ನವದೆಹಲಿ(ಜು.13): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ, ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಸೇರಿದಂತೆ ಒಟ್ಟು 28 ಶಾಲೆಗಳಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಖಾಸಗಿ NGO ಸಂಸ್ಥೆ SPACE, ದೆಹಲಿಯ 25 ಸರ್ಕಾರಿ ಹಾಗೂ 3 ಖಾಸಗಿ ಶಾಲೆಗಳಲ್ಲಿ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಇದೊಂದು ಕ್ರಾಂತಿಕಾರಕ ನಡೆ ಎಂದು ಹೇಳಿರುವ SPACE ಸಂಸ್ಥೆ, ತೃತೀಯ ಲಿಂಗಿ ಎಂಬ ಏಕೈಕ ಕಾರಣಕ್ಕೆ ಶಿಕ್ಷಣದಿಂದ ವಂಚಿತರಾಗುತ್ತಿದ್ದ ಮಕ್ಕಳು ಇದೀಗ ಯಾವುದೇ ಸಂಕೋಚವಿಲ್ಲದೇ ಶಿಕ್ಷಣ ಪಡೆಯಬಹುದು ಎಂದು ಸಂತಸ ವ್ಯಕ್ತಪಡಿಸಿದೆ.