ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!
ಚಿರತೆ ದಾಳಿಯಿಂದ ತುಮಕೂರಿನ ಜನ ಕಂಗಾಲಾಗಿದ್ದಾರೆ. ಈಗಾಗಲೇ ಮೂರು ಜನರನ್ನು ಬಲಿ ಪಡೆದಿರುವ ಚಿರತೆ ಸೆರೆಗಾಗಿ 40 ಕಡೆ ಬೋನಿಟ್ಟರೂ ಯಾವುದೇ ಪ್ರಯೋನವಾಗಿಲ್ಲ.
ತುಮಕೂರು(ಜ.10): ಚಿರತೆ ದಾಳಿಯಿಂದ ತುಮಕೂರಿನ ಜನ ಕಂಗಾಲಾಗಿದ್ದಾರೆ. ಈಗಾಗಲೇ ಮೂರು ಜನರನ್ನು ಬಲಿ ಪಡೆದಿರುವ ಚಿರತೆ ಸೆರೆಗಾಗಿ 40 ಕಡೆ ಬೋನಿಟ್ಟರೂ ಯಾವುದೇ ಪ್ರಯೋನವಾಗಿಲ್ಲ.
ಚಿರತೆ ದಾಳಿಗೆ ತುಮಕೂರು ಜಿಲ್ಲೆ ಜನತೆ ಕೆಂಗೆಟ್ಟಿದ್ದು, ತುಮಕೂರು, ಗುಬ್ಬಿ, ಕುಣಿಗಲ್ ತಾಲೂಕುಗಳಲ್ಲಿ ನಿರಂತರ ಚಿರತೆ ದಾಳಿ ನಡೆಯುತ್ತಲೇ ಇದೆ. ಎರಡು ತಿಂಗಳಲ್ಲಿ ಚಿರತೆ ದಾಳಿಗೆ ಮೂವರು ಬಲಿಯಾಗಿದ್ದು, ಗುರುವಾರ ನರಹಂತಕ ಚಿರತೆ ಪುಟ್ಟ ಬಾಲಕನನ್ನು ಬಲಿ ಪಡೆದಿತ್ತು. ಗುಬ್ಬಿ ತಾಲೂಕಿನ ಸಿ.ಎಸ್ ಪುರ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ.
ತಾಯಿ ಕಣ್ಣೆದುರೇ ಮಗನನ್ನು ಕೊಂದು ಹಾಕಿದ ಚಿರತೆ..!
ಗುಬ್ಬಿ, ಕುಣಿಗಲ್, ತುಮಕೂರು ಈ ಮೂರು ತಾಲೂಕುಗಳು ಸಂದಿಸುವ ವಲಯದಲ್ಲಿ ಪದೇ ಪದೇ ದಾಳಿ ನಡೆಯುತ್ತಲೇ ಇದೆ. ಚಿರತೆ ಹಿಡಿಯುವಂತೆ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸಿ.ಎಸ್. ಪುರ ಸುತ್ತಮುತ್ತ 15 ಹಳ್ಳಿಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ 40ಕ್ಕೂ ಹೆಚ್ಚು ಕಡೆ ಬೋನ್ ಇಟ್ಟಿದ್ದಾರೆ. ಆದರೆ ಚಿರತೆ ಮಾತ್ರ ಬೋನಿಗೆ ಬೀಳದೆ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳನ್ನು ಯಾಮಾರಿಸುತ್ತಿದೆ.
ನಾಯಿಗೆ ಪೆಟ್ಟು: ಆಕ್ಷೇಪಿಸಿದವನ ಕೈ ಕಟ್..!
ಒಂದೂವರೆ ತಿಂಗಳ ಹಿಂದೆ ಕುಣಿಗಲ್ ತಾಲೂಕಿನ ದೊಡ್ಡಮಳಲವಾಡಿ ಗ್ರಾಮದ ಅಂದಾನಪ್ಪ, ಒಂದು ತಿಂಗಳ ಹಿಂದೆ ತುಮಕೂರು ಜಿಲ್ಲೆ ಬನ್ನಿಕುಪ್ಪೆ ಗ್ರಾಮದ ಲಕ್ಷಮ್ಮ ಎಂಬವರು ಚಿರತೆ ದಾಳಿಗೆ ಬಲಿಯಾಗಿದ್ದರು. ಇದೀಗ ಗುರುವಾರ ಪುಟ್ಟ ಬಾಲಕನೂ ಚಿರತೆ ದಾಳಿಗೆ ಬಲಿಯಾಗಿದ್ದಾನೆ.
ನಿನ್ನೆ ರಾತ್ರಿ ಮಣಿಕುಪ್ಪೆ ಪಕ್ಕದ ಕಮ್ಮನಳ್ಳಿಯ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ಅಳವಡಿಸಿದ್ದ ಕ್ಯಾಮರಾಗೆ ಚಿರತೆ ಸೆರೆಸಿಕ್ಕಿದೆ. ಜಿಲ್ಲಾ ಅರಣ್ಯಾಧಿಕಾರಿ ಚಿರತೆಯ ಫೋಟೋ ಬಿಡುಗಡೆಗೊಳಿಸಿದ್ದಾರೆ.