ತುಮಕೂರು(ನ.25): ಸರ್ಕಾರಿ ಆಸ್ಪತ್ರೆಯ ವೈದ್ಯರೊಬ್ಬರು ಪ್ರತಿ ರೋಗಿಯಿಂದ 50 ರೂಪಾಯಿ ಲಂಚ ಪಡೆಯುವ ಘಟನೆ ತುಮಕೂರಿನಲ್ಲಿ ನಡೆದಿದೆ. ಈ ಬಗ್ಗೆ ರೋಗಿಗಳ ಸಂಬಂಧಿಗಳು ವಿಚಾರಿಸಿದ್ರೆ ಸಂಬಳ ಆಗಿಲ್ಲ ಎಂದಿದ್ದಾರೆ ವೈದ್ಯರು.

ರೋಗಿಗಳಿಂದ 50 ರೂಪಾಯಿ ಲಂಚ ಪಡೆಯುವ ಸರ್ಕಾರಿ ವೈದ್ಯ ರೋಗಿಗಳ ಸುಲಿಗೆ ಮಾಡುತ್ತಿದ್ದಾರೆ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಪ್ರತಿ ರೋಗಿಯಿಂದಲೂ ಹಣ ಪಡೆಯುತ್ತಿದ್ದಾರೆ.

20 ವರ್ಷದಿಂದ ಕಾಂಗ್ರೆಸ್ ಬೆಂಬಲಿಸಿದ್ದ ನಾಯಕ BJPಗೆ..!

ವೈದ್ಯ ನಾಗೇಶ್ ನಿಂದ ಲಂಚ ಸ್ವೀಕಾರ ಆರೋಪ ಕೇಳಿ ಬಂದಿದ್ದು, ರೋಗಿಗಳ ಸಂಬಂಧಿ ವೈದ್ಯರು 50 ರೂಪಾಯಿ ತೆಗೆದುಕೊಳ್ಳುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಕರಿಸಿದ್ದಾರೆ. ಎಷ್ಟೇ ಬೇಡಿಕೊಂಡರೂ ಈ ವೈದ್ಯರು ಮಾತ್ರ  ಸ್ವಲ್ಪವೂ ಮನಸು ಬದಲಿಸದೆ 50 ರೂಪಾಯಿ ಪಡೆದೇ ಔಷಧ ಕೊಡುತ್ತಾರೆ.

ಪಟ್ಲ ಸತೀಶ್‌ ವಜಾಕ್ಕೆ ಕಾರಣ ಕೊಟ್ಟ ಕಟೀಲು ಮೇಳ ಸಂಚಾಲಕ, ಹೇಳಿದ್ದೇನು..?

50 ರುಪಾಯಿ ಕೊಡದ ರೋಗಿಗಳನ್ನ ವೈದ್ಯರು ವಿಚಾರಿಸುವುದೇ ಇಲ್ಲ. ಇದು ನಕ್ಸಲ್ ಪೀಡಿತ ಗಡಿ ಪ್ರದೇಶದ ಆಸ್ಪತ್ರೆ ಪರಿಸ್ಥಿತಿ. ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ತಿರುಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಲಂಚಾವತಾರ ಬಯಲಾಗಿದ್ದು, ಇಂಜೆಕ್ಷನ್ ಮಾಡಬೇಕು ಎಂದರೂ ಹಣ ಕೊಡಲೇಬೇಕು. ವೈದ್ಯರು ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು ಹತ್ತು ತಿಂಗಳಿಂದ ಸಂಬಳವಾಗಿಲ್ಲ. ಅದಕ್ಕಾಗಿ ಲಂಚ ಪಡೆಯತ್ತಿದ್ದೇನೆ ಎಂದು ವೈದ್ಯ ನಾಗೇಶ್ ಹೇಳಿದ್ದಾರೆ.

ಆಪರೇಷನ್ ಕಮಲಕ್ಕೆ ಭಯೋತ್ಪಾದಕರಿಂದ ದುಡ್ಡು..? ಕೋರ್ಟ್‌ನಲ್ಲಿ ದೂರು