Tumakur : ಅಳಿಲಘಟ್ಟದಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ
ತಾಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಸರ್ಕಾರಿ ಬಸ್ಸು ಚಲಾಯಿಸುವ ಮೂಲಕ ಅಳಿಲಘಟ್ಟದಿಂದ ಬೆಂಗಳೂರಿಗೆ ತೆರಳುವ ಸರಕಾರಿ ಬಸ್ಗೆ ಹಸಿರು ನಿಶಾನೆ ತೋರಿದರು.
ಗುಬ್ಬಿ : ತಾಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಶಾಸಕ ಎಸ್ ಆರ್ ಶ್ರೀನಿವಾಸ್ ಸರ್ಕಾರಿ ಬಸ್ಸು ಚಲಾಯಿಸುವ ಮೂಲಕ ಅಳಿಲಘಟ್ಟದಿಂದ ಬೆಂಗಳೂರಿಗೆ ತೆರಳುವ ಸರಕಾರಿ ಬಸ್ಗೆ ಹಸಿರು ನಿಶಾನೆ ತೋರಿದರು.
ಬಳಿಕ ಸಂದರ್ಭದಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಿಂದ ಬೆಂಗಳೂರು ತುಮಕೂರು ಸೇರಿದಂತೆ ಇನ್ನಿತರ ಭಾಗಗಳಿಗೆ ತೆರಳುವ ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ದೃಷ್ಟಿಯಿಂದ ಈ ಬಸ್ಸನ್ನು ಬಿಡಲಾಗುತ್ತಿದ್ದು, ಇದರಿಂದಾಗಿ ಈ ಭಾಗದ ಜನರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ರಾಜಕೀಯ ಮಾಡಿದರು ಸಹ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಮಾಡಿರುವಂತಹ 5 ಯೋಜನೆಗಳು ಸಹ ಜನ ಸಾಮಾನ್ಯರಿಗೆ ಹೆಚ್ಚಿನ ಅನುಕೂಲಕರವಾಗಿದ್ದು, ಕಾಂಗ್ರೆಸ್ ಸರ್ಕಾರವನ್ನು ರಾಜ್ಯದ ಜನರು ಒಪ್ಪಿಕೊಂಡಿದ್ದು ಮುಂದಿನ ಎಲ್ಲಾ ಚುನಾವಣೆಯಲ್ಲೂ ಅತ್ಯಂತ ಹೆಚ್ಚು ಬಹುಮತದೊಂದಿಗೆ ನಾವು ಗೆಲುವು ಪಡೆಯುತ್ತೇವೆ ಎಂದು ತಿಳಿಸಿದರು.
ಚುನಾವಣೆ ಮುಂಚನೇ ನಾನು ಹೇಳಿದ್ದೆ ಜೆಡಿಎಸ್ 123 ಅಲ್ಲ 23 ಗೆಲ್ಲಲ್ಲ ಅಂಥ ಹೇಳಿದ್ದೆ ಆದರೂ 19 ಸ್ಥಾನ ಗೆದ್ದಿದ್ದಾರೆ. ಮುಂದಿನ ವರ್ಷ 8 ಸ್ಥಾನ ಗೆಲುವುದು ಕಷ್ಟ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಅವರ ಹೆಸರು ಹೇಳದೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡು ಪಕ್ಷದ ಅಸ್ವಿತ್ವ ಉಳಿಸಿಕೊಳಲು ಎರಡು ಪಕ್ಷದವರು ಹೊಂದಾಣಿಕೆ ಮಾಡಿಕೊಳುತ್ತಾರೆ. ಜನರ ಕಷ್ಠ ಸುಖಗಳಲ್ಲಿ ಭಾಗಿಯಾಗಲ್ಲ. ಇಂತ ಗೊಸುಂಬಿ ನಾಯಕರನ್ನ ನಂಬಬೇಡಿ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ. ಮುಂಬರುವ ಚುನಾವಣೆಯಲ್ಲಿ ನಾವೇ ಹೆಚ್ಚು ಸ್ಥಾನ ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ಸಂಧರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಯಮೂನ ರಮೇಶ್ ,ಉಪಾಧ್ಯಕ್ಷೆ ದಿವ್ಯ ಜ್ಯೋತಿ , ಗ್ರಾ.ಪಂ ಸದಸ್ಯ ಶಂಕರಪ್ಪ , ದೊಡ್ಡಕೆಂಪಯ್ಯ ,ಯೋಗೀಶ್ , ಮಂಜುಳ ಕೃಷ್ಣಮೂರ್ತಿ , ಸಾರಿಗೆ ಇಲಾಖೆ ಜಿಲ್ಲಾಧಿಕಾರಿ ಚಂದ್ರಶೇಖರ್ , ಪಿಡಿಓ ವಸಂತ್ ಮುಖಂಡ ಶ್ರೀಧರ್ ಮೂರ್ತಿ, ಗುರುರೇಣುಕರಾಧ್ಯ, ಸಂಜೀವಯ್ಯ , ರಮೇಶ್, ಬಾಬು, ವಿಜಯ್ ಕುಮಾರ್, ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.