Tumakur : ಕೈ ಪರ ಹೆಚ್ಚು ಮತ: ನವೀನ್‌ಕುಮಾರ್‌

ಇಲ್ಲಿನ ವಿಧಾನ ಸಭೆ ಚುನಾವಣೆ ಹಿನ್ನಲೆ ಬುಧವಾರ ಮತದಾನ ನಡೆದಿದ್ದು, ತಾಲೂಕಿನ ತಿರುಮಣಿ ಹಾಗೂ ವಳ್ಳೂರು ಗ್ರಾಪಂ ಸೇರಿ ತಾಲೂಕಿನ ಹೆಚ್ಚಿನ ಗ್ರಾಪಂ ವ್ಯಾಪ್ತಿಯಲ್ಲಿ ಶೇ 70ರಿಂದ 80ರಷ್ಟುಮತದಾನವಾಗಿದೆ.

Tumakur : Most votes for Kai: Naveen Kumar snr

ಪಾವಗಡ: ಇಲ್ಲಿನ ವಿಧಾನ ಸಭೆ ಚುನಾವಣೆ ಹಿನ್ನಲೆ ಬುಧವಾರ ಮತದಾನ ನಡೆದಿದ್ದು, ತಾಲೂಕಿನ ತಿರುಮಣಿ ಹಾಗೂ ವಳ್ಳೂರು ಗ್ರಾಪಂ ಸೇರಿ ತಾಲೂಕಿನ ಹೆಚ್ಚಿನ ಗ್ರಾಪಂ ವ್ಯಾಪ್ತಿಯಲ್ಲಿ ಶೇ 70ರಿಂದ 80ರಷ್ಟು ಮತದಾನವಾಗಿದೆ. ಲಭ್ಯವಾದ ಮಾಹಿತಿ ಪ್ರಕಾರ ಕಾಂಗ್ರೆಸ್‌ ಪರ ಹೆಚ್ಚು ಮತದಾನವಾಗಿದೆ. ಹೀಗಾಗಿ ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಸುಮಾರು 5ಸಾವಿರಕ್ಕಿಂತ ಹೆಚ್ಚು ಮತಗಳ ಅಂತರದಲ್ಲಿ ಗೆಲವು ಸಾಧಿಸಲಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ ಮುಖಂಡರಾದ ಅನ್ನದಾನಪುರ ನವೀನ್‌ಕುಮಾರ್‌ ಭರವಸೆ ವ್ಯಕ್ತಪಡಿಸಿದರು. ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಎ.ಎನ್‌.ನವೀನ್‌ಕುಮಾರ್‌, ಈ ಬಾರಿ ಪಾವಗಡ ವಿಧಾನಸಭೆಯ ಚುನಾವಣೆ ಅತ್ಯಂತ ಬಿರುಸಿನಿಂದ ಸಾಗಿದ್ದು, ಕಾಂಗ್ರೆಸ್‌ ಜೆಡಿಎಸ್‌ ಮಧ್ಯೆ ದೊಡ್ಡ ಮಟ್ಟದ ಹಣಾಹಣಿ ಏರ್ಪಾಟ್ಟಿತ್ತು. ಶಾಸಕ ವೆಂಕಟರಮಣಪ್ಪ ಅಧಿಕಾರ ಅವಧಿಯ ಶಾಶ್ವತ ಅಭಿವೃದ್ಧಿ ಹಾಗೂ ಸಂಕಷ್ಟದ ವೇಳೆ ಸ್ಪಂದನೆ ಹಾಗೂ ಜನಪರ ನಾಯಕತ್ವದ ಹಿನ್ನಲೆಯಲ್ಲಿ ತಿರುಮಣಿ ವಳ್ಳೂರು ವೈ.ಎನ್‌.ಹೊಸಕೋಟೆ, ಕಸಬಾ ಮತ್ತು ನಿಡಗಲ್‌ ಹೋಬಳಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಕಾಂಗ್ರೆಸ್‌ ಪರ ಹೆಚ್ಚು ಮತದಾನವಾಗಿದ್ದು, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ವಿ.ವೆಂಕಟೇಶ್‌ ಸುಮಾರು 5 ಸಾವಿರ ಮತಗಳ ಅಂತರದಲ್ಲಿ ಜಯ ಸಾಧಿಸಲಿರುವ ಖಚಿತ ವಿಶ್ವಾಸ ವ್ಯಕ್ತಪಡಿಸಿದರು.

