ತುಮಕೂರು (ಜು.17): ನಗರದ ಎರಡು ಸರ್ಕಾರಿ ಕಾಲೇಜುಗಳ ಶಿಕ್ಷಕರಿನ್ನು ಕಪ್ಪು ಪಟ್ಟಿ ಬೋರ್ಡ್‌ಗೆ ಗುಡ್ ಬೈ ಹೇಳಲಿದ್ದು, ಲ್ಯಾಪ್‌ ಟಾಪ್, ಎಲ್‌ಸಿಡಿ ಸ್ಕ್ರೀನ್ ಮೂಲಕ ಪಾಠ ಮಾಡಲಿದ್ದಾರೆ.

ಸ್ಮಾರ್ಟ್‌ ಸಿಟಿ ಯೋಜನೆ ಅಡಿಯಲ್ಲಿ ನಗರದ ಎರಡು ಕಾಲೇಜುಗಳಲ್ಲಿ ನಡೆಯಲಿರುವ ಪಾಠ ಪ್ರವಚನಕ್ಕೆ ಡಿಜಿಟಲ್ ಆಯಾಮ ನೀಡಲಾಗಿದೆ. ಒಂದೆಡೆ ತುಮಕೂರು ಸ್ಮಾರ್ಟ್‌ ಸಿಟಿ ಯೋಜನೆ ಕಾಮಗಾರಿ ಸದ್ದಿಲ್ಲದೇ ನಡೆಯುತ್ತಿದ್ದು,ಈಗ ಶೈಕ್ಷಣಿಕ ವ್ಯವಸ್ಥೆ ಕಡೆ ಗಮನ ಕೇಂದ್ರೀಕರಿಸಿರುವ ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಉನ್ನತ ತಂತ್ರಜ್ಞಾನದೊಂದಿಗೆ ಸ್ಮಾರ್ಟ್‌ ಎಜುಕೇಶನ್‌ ನೀಡಲು ಸರ್ಕಾರಿ ಶಾಲೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಶತಮಾನದಷ್ಟುಇತಿಹಾಸ ಹೊಂದಿರುವ ಎಂಪ್ರೆಸ್‌ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಡಿಜಿಟಲ್ ಶಿಕ್ಷಣ ಪದ್ಧತಿ ಆರಂಭವಾಗಲಿದೆ.

ಡಿಜಿಟಲ್ ಕ್ಲಾಸ್‌ ರೂಂ:

ಈ ಬಾರಿಯ ಶೈಕ್ಷಣಿಕ ವರ್ಷದಿಂದ ಎಂಪ್ರೆಸ್‌ ಪ್ರೌಢಶಾಲೆಯಲ್ಲಿ 6 ತರಗತಿ ಮತ್ತು ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ 2 ತರಗತಿಗಳಲ್ಲಿ ಡಿಜಿಟಲ್ ಕ್ಲಾಸ್‌ರೂಮ್‌ಗಳಲ್ಲಿ ಬೋಧನೆ ಮಾಡಲಾಗುವುದು. ಇದಕ್ಕಾಗಿ ಶಾಲೆಯಲ್ಲಿ ಕಂಪ್ಯೂಟರ್‌, ತಂತ್ರಾಂಶ, ಎಲ್‌ಸಿಡಿ ಸ್ಕ್ರೀನ್‌ ಆಳವಡಿಸಲಾಗಿದೆ.

ನೂತನ ಕಟ್ಟಡದಲ್ಲಿ ಸಕಲ ಸಿದ್ಧತೆ:

ಶಾಲಾ ಆವರಣದಲ್ಲಿ ನಿರ್ಮಾಣಗೊಂಡಿರುವ ನೂತನ ಕಟ್ಟಡದಲ್ಲಿ ಡಿಜಿಟಲ್ ಕ್ಲಾಸ್‌ ನಡೆಸಲು ಸಕಲ ತಯಾರಿ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ಪ್ರೊಜೆಕ್ಟರ್‌, ಸಿಪಿಯು, ಅದೇ ರೀತಿ ಬ್ಲಾಕ್‌ ಬೋರ್ಡ್‌ ಮೇಲೆ ಡಿಜಿಟಲ್ ಸ್ಕ್ರೀನ್‌ ಅಳವಡಿಸಲಾಗಿದೆ. ಇನ್ನು ಡಿಜಿಟಲ್‌ ಪೆನ್ನನ್ನೂ ಬೋರ್ಡ್‌ ಮೇಲೆ ಬರೆಯಲು ಶಿಕ್ಷಕರು ಬಳಸುತ್ತಿರುವುದು ಗಮನಾರ್ಹ. ಸಿಪಿಯುನಲ್ಲಿ ಅಳವಡಿಸಲಾಗಿರುವ ಸಂಬಂಧಿತ ಪಠ್ಯವನ್ನು ಶಿಕ್ಷಕರು ಬೋಧಿಸಲಿದ್ಧಾರೆ.

ಅಂಗೈಯಲ್ಲಿ ಆಕಾಶ: 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ!