ತುಮಕೂರು(ಜ.04): ಜನರನ್ನೂ, ಜನರ ಸೊತ್ತುಗಳನ್ನೂ ಸಂರಕ್ಷಿಸಬೇಕಾದ ಪೊಲೀಸರೇ ಹಣ ವಸೂಲಿ ಮಾಡೋ ಕೆಲಸಕ್ಕೆ ಇಳಿದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪ್ರತಿ ತಿಂಗಳೂ 50 ಸಾವಿರ ರೂಪಾಯಿ ಕೊಡುವಂತೆ ಪೊಲೀಸ್ ಪೇದೆಯೊಬ್ಬರು ಯುವಕನನ್ನು ಪೀಡಿದ ಘಟನೆ ಬೆಳಕಿಗೆ ಬಂದಿದೆ.

ತುಮಕೂರು ಕ್ಯಾತ್ಸಂದ್ರ ಪೊಲೀಸರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಫೇಸ್‌ಬುಕ್‌ನಲ್ಲಿ ಹೇಳಿಕೆ ವಿಡಿಯೋ ಬಿಡುಗಡೆ ಮಾಡಿದ ವ್ಯಕ್ತಿ ಪೊಲೀಸ್‌ ವಿರುದ್ಧ ಆರೋಪ ಮಾಡಿದ್ದಾನೆ. ಕ್ಯಾತ್ಸಂದ್ರ ಪೊಲೀಸ್ ಪೇದೆ ಕಿರಣ್ ಕುಮಾರ್ ವಿರುದ್ಧ ಆರೋಪ ಕೇಳಿ ಬಂದಿದೆ. ತಿಂಗಳಿಗೆ 50 ಸಾವಿರ ಹಣ ನೀಡುವಂತೆ ಪೇದೆ ಕಿರುಕುಳ ನೀಡಿದ್ದು, ನಾಗೇಂದ್ರಯ್ಯ ಎನ್ನುವ ವ್ಯಕ್ತಿ ಈ ಬಗ್ಗೆ ಆರೋಪಿಸಿದ್ದಾನೆ.

ರಾತ್ರೋ ರಾತ್ರಿ ಬಂದು ಬೈಕ್‌ನಿಂದ ಪೆಟ್ರೋಲ್ ಕದೀತಾರೆ ಖತರ್ನಾಕ್ ಕಳ್ಳರು..!

ಎಂದೋ ತಪ್ಪು ಮಾಡಿದ್ದೆ. ಈಗ ಯಾವ ತಪ್ಪನ್ನೂ ಮಾಡಿಲ್ಲ, ಆದರೂ ಕಿರುಕುಳ ನೀಡುತ್ತಿದ್ದಾರೆ ಎಂದು ನಾಗೇಂದ್ರಯ್ಯ ವಿಡಿಯೋ ಮೂಲಕ ನೋವು ತೊಡಿಕೊಂಡಿದ್ದಾನೆ.   ತುಮಕೂರಿನ ಗೋಕುಲ ಬಡಾವಣೆ ನಿವಾಸಿಯಾಗಿರುವ ನಾಗೇಂದ್ರಯ್ಯ ವಿಡಿಯೋ ವೈರಲ್ ಆಗಿದೆ.

ಘಟನೆ ಬಗ್ಗೆ ಕ್ರಮ ಕೈಗೊಳ್ಳುವಂತೆ ತುಮಕೂರು ಎಸ್.ಪಿ. ಡಾ.ಕೆ ವಂಶಿಕೃಷ್ಣ ಅವರಿಗೆ ಯುವಕ ಮನವಿ ಮಾಡಿದ್ದಾನೆ. ನಾಗೇಂದ್ರಯ್ಯ ಹಾಗೂ ಮಗ ರಘು ಇಸ್ಪಿಟ್ ಆಡಿಸುತ್ತಿದ್ದರು ಎನ್ನಲಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಪಿಲಾ ನದಿಯಲ್ಲಿ ತೇಲುತ್ತಿತ್ತು ನವಜಾತ ಶಿಶುವಿನ ಮೃತದೇಹ..!