ಮಂಗಳೂರು (ಫೆ.04): ತುಳು ಸಿನಿಮಾ ಮತ್ತು ಕನ್ನಡ ಕಿರುತೆರೆ ನಟ, ಮಂಗಳೂರಿನ ವಿಜಯ್‌ ಶೋಭಾರಾಜ್‌ ಪಾವೂರು ಅವರು ತಮ್ಮ ಫೇಸ್‌ಬುಕ್‌ನಲ್ಲಿ ಇಂಧನ ಬೆಲೆ ಏರಿಕೆ ವಿರೋಧಿಸಿ ‘ನಮೋ ನಮಗೆ ಮೋಸ, ಪೆಟ್ರೋಲ್‌ ದಗ ದಗ, ಡೀಸೆಲ್‌ ಭಗಭಗ’ ಎಂಬ ಪೋಸ್ಟ್‌ ಹಾಕಿದ್ದರು.

 ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೆಲವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡಿದರೆ ಸರಿ ಇರುವುದಿಲ್ಲ. 

'ಮೋದಿ ಸರ್ಕಾರದಿಂದ ದೇಶವನ್ನು ಖಾಸಗಿಯವರ ಕೈಗಿಡುವ ಹುನ್ನಾರ' ..

ನಿಮ್ಮ ನೂತನ ತುಳು ಸಿನಿಮಾವನ್ನು ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹಲವು ಬೆದರಿಕೆ ಕರೆ ಬೆನ್ನಲ್ಲೇ ಪೋಸ್ಟ್‌ ಡಿಲೀಟ್‌ ಮಾಡಿ ಶೋಭರಾಜ್‌ ಕ್ಷಮೆ ಕೋರಿದ್ದಾರೆ. 

ಕನ್ನಡ ಸೀರಿಯಲ್‌ ಗೀತಾ ಸೇರಿ ಹಲವು ಧಾರಾವಾಹಿಗಳಲ್ಲಿ ಶೋಭರಾಜ್‌ ನಟಿಸುತ್ತಿದ್ದಾರೆ.