ಶೆಟ್ಟರ್ ಗೆಲ್ತಾರೆ

ಬೆಳಗಾವಿ (ಮೇ.11) : ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇರುವುದರಿಂದ ಸುಮಾರು 13ರಿಂದ14ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತವೆ ಎಂದು ಸಂಸದೆ ಮಂಗಲ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ವಿಶ್ವೇಶ್ವರಯ್ಯ ನಗರದಲ್ಲಿರುವ ಮತಕೇಂದ್ರದಲ್ಲಿ ಮತದಾನ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹುಬ್ಬಳ್ಳಿ ಕೇಂದ್ರ ಮತಕ್ಷೇತ್ರದಲ್ಲಿ ತಮ್ಮ ಬೀಗರಾದ ಜಗದೀಶ ಶೆಟ್ಟರ (Jagadish shettar) ಅವರು ಸ್ಪರ್ಧಿಸಿದ್ದು, ಅಲ್ಲಿನ ವಾತಾವರಣ ಹೇಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಜಗದೀಶ್‌ ಶೆಟ್ಟರ ಪಕ್ಷ ಭೇದ ಮರೆತು ಕೆಲಸ ಮಾಡಿದ್ದರಿಂದ ಬೀಗರದು ಚೆನ್ನಾಗಿದೆ. ಚೆನ್ನಾಗಿ ನಡೀತಾ ಇದೆ. ಅವರು ಬರ್ತಾರೆ ಎಂದು ತಮ್ಮ ಬೀಗರಾದ ಕಾಂಗ್ರೆಸ್‌ ಅಭ್ಯರ್ಥಿ ಜಗದೀಶ್‌ ಶೆಟ್ಟರ ಪರವಾಗಿ ಬ್ಯಾಟಿಂಗ್‌ ಮಾಡಿದರು.

ಬಿಎಸ್‌ವೈ ಅಧಿಕಾರ ಬಿಡಲು ಬಿಎಲ್ ಸಂತೋಷ್ ಕಾರಣ: ಜಗದೀಶ ಶೆಟ್ಟರ್

ಅಲ್ಲದೇ ಶೆಟ್ಟರ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಲಿಟಿಕ್ಸ್‌ನಲ್ಲಿ ಹಾಗೆ ಎಲ್ಲಾ ಆಗೋದು ಎಂದ ಅವರು, ಮೊದಲಿಂದಲೂ ಜಗದೀಶ್‌ ಶೆಟ್ಟರ ಅಲ್ಲಿ ಹೆಸರು ಮಾಡಿದ್ದಾರೆ ಎಂದರು.

ಬಿಜೆಪಿ ಸಂಸದರಾಗಿ ಕಾಂಗ್ರೆಸ್‌ ಅಭ್ಯರ್ಥಿಗೆ ಪರವಾಗಿ ಸಪೋರ್ಚ್‌ ಕುರಿತು ಪ್ರತಿಕ್ರಿಯಿಸಿದ ಅವರು, ಅವರದು ಅಲ್ಲಿ, ನಮ್ಮದು ಇಲ್ಲಿ ಎಂದು ಸಮಜಾಯಿಷಿ ನೀಡಿದರು. ಮುಂದಿನ ಚುನಾವಣೆಯಲ್ಲಿ ತಾವು ಪಕ್ಷ ಬದಲಾವಣೆ ಮಾಡುತ್ತೀರಾ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಪಕ್ಷ ಬದಲಾವಣೆ ಮಾಡುವುದಿಲ್ಲ. ನಾನು ಬಿಜೆಪಿಯಲ್ಲೆ ಇರುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಬಿಜೆಪಿಯಿಂದಲೇ ಸ್ಪರ್ಧೆ ಮಾಡುವುದಾಗಿ ಸ್ಪಷ್ಟಪಡಿಸಿದರು.

Latest Videos
Follow Us:
Download App:
  • android
  • ios