ಉಡು​ಪಿ: ಸದ್ಯ ಮರಳಿನ ಸಮಸ್ಯೆ ಸುಖಾಂತ್ಯ, ಅಗ್ಗದಲ್ಲಿ, ಸಕಾಲದಲ್ಲಿ ಮರಳು ಲಭ್ಯ

ಕಳೆದ ಎರ​ಡು ವರ್ಷಗಳಿಂದ ಜಿಲ್ಲೆಯಲ್ಲಿ ವಿವಾದಕ್ಕೆ, ಜನರ ಸಂಕಷ್ಟಕ್ಕೆ ಕಾರಣವಾಗಿದ್ದ ಮರಳಿನ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿ ಅವರು ದಿಟ್ಟಹೆಜ್ಜೆ ಇಟ್ಟಿದ್ದು, ಜನರು ಆನ್‌ಲೈನ್‌ ಮೂಲಕ ಮರಳು ಖರೀದಿಸುವ ವ್ಯವಸ್ಥೆ ಆರಂಭಿಸಿದ್ದಾರೆ. ಸೋಮವಾರ ಹಿರಿಯಡ್ಕ ಪಂಚಾಯಿತಿ ಆವರಣದ ಮರಳು ದಾಸ್ತಾನು ಕ್ಷೇತ್ರದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

Sand problem in udupi solved

ಉಡು​ಪಿ(ನ.26): ಕಳೆದ ಎರ​ಡು ವರ್ಷಗಳಿಂದ ಜಿಲ್ಲೆಯಲ್ಲಿ ವಿವಾದಕ್ಕೆ, ಜನರ ಸಂಕಷ್ಟಕ್ಕೆ ಕಾರಣವಾಗಿದ್ದ ಮರಳಿನ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಧಿಕಾರಿ ಅವರು ದಿಟ್ಟಹೆಜ್ಜೆ ಇಟ್ಟಿದ್ದು, ಜನರು ಆನ್‌ಲೈನ್‌ ಮೂಲಕ ಮರಳು ಖರೀದಿಸುವ ವ್ಯವಸ್ಥೆ ಆರಂಭಿಸಿದ್ದಾರೆ. ಸೋಮವಾರ ಹಿರಿಯಡ್ಕ ಪಂಚಾಯಿತಿ ಆವರಣದ ಮರಳು ದಾಸ್ತಾನು ಕ್ಷೇತ್ರದಲ್ಲಿ ಈ ವ್ಯವಸ್ಥೆಗೆ ಚಾಲನೆ ನೀಡಲಾಯಿತು.

ಉಡುಪಿ ನಗರಕ್ಕೆ ನೀರು ಪೂರೈಸುವ ಸುವರ್ಣ ನದಿಯಲ್ಲಿ ತುಂಬಿರುವ ಹೂಳನ್ನು ಖಾಸಗಿ ಗುತ್ತಿಗೆದಾರರಿಂದ ತೆರೆವುಗೊಳಿಸಲಾಗುತ್ತಿದೆ. ಅದರಲ್ಲಿ ದೊರೆತ ಮರಳನ್ನು ಜನರಿಗೆ ಕೈಗೆಟಕುವ (ಒಂದು ಮೆಟ್ರಿಕ್‌ ಟನ್‌ ಮರಳಿಗೆ 550 ರು.) ದರದಲ್ಲಿ ವಿತರಿಸಲಾಗುತ್ತಿದೆ. ಇಲ್ಲಿ ಸುಮಾರು 1 ಲಕ್ಷ ಮೆಟ್ರಿಕ್‌ ಟನ್‌ ಮರಳು ಲಭ್ಯ ಇದೆ. ಜನರು ಇದರ ಉಪಯೋಗಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

ಸುವರ್ಣ ನದಿಯಿಂದ ಮರ​ಳು:

ಈ ವ್ಯವಸ್ಥೆಯ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದ ಶಾಸಕ ಕೆ.ರಘುಪತಿ ಭಟ್‌ ಅವರು, ತಾವು 2 ವರ್ಷಗಳಿಂದ ಮರಳು ಸಮಸ್ಯೆ ಮತ್ತು ಸುವರ್ಣ ನದಿಯಿಂದ ಉಡುಪಿ ನಗರಕ್ಕೆ ನೀರಿನ ಅಭಾವದ ಸಮಸ್ಯೆ ಬಗೆಹರಿಸಲು ನಡೆಸಿ ಹೋರಾಟ ಇದೀಗ ಯಶಸ್ಸು ಆಗಿದೆ. ಸುವರ್ಣ ನದಿಯ ಹೂಳು ತೆಗೆಯಲಾಗುತ್ತಿದೆ, ಅದರಲ್ಲಿದ್ದ ಮರಳನ್ನೂ ಜನರಿಗೆ ಪೂರೈಸಲಾಗುತ್ತಿದೆ ಎಂದಿದ್ದಾರೆ.

ಮುಳುಗುತ್ತಿದ್ದ ಬೋಟ್‌ನಿಂದ ನಾಲ್ವರು ಮೀನುಗಾರರ ರಕ್ಷಣೆ...

ಕಾಪು ಶಾಸಕ ಲಾಲಾಜಿ ಮೆಂಡನ್‌, ತಾ.ಪಂ. ಸದಸ್ಯ ಸಂಧ್ಯಾ ಕಾಮತ್‌, ಬೊಮ್ಮರಬೆಟ್ಟು ಪಂಚಾಯಿತಿ ಅಧ್ಯಕ್ಷೆ ಸವಿತಾ ನಾಯಕ್‌, ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಗಣಿ ಇಲಾಖೆಯ ಹಿರಿಯ ಭೂವಿಜ್ಞಾನ ರಾಂಜಿ ನಾಯಕ್‌, ತಹ​ಸೀ​ಲ್ದಾರ್‌ ಪ್ರದೀಪ್‌ ಕುರ್ಡೆಕರ್‌, ನಗರಸಭಾ ಆಯುಕ್ತ ಆನಂದ ಕಲ್ಲೋಳಿಕರ್‌ ಮುಂತಾದವರಿದ್ದರು.

