ಕಾರವಾರ: ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತಿರುವ ಸುರಂಗ ಮಾರ್ಗ..!
ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವಾಗಿದ್ದು, ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರದವರೆಗೆ ನಾಲ್ಕು ಸುರಂಗ ಮಾರ್ಗಗಳನ್ನು ಕೊರೆಯಲಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ಮಾಡಿ ಕೊನೆಗೂ ಹೆದ್ದಾರಿಯಲ್ಲಿ ಸುರಂಗ ಮಾರ್ಗದ ಮೂಲಕ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ.
ಉತ್ತರಕನ್ನಡ(ಜೂ.09): ಕಡಲ ನಗರಿ ಕಾರವಾರಕ್ಕೆ ಪ್ರತೀ ನಿತ್ಯ ದೇಶದ ಮೂಲೆ ಮೂಲೆಗಳಿಂದ ಸಾಕಷ್ಟು ಪ್ರವಾಸಿಗರು ಭೇಟಿ ನೀಡಿ, ಎಂಜಾಯ್ ಮಾಡುತ್ತಾರೆ. ಇದೀಗ ಕಾರವಾರಕ್ಕೆ ಆಗಮಿಸುವ ಪ್ರವಾಸಿಗರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಅನುಭವವನ್ನು ಪಡೆಯುವಂತೆ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣವಾಗಿದ್ದು, ಕಾರವಾರ ತಾಲೂಕಿನ ಬಿಣಗಾದಿಂದ ಕಾರವಾರ ನಗರದವರೆಗೆ ನಾಲ್ಕು ಸುರಂಗ ಮಾರ್ಗಗಳನ್ನು ಕೊರೆಯಲಾಗಿದೆ. ಸುಮಾರು ಏಳೆಂಟು ವರ್ಷಗಳಿಂದ ಕಾಮಗಾರಿ ಮಾಡಿ ಕೊನೆಗೂ ಹೆದ್ದಾರಿಯಲ್ಲಿ ಸುರಂಗ ಮಾರ್ಗದ ಮೂಲಕ ಜನರಿಗೆ ಓಡಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಹಿಂದೆ ಬಿಣಗಾದಿಂದ ಕಾರವಾರಕ್ಕೆ ಬರಬೇಕಾದರೆ ಸುಮಾರು 4 ಕಿಲೋ ಮೀಟರ್ ಸಂಚರಿಸಿ ಬರಬೇಕಾಗಿತ್ತು. ಆದರೆ, ಸುರಂಗ ಮಾರ್ಗದ ನಿರ್ಮಾಣದಿಂದ ಕೇವಲ 1 ಕಿಲೋ ಮೀಟರ್ ಸಂಚರಿಸಿದರೆ ಕಾರವಾರ ನಗರ ಪ್ರವೇಶ ಮಾಡುವಂತಾಗಿದ್ದು, ಎರಡು ಮಾರ್ಗದ ಸುರಂಗ ಮಾರ್ಗದಲ್ಲಿ ವಾಹನಗಳನ್ನು ಒಡಾಡಲು ಅವಕಾಶ ಮಾಡಿಕೊಟ್ಟಿದ್ದು, ಜನರು ಈ ಬಗ್ಗೆ ಖುಷಿ ಪಡುವಂತಾಗಿದೆ.
ಕರ್ನಾಟಕದ ಕರಾವಳಿಗೆ ಈಗ ಚಂಡಮಾರುತ ದಾಳಿ ಭೀತಿ: ಇಂದಿನಿಂದ ಕರಾವಳಿಯಲ್ಲಿ 3 ದಿನ ಮಳೆ ಸಾಧ್ಯತೆ
ಇನ್ನು ರಾಜ್ಯದ ಕರಾವಳಿ ಭಾಗದಲ್ಲಿ ಇದೇ ಮೊದಲ ಬಾರಿಗೆ ಸುರಂಗ ಮಾರ್ಗವನ್ನು ಹೆದ್ದಾರಿಯಲ್ಲಿ ನಿರ್ಮಿಸಲಾಗಿದೆ. ಕಾರವಾರದಲ್ಲಿ ನಿರ್ಮಾಣವಾಗಿರುವ ಸುರಂಗ ಮಾರ್ಗದ ವಿಶೇಷತೆ ಮೂಲಕ ಪ್ರವಾಸಿಗರನ್ನು ಸಹ ಆಕರ್ಷಿಸುವಂತೆ ಮಾಡಿದೆ. ಸುರಂಗ ಮಾರ್ಗದ ಮೂಲಕ ವಾಹನದಲ್ಲಿ ಜನರು ಬಂದರೆ ಫ್ಲೈ ಓವರ್ ಸಿಗುತ್ತದೆ. ಫ್ಲೈ ಓವರ್ ನಲ್ಲಿ ರವೀಂದ್ರ ನಾಥ್ ಠಾಗೋರ್ ಕಡಲ ತೀರವನ್ನು ನೋಡಿಕೊಂಡು ಹೋಗುವ ಅವಕಾಶ ಸಿಕ್ಕಿದ್ದು, ಇದೊಂದು ರೀತಿ ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತಿದೆ.
ಕಳೆದ ಐದಾರು ತಿಂಗಳ ಹಿಂದೆಯೇ ಸಂಸದ ಅನಂತ್ ಕುಮಾರ್ ಹೆಗಡೆ ಒಂದು ಸುರಂಗ ಮಾರ್ಗವನ್ನ ಉದ್ಘಾಟಿಸಿದ್ದರು. ಒಂದೇ ಮಾರ್ಗದ ಮೂಲಕ ವಾಹನಗಳು ಒಡಾಡುತ್ತಿದ್ದದ್ದರಿಂದ ಅಪಘಾತಕ್ಕೆ ಆಹ್ವಾನವನ್ನು ಮಾಡುವಂತಾಗಿತ್ತು. ಈ ಹಿನ್ನೆಲೆಯಲ್ಲಿ ತ್ವರಿತ ಗತಿಯಲ್ಲಿ ಕೆಲಸ ಮಾಡುವ ಮೂಲಕ ಎರಡು ಸುರಂಗ ಮಾರ್ಗದಲ್ಲಿ ಓಡಾಡಲು ಸದ್ಯ ಅವಕಾಶ ಮಾಡಿಕೊಟ್ಟಿದ್ದು, ಕಾರವಾರಕ್ಕೆ ಆಗಮಿಸುವ ಪ್ರವಾಸಿಗರು ಜನರು ಇನ್ಮುಂದೆ ಸುರಂಗ ಮಾರ್ಗದಲ್ಲಿ ಸಂಚರಿಸುವ ಹೊಸ ಅನುಭವ ಪಡೆಯುವ ಮೂಲಕ ಎಂಜಾಯ್ ಮಾಡಲಿದ್ದಾರೆ.