Asianet Suvarna News Asianet Suvarna News

ಮಂಗಳೂರು: ಸಿಟಿ ಬಸ್‌ಗಳಲ್ಲಿ ತುಳು ಲಿಪಿ..!

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರ ಮಾಲೀಕತ್ವದ ಗಣೇಶ್‌ ಪ್ರಸಾದ್‌ (ರೂಟ್‌ ನಂ: 27 ) ಎಂಬ ಬಸ್‌ ಇದೀಗ ತುಳುಪಿಲಿಯೊಂದಿಗೆ ಎಲ್ಲರನ್ನು ಆಕರ್ಷಿಸುತ್ತಿದೆ.

Tulu script in Mangalore city bus
Author
Bangalore, First Published Jan 10, 2020, 3:15 PM IST
  • Facebook
  • Twitter
  • Whatsapp

ಮಂಗಳೂರು(ಜ.10): ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಈ ನಿಟ್ಟಿನಲ್ಲಿ ಇದೀಗ ನಗರದಲ್ಲಿ ಓಡುವ ಸಿಟಿ ಬಸ್‌ನಲ್ಲೂ ಬೆಂಬಲ ವ್ಯಕ್ತವಾಗಿದ್ದು, ಇದಕ್ಕೆ ಎಲ್ಲೆಡೆಯಿಂದ ಪ್ರಶಂಸೆ ಕೇಳಿಬರುತ್ತಿದೆ.

ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ ಅವರ ಮಾಲೀಕತ್ವದ ಗಣೇಶ್‌ ಪ್ರಸಾದ್‌ (ರೂಟ್‌ ನಂ: 27 ) ಎಂಬ ಬಸ್‌ ಇದೀಗ ತುಳುಪಿಲಿಯೊಂದಿಗೆ ಎಲ್ಲರನ್ನು ಆಕರ್ಷಿಸುತ್ತಿದೆ. ಸ್ಟೇಟ್‌ಬ್ಯಾಂಕ್‌ ಬಸ್‌ ನಿಲ್ದಾಣದಿಂದ ಅತ್ತಾವರ ಮೂಲಕ ಮಂಗಳಾದೇವಿಗೆ ತೆರಳುವ ಈ ಬಸ್‌ಗೆ ಪೈಂಟಿಂಗ್‌ ಮಾಡುವ ಸಮಯದಲ್ಲಿ ಬಸ್‌ನ ಎರಡೂ ಬದಿಗಳಲ್ಲಿ ಬಸ್‌ನ ಹೆಸರು ಅಥವಾ ರೂಟ್‌ ಬರೆಯುವ ಬದಲಿಗೆ ಅ ದಿಂದ ಅಃ ವರೆಗಿನ ತುಳು ಲಿಪಿ ಬರೆದು, ಪಕ್ಕದಲ್ಲಿಯೇ ಹ್ಯಾಶ್‌ ಟ್ಯಾಗ್‌ ಮುಖೇನ #TuluTo8thSchedule #TuluofficialInKA-KL ಎಂದು ಬರೆಸಲಾಗಿದೆ.

ಜಾಲತಾಣಗಳಲ್ಲಿ ವೈರಲ್‌:

ಕೆಲವು ದಿನಗಳಿಂದ ಬಸ್‌ಗೆ ಪೈಂಟಿಂಗ್‌ ಮಾಡಲಾಗಿದ್ದು, ಈಗ ಪೂರ್ಣಗೊಂಡಿದೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ಬಸ್‌ ಖ್ಯಾತಿ ಪಡೆಯುತ್ತಿದೆ. ಈ ರೀತಿಯ ತುಳು ಭಾಷಾಭಿಮಾನಕ್ಕೆ ಅನೇಕ ಮಂದಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅಂದಹಾಗೆ, ದಿಲ್‌ರಾಜ್‌ ಆಳ್ವ ಅವರ ಬಳಿ ಇದೇ ಸದ್ಯ ಐದು ಸಿಟಿ ಬಸ್‌ ಇದ್ದು, ತಮ್ಮ ಮಾಲೀಕತ್ವದ ಬಸ್‌ಗಳಿಗೆ ಈ ಹಿಂದೆಯೂ ವಿಶೇಷ ಪರಿಕಲ್ಪನೆಯಲ್ಲಿ ಪೈಂಟಿಂಗ್‌ ಮಾಡಿದ್ದರು. ‘ಸ್ವಚ್ಛ ಭಾರತ’, ‘ಸೇವ್‌ ವಾಟರ್‌’ ಸಹಿತ ವಿವಿಧ ಪರಿಕಲ್ಪನೆಯಡಿಯಲ್ಲಿ ಈ ಹಿಂದೆಯೂ ಬಸ್‌ಗಳಲ್ಲಿ ಪೈಂಟಿಂಗ್‌ ಮೂಡಿ ಬಂದಿತ್ತು. ಇದೀಗ ತುಳು ಭಾಷೆಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಈ ರೀತಿ ಬರೆಸಲಾಗಿದೆ. ಇದರೊಂದಿಗೆ ತುಳು ಭಾಷೆಗೆ ಅಧಿಕೃತ ಸ್ಥಾಮಮಾನಕ್ಕೆ ಬೆಂಬಲ ನೀಡಿದಂತಾಗಿದೆ.

ತುಮಕೂರು: ಚಿರತೆ ದಾಳಿಗೆ 3 ಬಲಿ, 40 ಕಡೆ ಬೋನಿಟ್ಟರೂ ನೋ ಯೂಸ್..!

ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು. ಜೊತೆಗೆ ಜನತೆಗೆ ತುಳು ಲಿಪಿಯ ಪರಿಚಯವಾಗಬೇಕು. ಅದೇ ಕಾರಣಕ್ಕೆ ಬಸ್‌ನಲ್ಲಿ ಈ ರೀತಿ ಬರೆಸಲಾಗಿದೆ. ಈ ಹಿಂದೆ ನೀರಿನ ಮಹತ್ವ ಸಾರುವ ಬರೆಹ, ಸ್ವಚ್ಛ ಭಾರತ ಬರೆಹಗಳನ್ನು ಬರೆಸಲಾಗಿತ್ತು ಎಂದು ಬಸ್ ಮಾಲೀಕ ದಿಲ್‌ರಾಜ್‌ ಆಳ್ವ ತಿಳಿಸಿದ್ದಾರೆ.

Follow Us:
Download App:
  • android
  • ios