ತುಮಕೂರು(ನ.26): ನಿವೃತ್ತಿ ಯೋಜನೆಗೆ ಸಂಬಂಧಪಟ್ಟಹಲವು ಅಂಶಗಳನ್ನು ಈಡೇರಿಸದೆ ಬಿಎಸ್‌ಎನ್‌ಎಲ್‌ ಅಧಿಕಾರಿಗಳು ನೌಕರರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿ ಬಿಎಸ್‌ಎನ್‌ಎಲ್‌ ಕಚೇರಿ ಆವರಣದಲ್ಲಿ ನೌಕರರು ಸೋಮವಾರ ಒಂದು ದಿನ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ವಿಆರ್‌ಎಸ್‌ ಕೊಟ್ಟನಂತರ ಮುಂದೆ ವೈಯಕ್ತಿಕವಾಗಿ ತನಗೆ ಎಷ್ಟುಆರ್ಥಿಕ ನಷ್ಟವುಂಟಾಗುತ್ತದೆ ಎಂಬ ಅರಿವು ಇಲ್ಲದೆ, ನೌಕರರು ನಿವೃತ್ತಿ ಯೋಜನೆಗೆ ಮುಂದಾಗುತಿದ್ದಾರೆ ಎಂದು ನೌಕರ ಮುಖಂಡರು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ರೋಗಿಯಿಂದ 50 ರೂ. ಲಂಚ ಪಡೆಯೋ ವೈದ್ಯ

ವಿಆರ್‌ಎಸ್‌ಗೆ ಒಪ್ಪಿಗೆ ನೀಡಿರುವ ನೌಕರರಿಗೆ ಅದನ್ನು ಹಿಂತೆಗೆದುಕೊಳ್ಳಲು ಹೇಳುವುದಾಗಿ ತಿಳಿಸಿದರು. ಪೆನ್ಷನ್‌ ಕಮ್ಯೂಟೇಶನ್‌, ಮೂರನೇ ವೇತನ ಪರಿಷ್ಕರಣೆ, ನಿವೃತ್ತಿ ವಯಸ್ಸಿನಲ್ಲಿ ಬದಲಾವಣೆ, ಮುಂತಾದ ವಿಷಯಗಳ ಒಟ್ಟಿಗೆ, ನಿವೃತ್ತಿ ತೆಗೆದುಕೊಳ್ಳದೇ ಉಳಿಯುವ ನೌಕರರಿಗೆ ವರ್ಗಾವಣೆ ಮತ್ತು ಅವರು ಹೆಚ್ಚು ಕೆಲಸ ಮಾಡಬೇಕಾಗುತ್ತದೆ ಎನ್ನುವ ಭಯದ ಮಾತುಗಳನ್ನು ಹೇಳುತ್ತಾ, ಹೆಚ್ಚು ಹೆಚ್ಚು ನೌಕರರು ನಿವೃತ್ತಿ ಯೋಜನೆಗೆ ಸಹಿ ಹಾಕುವ ಹಾಗೆ ಅಧಿಕಾರಿ ವರ್ಗದವರು ಬಲವಂತ ಮತ್ತು ಒತ್ತಡವನ್ನು ಹೇರುತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.

ಉಡು​ಪಿ: ಸದ್ಯ ಮರಳಿನ ಸಮಸ್ಯೆ ಸುಖಾಂತ್ಯ, ಅಗ್ಗದಲ್ಲಿ, ಸಕಾಲದಲ್ಲಿ ಮರಳು ಲಭ್ಯ

ಮೂರನೇ ವೇತನ ಪರಿಷ್ಕರಣೆ ಮತ್ತು ಪಿಂಚಣಿ ಪರಿಷ್ಕರಣೆಯ ಸೌಲಭ್ಯಗಳು ನಿವೃತ್ತಿ ಯೋಜನೆಗೆ ಸಹಿ ಹಾಕಿದವರಿಗೆ ಲಭ್ಯವಿಲ್ಲ ಎಂದಾದಲ್ಲಿ, ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎಂದಿದ್ದಾರೆ. ಇಂತಹ ಹಲವು ಅಂಶಗಳ ಮೇಲೆ, ತುರ್ತಾಗಿ ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಾಯಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ.

ನಿವೃತ್ತಿ ಯೋಜನೆಗೆ ಸಹಿ ಹಾಕಿರುವ ನೌಕರರಿಗೆ ಅತಿ ಅವಶ್ಯವಾದ ಈ ಸ್ಪಷ್ಟೀಕರಣಗಳು ಅಧಿಕೃತ ವಾಗಿ ಬಾರದೇ ಇದ್ದಲ್ಲಿ, ನಾವು ನಮ್ಮ ನೌಕರರಿಗೆ ನಿವೃತ್ತಿ ಯೋಜನೆಯಿಂದ ಹಿಂದೆ ಸರಿಯುವಂತೆ ತಾಕೀತು ಮಾಡುತ್ತೇವೆ ಎಂಬ ಎಚ್ಚರಿಕೆ ಯ ಸಂದೇಶವನ್ನು ಯೂನಿಯನ್‌ಗಳು ನೀಡಿವೆ.

BSNL ನೌಕರರಿಗೆ ಗರಿಷ್ಠ 90 ಲಕ್ಷ ವಿಆರ್‌ಎಸ್‌ ಪ್ಯಾಕೇಜ್‌!