ಮೈಸೂರು(ಜ.04): ಸಾಮಾನ್ಯವಾಗಿ ಜನ ಮನೆ ಮುಂದೆಯೇ ಬೈಕ್ ಪಾರ್ಕ್ ಮಾಡುತ್ತಾರೆ. ಬೈಕ್‌ ಕಳ್ಳತನ ಮಾಡೋರು ಒಂದು ಕಡೆಯಾದ್ರೆ ಮೈಸೂರಿನಲ್ಲಿ ಬೈಕ್‌ ಬಗ್ಗಿಸಿ ಪೆಟ್ರೋಲ್‌ ಕದಿಯೋ ಗ್ಯಾಂಗ್‌ ಕೈಚಳಕ ತೋರಿಸ್ತಾ ಇದೆ.

ಮೈಸೂರಿನಲ್ಲೀಗ ಪೆಟ್ರೋಲ್ ಕಳ್ಳರ ಹಾವಳಿ ಆರಂಭವಾಗಿದೆ. ಮನೆಗಳ್ಳರು, ಸರಗಳ್ಳರ ಕಾಟದ ನಡುವೆಯೇ ಪೆಟ್ರೋಲ್ ಕಳ್ಳರ ಸರದಿ ಆರಂಭವಾಗಿದೆ. ಪೊಲೀಸರಿಗೂ ತಲೆ ನೋವಾಗಿ ಪರಿಣಮಿಸಿರುವ ಪೆಟ್ರೋಲ್ ಕಳ್ಳರು ರಾತ್ರೋ ರಾತ್ರಿ ಬಂದು ಬೈಕ್‌ನ ಪೆಟ್ರೋಲ್ ಟ್ಯಾಂಗ್‌ಗೆ ಕನ್ನ ಹಾಕುತ್ತಿದ್ದಾರೆ.

ಪಂಚೆ, ಶಲ್ಯ, ರುದ್ರಾಕ್ಷಿ ಧರಿಸಿ ಜನರಿಗೆ 'ನಾಮ' ಹಾಕ್ತಿದ್ದವನಿಗೆ ಬಿತ್ತು ಗೂಸಾ..!

ಮೈಸೂರಿನ ಹೃದಯ ಭಾಗದಲ್ಲೇ ವಾಹನಗಳ ಪೆಟ್ರೋಲ್ ಕದಿಯುತ್ತಿರುವ ಖದೀಮರು, ಬೆಳಗಿನ ಜಾವ ಮೂರು ಗಂಟೆ ಬಳಿಕ ಪೆಟ್ರೋಲ್ ಕದಿಯುವ ಕಾರ್ಯಾಚರಣೆಗೆ ಇಳಿಯುತ್ತಿರುವುದು ತಿಳಿದು ಬಂದಿದೆ.

ಮನೆಗಳ ಮುಂದೆ ವಾಹನಗಳನ್ನು ನಿಲ್ಲಿಸುವ ಜನರು ಸುಖ ನಿದ್ರೆಯಲ್ಲಿರುವಾಗಲೇ ಪೆಟ್ರೋಲ್ ಮಂಗ ಮಾಯ ಮಾಡುವ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವರಾಜ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳರ ಗ್ಯಾಂಗ್ ಪೆಟ್ರೋಲ್ ಕದಿಯುತ್ತಿರುವ ಕುಕೃತ್ಯ ಸಮೀಪದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿದ್ಯಾರ್ಥಿನಿಯನ್ನು ಸೊಂಡಿಲಿನಿಂದ ಎತ್ತಿ ಎಸೆದ ಕಾಡಾನೆ, ಬಾಲಕಿ ಗಂಭೀರ.

ಪೆಟ್ರೋಲ್ ಕಳ್ಳರ ಹಾವಳಿಯಿಂದಾಗಿ ಕಂಗಾಲಾದ ವಾಹನ ಸವಾರರು, ಮನೆ ಮುಂದೆ ವಾಹನ ನಿಲ್ಲಿಸುವುದಕ್ಕೂ ಭಯಪಡುವಂತಾಗಿದೆ. ಪೊಲೀಸರು ರಾತ್ರಿ ಗಸ್ತು ತೀವ್ರಗೊಳಿಸುವ ಮೂಲಕ ಪೆಟ್ರೋಲ್ ಕಳ್ಳರ ಹಾವಳಿ ತಡೆಗಟ್ಟುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.