ಕಾಂಗ್ರೆಸ್‌ನಿಂದ PayCM poster ಅಭಿಯಾನಕ್ಕೆ ಮಠಾಧೀಶರ ವಿರೋಧ
ರಾಜ್ಯದಲ್ಲಿ ಸಖತ್ ಸದ್ದು ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಪೇಸಿಎಂ ಪೋಸ್ಟರ್ ಅಭಿಯಾನಕ್ಕೆ ಮಠಾಧೀಶರು ವಿರೋಧ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಮಠಾಧೀಶರ ಬೆಂಬಲ. ತುಮಕೂರಿನಲ್ಲಿ 25ಕ್ಕೂ ಹೆಚ್ಚು ಮಠಾಧೀಶರಿಂದ ಸುದ್ದಿಗೋಷ್ಟಿ.
ತುಮಕೂರು (ಸೆ.27): ರಾಜ್ಯದಲ್ಲಿ ಸಖತ್ ಸದ್ದು ಮಾಡುತ್ತಿರುವ ಪೇಸಿಎಂ ಪೋಸ್ಟರ್ ಅಭಿಯಾನ ವಿರೋಧಿಸಿ ಸುಮಾರು 25 ಕ್ಕೂ ಹೆಚ್ಚು ವಿವಿಧ ಮಠಾಧೀಶರಿಂದ ತುಮಕೂರು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸುದ್ದಿಗೊಷ್ಠಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮಿಜಿ ಮಾತನಾಡಿ. ಇಲ್ಲಿ ಎಲ್ಲಾ ಸಮಾಜದ ಮಠಾಧೀಪತಿಗಳು ಸೇರಿದ್ದೀವಿ, ಕೇವಲ ವೀರಶೈವ ಮಠಾಧೀಪತಿಗಳು ಮಾತ್ರ ಇಲ್ಲಿ ಇಲ್ಲ. ನಾವು ಯಾವುದೇ ಪಕ್ಷ, ಅಥವಾ ವ್ಯಕ್ತಿಯ ವಿರೋಧವಾಗಿ ಸುದ್ದಿಗೋಷ್ಠಿ ಮಾಡುತ್ತಿಲ್ಲ. ಜಗತ್ತಿನಲ್ಲಿ ಯಾರೂ ಪರಿಪೂರ್ಣರಲ್ಲ, ಒಂದಲ್ಲಾ ಒಂದು ತಪ್ಪು ಮಾಡುತ್ತೇವೆ. ಇತ್ತಿಚಿನ ಬೆಳವಣಿಗೆ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಗೂ ಸಾಮಾಜಿಕ ವ್ಯವಸ್ಥೆ ನೋವುಂಟು ಮಾಡುವ ಪರಿಸ್ಥಿತಿಗೆ ಬಂದಿದೆ. ಸದ್ಯ ಭ್ರಷ್ಟಾಚಾರ ಅನ್ನೋದು ಇಡೀ ಜಗತ್ತಿನಲ್ಲಿ ಇದೆ. ಈ ಭ್ರಷ್ಟಾಚಾರ ಯಾವ ರೀತಿ ತೊಡೆದು ಹಾಕಬೇಕು ಅನ್ನೋದು ಪ್ರಶ್ನೆಯಾಗಿ ಉಳಿದಿದೆ. ಸದ್ಯ ಪೊಸ್ಟರ್ ಹಾಕುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಇದು ಕರ್ನಾಟಕದ ಪರಂಪರೆ ಸಂಸ್ಕೃತ ಹಾಳು ಮಾಡುವ ರೀತಿ ನಡೀತಿದೆ. ಇದರಿಂದ ನಮ್ಮ ಕರ್ನಾಟಕದ ಮಾನ ಹರಾಜು ಮಾಡುವ ವ್ಯವಸ್ಥೆ ನಡೀತಿದೆ.
ಯಾರದೋ ವೈಯಕ್ತಿಕವಾದ ಹಿತಾಸಕ್ತಿಗಾಗಿ ಕರ್ನಾಟಕದ ಮಾನ ಮರ್ಯಾದೆ ಹರಾಜಾಗುತ್ತಿದೆ. ರಾಜಕೀಯ ಅರಾಜಕತೆ ಉಂಟುಮಾಡುವ ವ್ಯವಸ್ಥೆ ನಡೀತಿದೆ, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಮ್ಮ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ರೈತರ ಕುಟುಂಬ ಅನ್ನ ಇಲ್ಲದೇ ಬೀದಿಯಲ್ಲಿ ಸಾಯುತ್ತಿರುವ ವಾಗ ಯಾರೂ ಅದನ್ನೂ ನೋಡುತ್ತಿಲ್ಲ, ಇಲ್ಲಿ ಜನರ ನಾಡಿ ಮಿಡಿತ ಅರಿತು ಕೆಲಸ ಮಾಡಬೇಕು ಇದನ್ನು ಬಿಟ್ಟು ಒಬ್ಬರ ಮೇಲೆ ಒಬ್ಬರು ಕೆಸರೆರೆಚಾಟ ಮಾಡಿಕೊಳ್ಳಬಾರದು, ಇವತ್ತು ರಾಜಕೀಯ ವ್ಯವಸ್ಥೆಯಲ್ಲಿ ಕೆಸರೆರಚಾಟ ಆಗುತ್ತಿದೆ ಎಂದರು.
