ಬೆಂಗಳೂರು, (ಜೂ.23):  ಟಿಕ್‌ ಟಾಕ್‌ ವಿಡಿಯೋಗಾಗಿ ಸ್ಟಂಟ್‌ ಮಾಡಲು ಹೋಗಿ ಕತ್ತಿನ ಮೂಳೆ ಮುರಿದುಕೊಂಡು ಆಸ್ಪತ್ರೆಗೆ ಸೇರಿದ್ದ ಕುಮಾರ್‌ ಸಾವನ್ನಪ್ಪಿದ್ದಾನೆ.

 ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯ ಕುಮಾರ್‌ ಚಿಕಿತ್ಸೆ ಫಲಕಾರಿಯಾಗದೆ ಇಂದು (ಭಾನುವಾರ) ಮೃತಪಟ್ಟಿದ್ದಾನೆ.

TikTok ಗೀಳಿಗೆ ಪ್ರಾಣ ಬಿಟ್ಟ ಮಹಿಳೆ: ಟಿಕ್‌ ಟಾಕ್‌ನಲ್ಲಿ ವಿಡಿಯೋ ಅಪ್ಲೋಡ್

ಕೆಲ ದಿನಗಳ ಹಿಂದೆ ಕುಮಾರ್‌, ತನ್ನ ಸ್ನೇಹಿತರ ಜೊತೆಗೂಡಿ ಬ್ಯಾಕ್‍ ಫ್ಲಿಪ್‍ ಸಾಹಸದ ವಿಡಿಯೋ ಚಿತ್ರೀಕರಿಸಲು ಮುಂದಾಗಿದ್ದರು.ಇದಕ್ಕಾಗಿ ಓಡಿ ಬಂದ ಕುಮಾರ್ ತನ್ನ ಸ್ನೇಹಿತನ ಎರಡೂ ಅಂಗೈ ಮೇಲೆ ಪಾದ ಊರಿ ಹಿಂಬದಿಗೆ ಜಿಗಿದಿದ್ದ.

ಆದ್ರೆ, ಆಯಾತಪ್ಪಿ ಹಿಂಬದಿಗೆ ಬಿದ್ದು ಬೆನ್ನು ಹಾಗೂ ಕತ್ತಿನ ಮೂಳೆ ಮುರಿದು ಹೋಗಿತ್ತು. ಈತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.