ಮಂಗಳೂರು(ನ.29): ತುಳುವಿನ ಪ್ರಪ್ರಥಮ ಕ್ಯಾಲೆಂಡರ್‌ ಎಂದೇ ಗುರುತಿಸಿಕೊಂಡಿರುವ ‘ಕಾಲಕೋಂದೆ’ ಇದರ ಏಳನೇ ವರುಷದ ಕ್ಯಾಲೆಂಡರ್‌ ಬಿಡುಗಡೆ ಸಮಾರಂಭ ಗುರುವಾರ ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆಯಿತು.

ಕ್ಯಾಲೆಂಡರ್‌ ಬಿಡುಗಡೆಗೊಳಿಸಿ ಮಾತನಾಡಿದ ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌, ತುಳುವರ ಆಚರಣೆ, ಹಬ್ಬ, ವಿಶಿಷ್ಟತಿಂಗಳು, ಕಾಲದ ಬಗ್ಗೆ ತಿಳಿಸುವ ‘ಕಾಲಕೋಂದೆ’ ನಮ್ಮ ತುಳುವಿನ ಕ್ಯಾಲೆಂಡರ್‌ ಎನ್ನಲು ಹೆಮ್ಮೆ. ಕಳೆದ ಏಳು ವರ್ಷಗಳಿಂದ ಈ ಕ್ಯಾಲೆಂಡರ್‌ ತುಳುನಾಡಿನಾದ್ಯಂತ ಜನತೆಗೆ ತಲುಪುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.

ಭಾಗವತ ಪಟ್ಲ ಸತೀಶ್‌ ಪರ ಬೆಂಗಳೂರು ಯಕ್ಷಾಭಿಮಾಗಳ ಧರಣಿ

ಕಾಲ ಕೋಂದೆ ತುಳುವಿನ ಇತಿಹಾಸದಲ್ಲಿ ಒಂದು ದಾಖಲಾರ್ಹ ಬೆಳವಣಿಗೆ ಹಾಗೂ ಸಾಧನೆಯತ್ತ ಸಾಗುತ್ತಿದೆ. ಈ ಕ್ಯಾಲೆಂಡರ್‌ ತುಳು ತಂತ್ರಾಂಶದ ಹಾಗೆಯೇ ಉಚಿತವಾಗಿ ನೀಡುತ್ತಿರುವ ತುಳು ಲಿಪಿ ಕಲಿಕಾ ಪುಸ್ತಕ, ತುಳು ತರಬೇತಿ ಕಾರ್ಯಕ್ರಮಗಳು ಇತ್ಯಾದಿ ತುಳುವರು ಬಳಸಿ, ತುಳು ಬೆಳೆಸಲಿ ಎಂಬುವುದೇ ಮುಖ್ಯ ಆಶಯವಾಗಿದೆ ಎಂದವರು ಹೇಳಿದ್ದಾರೆ.

ಖಾಸಗಿ ಬಸ್‌ಗಳಲ್ಲಿ ಈಗ ದಿಢೀರ್‌ ತಪಾಸಣೆ..! ಟಿಕೆಟ್ ಇಲ್ಲಾಂದ್ರೆ ಬೀಳುತ್ತೆ ದಂಡ

ತುಳು ತಂತ್ರಾಂಶ ‘ತೌಳವ’ ನಿರ್ಮಾತೃ ಪ್ರವೀಣ್‌ರಾಜ್‌ ಎಸ್‌.ರಾವ್‌ ಮಾತನಾಡಿ, ರಾಷ್ಟ್ರೀಯ ಕಂಪ್ಯೂಟರ್‌ ಸಾಕ್ಷರತಾ ಸಮಿತಿಯು ಕಳೆದ ಹಲವಾರು ವರ್ಷಗಳಿಂದ ತುಳುವಿನ ಬಗೆಗೆ ಅಧ್ಯಯನ, ಸಾಹಿತ್ಯ, ಜಾನಪದ ಸಂಶೋಧನೆ ಇತ್ಯಾದಿ ಕೆಲಸಗಳನ್ನು ಮಾಡುತ್ತಾ ಬರುತ್ತಿದೆ. ಅದರಂತೆ ತುಳುವಿನ ಮುದ್ರಣ ಲಿಪಿಗಳ ವಿನ್ಯಾಸ ಅಳವಡಿಕೆ, ತುಳು ತಂತ್ರಾಂಶ ಹಾಗೂ ಕ್ಯಾಲೆಂಡರ್‌ ವಿನ್ಯಾಸವನ್ನೂ ಮಾಡುತ್ತಿದೆ ಎಂದರು. ಪ್ರಮುಖರಾದ ರಾಮಕೃಷ್ಣ ಉಪ್ಪಳ, ಸತ್ಯಶಂಕರ ಇದ್ದರು.