ಆನ್‌ಲೈನ್‌ನಲ್ಲಿ ಬುಕ್ಕಿಂಗ್‌

ಜನರು ಉಡುಪಿಇಸ್ಯಾಂಡ್‌ ಡಾಟ್‌ ಕಾಮ್‌ (http://udupiesand.com/)ನಲ್ಲಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿ, ತಮಗೆ ಬೇಕಾದಷ್ಟುಮರಳಿಗೆ ಬೇಡಿಕೆ ಸಲ್ಲಿಸಿ, ಸೂಕ್ತ ಮೊತ್ತ ಪಾವತಿಸಬೇಕು. ತಕ್ಷಣ ಅವರ ಮೊಬೈಲಿಗೆ ಅವರಿಗೆ ಬುಕಿಂಗ್‌ ಐಡಿ ಮತ್ತು ಒಟಿಪಿ ಲಭ್ಯವಾಗುತ್ತದೆ. ಅವರು ಬೇಡಿಕೆ ಸಲ್ಲಿಸಿದ ಮರಳು ಲಾರಿಯಲ್ಲಿ ಅವರ ಮನೆ ಬಾಗಿಲಿಗೆ ಬರುತ್ತದೆ, ಲಾರಿ ಚಾಲಕರಿಗೆ ಮೊಬೈಲಿನಲ್ಲಿರುವ ಒಟಿಪಿಯನ್ನು ತೋರಿಸಿದರೆ ಮರಳು ಪೂರೈಕೆ ಮಾಡುತ್ತಾರೆ.

ಇದರಿಂದ ಜನರು ಮರಳಿಗಾಗಿ ಕಚೇರಿಯಿಂದ ಕಚೇರಿಗೆ ಅನಗತ್ಯವಾಗಿ ಓಡಾಡುವ ಗೋಳು ತಪ್ಪಿದೆ. ಅಲ್ಲದೆ ಮರಳು ಗುತ್ತಿಗೆದಾರರು ಮತ್ತು ಲಾರಿ ಮಾಲೀಕರು ಮರಳಿಗೆ ಬೇಕಾಬಿಟ್ಟಿಬೆಲೆ ಏರಿಸುವುದಕ್ಕೂ ಕಡಿವಾಣ ಬಿದ್ದಿದೆ.

ಆ್ಯಪ್‌ ಮೂಲಕ ಡೆಲಿವರಿ

ಸುವರ್ಣ ನದಿಯಿಂದ ತೆಗೆಯಲಾದ ಮರಳನ್ನು ಹಿರಿಯಡ್ಕ ಸ್ಯಾಂಡ್‌ ಯಾರ್ಡ್‌ಗೆ ತಂದು ಸಂಗ್ರಹಿಸಲಾಗುತ್ತಿದೆ. ಅದನ್ನು ಜನರಿಗೆ ಪೂರೈಕೆ ಮಾಡಲು ಜಿಲ್ಲಾಡಳಿತವು ಮರಳು ಗುತ್ತಿಗೆದಾರರಿಗಾಗಿಯೇ ಸ್ಯಾಂಡ್‌ ಬಜಾರ್‌ ಎಂಬ ಆ್ಯಪ್‌ನ್ನು ರಚಿಸಿದೆ. ಜನರು ಆನ್‌ಲೈನ್‌ ನಲ್ಲಿ ಸಲ್ಲಿಸಿದ ಬೇಡಿಕೆ ಗುತ್ತಿಗೆದಾರರಿಗೆ ಈ ಆ್ಯಪ್‌ ಮೂಲಕ ಲಭ್ಯವಾಗುತ್ತದೆ. ಅವರು ಲಾರಿಗಳಿಗೆ ಈ ಬೇಡಿಕೆಯನ್ನು ಹಸ್ತಾಂತರಿಸುತ್ತಾರೆ.

ಈ ಲಾರಿ ಚಾಲಕರು ಸ್ಯಾಂಡ್‌ ಯಾರ್ಡ್‌ ಹೋಗಿ, ಕಂಪ್ಯೂಟರೈಸ್ಡ್‌ ಟ್ರಿಪ್‌ ಶೀಟ್‌ ಪಡೆದು, ಬೇಡಿಕೆಯಷ್ಟುಮರಳನ್ನು ತುಂಬಿಸಿ ಜನರ ಮನೆಗೆ ಹೋಗಿ ಬಾಗಿಲಿಗೆ ಹೋಗುತ್ತಾರೆ. ಅಲ್ಲಿ ಬೇಡಿಕೆ ಸಲ್ಲಿಸಿದವರ ಮೊಬೈಲಿನಲ್ಲಿ ಒಟಿಪಿ ನೋಡಿ, ಸರಿಯಾಗಿದ್ದರೆ ಅವರಿಗೆ ಮರಳನ್ನು ಪೂರೈಕೆ ಮಾಡುತ್ತಾರೆ.

ಗ್ರಾಮಲೆಕ್ಕಿಗ ಹುದ್ದೆಗಳ ನೇಮಕಾತಿ: ಅರ್ಜಿ ಸಲ್ಲಿಸಿ

Latest Videos
Follow Us:
Download App:
  • android
  • ios