ತುಮಕೂರು[ಮೇ. 10]  ಒಂದು ಕಡೆ ಭೀಕರ ಬರ ರಾಜ್ಯವನ್ನು ಕಾಡುತ್ತಿದೆ. ಸಾಲ ಮರುಪಾವತಿ ಮಾಡದ ರೈತನಿಗೆ ಖಾಸಗಿ ಫೈನಾನ್ಸ್ ನವರು ಕೋರ್ಟ ಮೂಲಕ ಅರೆಸ್ಟ್ ವಾರಂಟ್ ನೀಡಿದ್ದಾರೆ. ತುಮಕೂರು ಜಿಲ್ಲೆಯ ರೈತನಿಗೆ ಕೋಲ್ಕತ್ತಾ ಕೋರ್ಟನಿಂದ ಅರೆಸ್ಟ್ ವಾರಂಟ್ ನಂದಿದೆ. 

ಗುಬ್ಬಿ ತಾಲೂಕಿನ ಹೊಸಹಳ್ಳಿಯ ರೈತ ರಾಜಣ್ಣನ್ನ ಬಂಧಿಸುವಂತೆ ವಾರಂಟ್ ಹೊರಡಿಸಲಾಗಿದೆ. ತುಮಕೂರು ನಗರದ ಮ್ಯಾಗ್ಮಾ ಫೈನಾನ್ಸ್ ನಲ್ಲಿ  ಟ್ರ್ಯಾಕ್ಟರ್ ಖರೀದಿಗೆ 4 ಲಕ್ಷ ರೂ. ಪಡೆದಿದ್ದರು.  ಅದರಲ್ಲಿ ರಾಜಣ್ಣ 3 ಲಕ್ಷರೂ. ಮರುಪಾವತಿ ಮಾಡಿದ್ದಾರೆ. ಸತತ ಬರಗಾಲ, ಕೈ ಕೊಟ್ಟ ಬೋರ್ ವೆಲ್ ನಿಂದಾಗಿ ನಾಲ್ಕೈದು ಕಂತು ಬಾಕಿ ಉಳಿಸಿಕೊಂಡಿದ್ದಕ್ಕೆ ಈಗ ನೊಟೀಸ್ ಸಹ ನೀಡಲಾಗಿದೆ. 

ಕಾಳಿ ನದಿಗಾಗಿ ಉ.ಕ. ರೈತರಿಂದ ಹೋರಾಟದ ರೂಪರೇಷೆ!

ಬಾಕಿ ಕಟ್ಟಲು ಸಾಧ್ಯವಾಗದಿದ್ದಕ್ಕೆ ಕೋಲ್ಕತ್ತಾ ಕೋರ್ಟಲ್ಲಿ  ಮ್ಯಾಗ್ಮಾ ಫೈನಾನ್ಸ್ ದೂರು ನೀಡಿದೆ. ಕೋಲ್ಕತ್ತಾ ಮ್ಯಾಗ್ಮಾ ಫೈನಾನ್ಸ್ ನ ಪ್ರಧಾನ ಶಾಖೆ ಇದೆ. ಹಾಗಾಗಿ ದೂರದ ಕೋಲ್ಕತ್ತಾ ಕೋರ್ಟ್ ಗೆ ಹೋಗಲಾಗದೆ ಕಂಗಾಲಾದ ರೈತ ರಾಜಣ್ಣ ಪ್ರಕರಣವನ್ನು ವರ್ಗಾಯಿಸುವಂತೆ ಕೇಳಿಕೊಂಡರೂ ಸಂಸ್ಥೆ ಒಪ್ಪಿಲ್ಲ. ಇದೀಗ ಮುಂದೆ ಏನು ಮಾಡುವುದು ಎಂದು ತೋಚದೆ ರೈತ ಕಂಗಾಲಾಗಿದ್ದಾರೆ.