದಾಗಿ ನಟ ದರ್ಶನ್ ಜೈಲಿನ ಸಿಬ್ಬಂದಿಗೆ ಹೇಳಿದ್ದಾರೆಂದು ತಿಳಿದು ಬಂದಿದೆ.
ಕೊಲೆ ಅರೋಪಿ ದರ್ಶನ್ ಆಪ್ತ, ರೌಡಿ ನಾಗ ಬೇರೆ ಜೈಲಿಗೆ: ಕೋರ್ಟ್ ಅಸ್ತು
ದರ್ಶನ್ ಪತ್ನಿ ಭೇಟಿ:
ದರ್ಶನ್‌ರನ್ನು ಪತ್ನಿ ವಿಜಯಲಕ್ಷ್ಮೀ ಸೇರಿದಂತೆ, ಸಂಬಂಧಿಕರು ಹಾಗೂ ಆಪ್ತರು ಮಂಗಳವಾರ ಭೇಟಿ ಮಾಡಿದರು. ಸಂಜೆ ಸುಮಾರು 4 ಗಂಟೆ ವೇಳೆಗೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ, ಹತ್ತಿರದ ಸಂಬಂಧಿ ಸುಶಾಂತ್ ರೆಡ್ಡಿ, ಆಪ್ತ ಹೇಮಂತ್ ಹಾಗೂ ನಟ ಧನ್ವೀರ್ ಅವರು ಭೇಟಿ ನೀಡಿದರು. ಭದ್ರತಾ ಸಿಬ್ಬಂದಿ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ, ಬಳಿಕ ಪತ್ನಿ ತಂದಿದ್ದಡೆ ಫೂಟ್ಸ್, ಬಿಸ್ಕೆಟ್, ಟೂತ್‌ಪೇಸ್ಟ್, ಸೋಪ್, ಹಣ್ಣು, ಬೇಕರಿ ತಿಂಡಿ ಹಾಗೂ ಬಟ್ಟೆಗಳಿರುವ ಬ್ಯಾಗ್ ಗಳನ್ನು ಪರಿಶೀಲನೆ ನಡೆಸಿ, ಸಂದರ್ಶಕರ ಕೊಠಡಿಗೆ ಕಳುಹಿಸಿದರು.
ಬಳಿಕ ನಟ ದರ್ಶನ್‌ನನ್ನು ಹೈಸೆಕ್ಯುರಿಟಿ ಸೆಲ್‌ನಿಂದ ಸಂದರ್ಶಕರ ಕೊಠಡಿಗೆ ಕರೆ ತಂದರು. ಇದೇ ವೇಳೆ ಪತ್ನಿ ವಿಜಯಲಕ್ಷ್ಮೀ ಹಾಗೂ ಸಂಬಂಧಿಕರ ಜೊತೆ ಮುಂದಿನ ನ್ಯಾಯಾಂಗ ಹೋರಾಟ ಕುರಿತು ಚರ್ಚಿ ಸಿದ್ದಾರೆ ಎಂದು ತಿಳಿದು ಬಂದಿದೆ. ಪತಿಯ ಆರೋಗ್ಯದ ಬಗ್ಗೆ ವಿಚಾರಿಸಿದ ಪತ್ನಿ ವಿಜಯಲಕ್ಷ್ಮೀ ದೇವರಿದ್ದಾನೆ ಧೈರ್ಯವಾಗಿರು ಎಂದು ಹೇಳಿದ್ದಾರೆ. ನಟ ದರ್ಶನ್ ಸ್ಥಿತಿ ಕಂಡು ದರ್ಶನ್ ಆಪ್ತ ಹೇಮಂತ್, ನಟ ಧನ್ವೀರ್ ಕಣ್ಣೀರು ಹಾಕಿದ್ದಾರೆ.