ಸಿಎಂ ಬೊಮ್ಮಾಯಿ ಪರ ಮಠಾಧೀಶರು ಬ್ಯಾಟಿಂಗ್:
ಇನ್ನು ಸಿಎಂ ಗೆ ಹಾಗೂ ಆ ಸ್ಥಾನಕ್ಕೆ ತನ್ನದೇ ಆದ ಘನತೆ ಗೌರವ ಇದೆ, ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ, ಹಾಳು ಮಾಡುವ ವ್ಯವಸ್ಥೆ ನಡೀಬಾರದು, ಇಂದು ಆ ರೀತಿಯ ವ್ಯವಸ್ಥೆ ಇದೆ, ಅದನ್ನು ನಿಲ್ಲಿಸಬೇಕು, ಇರುವ ಎರಡು ಮೂರು ಪಕ್ಷ, ಅದರಲ್ಲಿ ಈ ರೀತಿಯಾಗಿ ಮಾಡಲಾಗ್ತಿದೆ. ಮುಂದೆ ಬಹಳಷ್ಟು ಜನ ಸಿಎಂ ಆಗಬೇಕು ಎನ್ನುವ ಹಂಬಲ ಇಟ್ಟುಕೊಂಡಿದ್ದಾರೆ, ಅಂಥವರು ಈ ರೀತಿ ಕೆಸರೆರೆಚಾಟ ಮಾಡಿಕೊಳ್ಳಬಾರದು. ಸಿಎಂ ಬೊಮ್ಮಾಯಿ ಉತ್ತಮ ಆಡಳಿತ ಕೊಡುತಿದ್ದಾರೆ.
PayCM Posters: ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ ಕಾಂಗ್ರೆಸ್ ಎಂಎಲ್‌ಸಿ ಪುತ್ರ
ನಾನು ಬಹಳ ವರ್ಷ ದಿಂದ ನೋಡಿದ್ದೇನೆ. ಯಾರತ್ರನೂ ಕೈ ಒಡ್ಡದೇ ಆಸೆ ಆಕಾಂಕ್ಷೆ ಇಲ್ಲದೇ ಕೆಲಸ ಮಾಡುತ್ತಿದ್ದಾರೆ. ಕಮಿಷನ್ ವಿಚಾರದಲ್ಲಿ ಆರೋಪ ಇದ್ರೆ. ಲೋಕಾಯುಕ್ತ ದೂರು ನೀಡಲಿ, ಸಿಸಿಬಿಗೆ ಕೊಡಲಿ. ಅದನ್ನು ಬಿಟ್ಟು ವಿನಾಕಾರಣ ಒಬ್ಬ ವ್ಯಕ್ತಿಯನ್ನು ತೆಜೋವಧೆ ಮಾಡಬಾರದು, ಕತ್ತಲಲ್ಲಿ ಗುಂಡು ಹೊಡೆಯಬಾರದು.
ಪೇಸಿಎಂ ಪೋಸ್ಟರ್: ಕಾಂಗ್ರೆಸ್ಸಿಂದ ನಟನ ಫೋಟೋ ಬಳಕೆ, ವಿವಾದ
ಯಾವುದೇ ಸಮಾಜದ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗೆ ತೊಂದರೆ ಕೊಟ್ಟರೆ ಆ ಸಮಾಜದ ಜನರಿಗೆ ನೋವು ಉಂಟಾಗುತ್ತದೆ. ಪೋಸ್ಟರ್ ಅಂಟಿಸುವುದರಿಂದ ಯಾವುದೇ ತೊಂದರೆ ಆಗೋದಿಲ್ಲ. ಇದರಿಂದ ಯಾವುದೇ ಸಾಧನೆ ಆಗೋದಿಲ್ಲ ಎಂದು ತುಮಕೂರಿನಲ್ಲಿ ನಡೆಯುತ್ತಿರುವ ಸುದ್ದಿಗೊಷ್ಠಿಯಲ್ಲಿ ತಿಪಟೂರಿನ ಷಡಕ್ಷರ ಮಠದ ರುದ್ರಮುನಿ ಸ್ವಾಮೀಜಿ ಹೇಳಿಕೆ ನೀಡಿದರು.